ಅಕ್ಲುಜ್(ಮಹಾರಾಷ್ಟ್ರ), ಏ.17- ಮೋದಿ ಹೆಸರು ಹೊಂದಿರುವ ಎಲ್ಲರೂ ಕಳ್ಳರು ಮತ್ತು ವಂಚಕರು ಎಂದು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಮೋದಿಗಳು ಕಳ್ಳರು ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷರು ಹಿಂದುಳಿದ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಅಕ್ಲುಜ್‍ನಲ್ಲಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಪ್ರಾಮಾಣಿಕ ಮತ್ತು ಜಾಗೃತ ಚೌಕಿದಾರನಾದ ನನ್ನನ್ನು ಚೌಕಿದಾರ್ ಚೋರ್ ಹೈ (ಕಾವಲುಗಾರ ಕಳ್ಳ) ಎಂದು ಟೀಕಿಸುವ ಮೂಲಕ ಇಡೀ ಚೌಕಿದಾರ್ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ರಾಹುಲ್ ವಿರುದ್ಧ ರೊಚ್ಚಿಗೆದ್ದು ದೂರು ಕೂಡ ನೀಡಿದೆ ಎಂದು ಮೋದಿ ಹೇಳಿದರು.
ಈಗ ಮೋದಿ ಹೆಸರಿರುವವರೆಲ್ಲರೂ ಕಳ್ಳರು ಎಂದು ರಾಹುಲ್ ಟೀಕಿಸಿದ್ದಾರೆ. ಇದು ಅವರ ಅತಿರೇಕದ ಪರಮಾವಧಿ ಈ ಮೂಲಕ ಮೋದಿ ಸಮುದಾಯ ಮತ್ತು ಹಿಂದುಳಿದ ವರ್ಗದವರನ್ನು ಅವಮಾನಗೊಳಿಸಿ ಅವರ ಆಕ್ರೋಶಕ್ಕೆ ಒಳಗಾಗಿದ್ದಾರೆ ಎಂದು ಮೋದಿ ಹೇಳಿದರು.
ಈ ನಾಮಧಾರ್(ವಂಶಾಡಳಿತದ ಯುವರಾಜ) ಹೋದ ಕಡೆಯಲ್ಲ ಪ್ರಾಮಾಣಿಕ ಚೌಕಿದಾರರನ್ನು ಟೀಕಿಸುವುದೇ ಏಕೈಕ ಕಾರ್ಯಕ್ರಮವಾಗಿದೆ. ರಾಹುಲ್ ವರ್ತನೆ ದಿನೇ ದಿನೇ ಮೀತಿ ಮೀರುತ್ತಿದೆ ಇದಕ್ಕೆ ಜನರೇ ಅವರಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತಾರೆ ಎಂದರು.
ಮಹಾರಾಷ್ಟ್ರದ ಶರದ್ ಪವಾರ್ ನೇತೃತ್ವದ ಎನ್‍ಸಿಪಿ ಪಕ್ಷದ ವಿರುದ್ಧವು ವಾಗ್ದಾಳಿ ನಡೆಸಿದ ಮೋದಿ ಇವರು ಅತ್ಯಂತ ದುರ್ಬಲ ನಾಯಕರಾಗಿದ್ದಾರೆ. ಚುನಾವಣಾ ಕಣದಿಂದ ರಹಹೇಡಿಯಂತೆ ಓಡಿ ಹೋಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.