ಮುಜಾಫರ್‍ನಗರ, ಏ.19- ಉತ್ತರಪ್ರದೇಶದ ಶೌಮ್ಲಿ ಜಿಲ್ಲೆಯ ಮಹಿಳೆ(22) ಒಬ್ಬಳನ್ನು ನಿನ್ನೆ ಮೂವರು ಯುವಕರು ಲಿಫ್ಟ್ ನೀಡುವ ನೆಪದಲ್ಲಿ ಅಪಹರಿಸಿ ಅತ್ಯಾಚಾರ ಎಸೆಗಿದ್ದಾರೆ.
ಸಂತ್ರಸ್ಥೆಗೆ ಲಿಫ್ಟ್ ಕೊಡುವುದಾಗಿ ಹೇಳಿ ಬೈಕಿನಲ್ಲಿ ಹತ್ತಿಸಿಕೊಂಡು ದುಷ್ಕರ್ಮಿಗಳು ಖಂದರ್ವಾಲಿ ಗ್ರಾಮದ ಕೊಟ್ವಾಳಿ ಪೊಲೀಸ್ ಠಾಣೆ ವ್ಯಾಪ್ತಿ ನಿರ್ಜನ ಪ್ರದೇಶಕ್ಕೆ ಅಪಹರಿಸಿ ಪಿಸ್ತೂಲ್ ತೋರಿಸಿ ಅತ್ಯಾಚಾರ ಎಸೆಗಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯಾಂಕಿನಿಂದ ಹಣ ಪಡೆದು ಔಷಧಿ ತರಲು ಹೋದ ತನ್ನ ಮಗಳಿಗೆ ಲಿಫ್ಟ್ ಕೊಡುವ ನೆಪ ಹೇಳಿ ಈ ಅಮಾನುಷ ಕೃತ್ಯ ಎಸೆಗಿದ್ದಾರೆ ಎಂದು ಮಹಿಳೆಯ ತಾಯಿ ತನ್ನ ದೂರಿನಲ್ಲಿ ಹೇಳಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.