ಲಖನೌ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಉತ್ತರ ಪ್ರದೇಶದ ಲಖನೌ ಲೋಕಸಭಾ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸಿದರು.
ಎರಡನೇ ಬಾರಿಗೆ ಉತ್ತರ ಪ್ರದೇಶದ ರಾಜಧಾನಿ ಲಖನೌ ಕ್ಷೇತ್ರದಿಂದ ಸ್ಪರ್ದಿಸುತ್ತಿರುವ ರಾಜನಾಥ್ ಸಿಂಗ್ ಅವರಿಗೆ ಯಾವುದೇ ಎದುರಾಳಿಗಳಿಲ್ಲ. ವಿಪಕ್ಷಗಳು ಈ ಕ್ಷೇತ್ರದಿಂದ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ.
ಇದೇ ವೇಳೆ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕೂಡ ಜೈಪುರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಇವರಿಗೆ ಯೋಗಗುರು ಬಾಬಾ ರಾಮ್ದೇವ್ ಮತ್ತು ರಾಥೋಡ್ ಪತ್ನಿ ಗಾಯತ್ರಿ ರಾಥೋಡ್ ಸಾಥ್ ನೀಡಿದರು.
ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು 1991 ರಿಂದ 2004ರ ವರೆಗೆ ಐದು ಬಾರಿ ಲಖನೌ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಅವರ ನಿವೃತ್ತಿ ನಂತರ ಲಾಲ್ ಜಿ ಟಂಡನ್ ಅವರು 2009ರಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
2014ರಲ್ಲಿ ರಾಜನಾಥ್ ಸಿಂಗ್ ಅವರು ಘಾಜಿಯಾಬಾದ್ ಕ್ಷೇತ್ರದಿಂದ ಲಖನೌನಿಂದ ಸ್ಪರ್ಧಿಸಿ ಅತಿ ಹೆಚ್ಚು ಸುಮಾರು 3 ಲಕ್ಷ ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು.
14 ಸ್ಥಾನಗಳಿಗೆ ಆರನೇ ಹಂತದ ನಡೆಯುವ ಲೋಕಸಭಾ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಎರಡು ದಿನ ಅವಕಾಶವಿದೆ. ಮೇ 6ರಂದು ಚುನಾವಣೆ ನಡೆಯಲಿದೆ.
Union Home Minister Rajnath Singh files his nomination from Lucknow