ಮುಂಬರುವ ವಿಶ್ವಕಪ್‍ಗೆ 15 ಆಟಗಾರರನನೊಳಗೊಂಡ ಆಟಗಾರರನ್ನ ಟೀಂ ಇಂಡಿಯಾವನ್ನ ಬಿಸಿಸಿಐ ಪ್ರಕಟಿಸಿದೆ.
ಮಹಾ ಸಮರದಲ್ಲಿ ವಿರಾಟ್ ತಂಡವನ್ನ ಮುನ್ನಡೆಸಲಿದ್ದು, ಅನುಭವಿ ಆಟಗಾರ ದಿನೇಶ್ ಕಾರ್ತಿಕ್‍ಗೆ ಸ್ಥಾನ ಕಲ್ಪಿಸಲಾಗಿದೆ. ತಂಡಕ್ಕೆ ಕಗ್ಗಂಟಾಗಿದ್ದ ನಾಲ್ಕನೆ ಕ್ರಮಾಂಕದ ಸಮಸ್ಯೆಗೆ ಆಯ್ಕೆ ಮಂಡಳಿ ಕೊನೆಗೂ ಉತ್ತರ ಕೊಟ್ಟಿದೆ. ಸ್ಫೋಟಕ ಬ್ಯಾಟ್ಸ್‍ಮನ್ ಅಂಬಟಿ ರಾಯ್ಡು ಆಯ್ಕೆಯಾಗುತ್ತಾರೆ ಎಂಬ ಕುತೂಹಲವಿತ್ತು.
ಆದರೆ ರಾಯ್ಡು ಅವರನ್ನ ಹೊರಗಿಡಲಾಗಿದೆ. ಈ ಬಾರಿ ವಿಶ್ವಕಪ್ ಆಡುತ್ತಿರುವ ಮಹಾ ಸಮರದಲ್ಲಿ ಆಡುವ ಕೆ.ಎಲ್. ರಾಹುಲ್ ಏಕೈಕ ಕನ್ನಡಿಗರಾಗಿದ್ದಾರೆ.
ಟೀಂ ಇಂಡಿಯಾ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪನಾಯಕ),ಶಿಖರ್ ಧವನ್, ಕೆ.ಎಲ್. ರಾಹುಲ್, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಯಜ್ವಿಂದರ್ ಚಹಲ್, ಕುಲ್‍ದೀಪ್ ಯಾದವ್, ಭುವನೇಶ್ವರ್ ಕುಮಾರ್,ಜಸ್‍ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹ್ಮದ್ ಶಮಿ.