
ಬೆಂಗಳೂರು: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಮುಕ್ತಾಯವಾಗಿದ್ದು, ಕರ್ನಾಟಕದಲ್ಲಿ ಸಂಜೆ 5 ಗಂಟೆಯವರೆಗೆ ಒಟ್ಟಾರೆ ಶೇ.61.84 ರಷ್ಟು ಮತದಾನವಾಗಿದೆ.
ರಾಜ್ಯ ಚುನಾವಣಾ ಆಯೋಗ ಮಾಹಿತಿ ಪ್ರಕಾರ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಶೇ.72.97 ರಷ್ಟು ಮತದಾನ ನಡೆದಿದ್ದರೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ.45.34 ರಷ್ಟು ಮತದಾನ ನಡೆದಿದೆ.
ಶೇಕಡಾವಾರು ಮತದಾನದ ವಿವರ:
ಹಾಸನ 71.20%
ದಕ್ಷಿಣ ಕನ್ನಡ 72.97%
ಚಿತ್ರದುರ್ಗ 61.75 %
ತುಮಕೂರು 70.23%
ಮಂಡ್ಯ 55.11%
ಮೈಸೂರು 61.32%
ಚಾಮರಾಜನಗರ 66.51%
ಬೆಂಗಳೂರು ಗ್ರಾಮಾಂತರ 58.39%
ಬೆಂಗಳೂರು ಉತ್ತರ 48.19%
ಬೆಂಗಳೂರು ಕೇಂದ್ರ 45.34%
ಬೆಂಗಳೂರು ದಕ್ಷಿಣ 49.36 %
ಚಿಕ್ಕಬಳ್ಳಾಪುರ 69.33%
ಕೋಲಾರ 69.99%
ಉಡುಪಿ, ಚಿಕ್ಕಮಗಳೂರು 69.83%