ಭಾಲ್ಕಿ ತಾಲೂಕಿನಲ್ಲಿ ನಾಳೆ ಖಂಡ್ರೆ ಪ್ರಚಾರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಗುರುವಾರ ಭಾಲ್ಕಿ ತಾಲೂಕಿನ ಆರು
ಹೋಬಳಿಗಳಲ್ಲಿ ಪ್ರಚಾರ ನಡೆಸಿ, ಮತಯಾಚನೆ ಮಾಡಲಿದ್ದಾರೆ.

ಬೆಳಗ್ಗೆ 9 ಗಂಟೆಗೆ ಮದಕಟ್ಟಿ, ಬೆಳಗ್ಗೆ 11 ಗಂಟೆಗೆ ಖಟಕ ಚಿಂಚೋಳಿ, ಮಧ್ಯಾಹ್ನ 1 ಗಂಟೆಗೆ ಹಲಬರ್ಗಾ, ಸಂಜೆ 4 ಗಂಟೆಗೆ ಭಾತಂಬ್ರಾ, ಸಾಯಂಕಾಲ 6 ಗಂಟೆಗೆ ಮೇಹಕರ್ ಗ್ರಾಮದ ವಿಠಲ್ ಮೊರೆ ಪೆಟ್ರೋಲ್ ಪಂಪ್ ಹತ್ತಿರ ಹಾಗೂ ರಾತ್ರಿ 8 ಗಂಟೆಗೆ ಮೇಹಕರ್-ಅಟ್ಟರ್ಗಾ ಮುಖ್ಯ ರಸ್ತೆ ಮೇಲೆ ಪ್ರಚಾರ ಸಭೆ ನಡೆಯಲಿದೆ.

ಎಲ್ಲ ಹೋಬಳಿ ಮಟ್ಟದ ಪ್ರಚಾರ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಯುವ ಮುಖಂಡ ಪಪ್ಪು ಪಾಟೀಲ್ ಖಾನಾಪುರ ಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ