ಬೆಂಗಳೂರು, ಏ.19-ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.68.56ರಷ್ಟು ಮತದಾನ ನಡೆದಿದ್ದು, ಕಳೆದ ಬಾರಿಗಿಂತ ಹೆಚ್ಚಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.80.23ರಷ್ಟು ಮತದಾನವಾಗಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.53.47ರಷ್ಟು ಮತದಾನವಾಗಿದೆ. ಕಳೆದ ಬಾರಿ 14 ಕ್ಷೇತ್ರಗಳಲ್ಲೂ ಶೇ.67.76ರಷ್ಟು ಮತದಾನವಾಗಿತ್ತು.
ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿ ನಿನ್ನೆ ಮತದಾನ ನಡೆದಿದೆ. ಭಾರತದ ಚುನಾವಣಾ ಆಯೋಗ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡಲು ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇದಕ್ಕೆ ಸಂಘ ಸಂಸ್ಥೆಗಳು ಕೂಡ ಸಹಕಾರ ನೀಡಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಆದರೂ ಬೆಂಗಳೂರು ನಗರದ ಮತದಾನದ ಪ್ರಮಾಣ ಕಳೆದ ಬಾರಿಗಿಂತ ಕಡಿಮೆಯಾಗಿದೆ.
ಆದರೆ ಬೆಂಗಳೂರು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ.
ಮತದಾನದ ವಿವರ:
ಕ್ಷೇತ್ರ 2014(ಶೇ) 2019 (ಶೇ)
ಉಡುಪಿಚಿಕ್ಕಮಗಳೂರು 74.56, 75.90
ಹಾಸನ 73.49, 77.16
ದಕ್ಷಿಣ ಕನ್ನಡ 77.15, 77.68
ಚಿತ್ರದುರ್ಗ 66.07, 70.79
ತುಮಕೂರು 72.57, 77.11
ಮಂಡ್ಯ 71.47, 80.23
ಮೈಸೂರು 67.30, 69.30
ಚಾಮರಾಜನಗರ 72.85, 74.12
ಬೆಂಗಳೂರುಗ್ರಾಮಾಂತರ 66.45, 64.07
ಬೆಂಗಳೂರು ಉತ್ತರ 56.53, 54.63
ಬೆಂಗಳೂರು ಕೇಂದ್ರ 55.64, 53.53
ಬೆಂಗಳೂರು ದಕ್ಷಿಣ 55.75, 53.47
ಚಿಕ್ಕಬಳ್ಳಾಪುರ 76.21 76.78
ಕೋಲಾರ 75.51, 76.54
ಒಟ್ಟು 67.76, 68.05