ತಸ್ಗಾಂ(ಮಹಾರಾಷ್ಟ್ರ), ಏ.17-ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ ಇದನ್ನು ಬೇರ್ಪಡಿಸಲು ಅಥವಾ ಇಬ್ಭಾಗ ಮಾಡಲು ಯಾರಿಗೂ ಸಾಧ್ಯವಿಲ್ಲವೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಭಾರತದಲ್ಲಿ ಇಬ್ಬರು ಪ್ರಧಾನಮಂತ್ರಿಗಳಾಗುದಕ್ಕೂ ಬಿಜೆಪಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಹ ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ತಸ್ಗಾಂನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಬೇಕೆಂಬ ನ್ಯಾಷನಲ್ ಕಾನ್ಪರೆನ್ಸ್ ನಾಯಕ ಒಮರ್ ಅಬ್ದುಲ್ ಸಲಹೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ನೆಲದಲ್ಲಿದ್ದುಕೊಂಡು ಎಲ್ಲ ಸೌಲಭ್ಯ, ಸವಲತ್ತುಗಳನ್ನು ಪಡೆಯುತ್ತಾ, ಪ್ರತ್ಯೇಕತೆ ಬಗ್ಗೆ ಮಾತನಾಡಲು ಅಬ್ದುಲ್ ಅವರಿಗೆ ಯಾವುದೇ ಹಕ್ಕಿಲ್ಲ.
ಕಾಶ್ಮೀರದಲ್ಲೊಬ್ಬರು ಪ್ರಧಾನಿ ಮತ್ತು ದೇಶದ ಉಳಿದ ಭಾಗಕ್ಕೊಬ್ಬರು ಪ್ರಧಾನ ಮಂತ್ರಿಯಾಗಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಶಾ ಸಾರಿದರು.