ಬೆಂಗಳೂರು, ಏ.16- ದೇಶದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕಿದೆ ಎಂದು ರಾಜ್ಯ ನಿವೃತ್ತ ಮಾಹಿತಿ ಆಯುಕ್ತ ಡಾ.ಶೇಖರ್ ಡಿ.ಸಜ್ಜಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಭಾರತದ 72 ವರ್ಷಗಳ ಇತಿಹಾಸದಲ್ಲಿ ಹಿಂದೆಂದೂ ಕಾಣದ ಬದಲಾವಣೆ ಮೋದಿ ಅವರ ಆಡಳಿದಲ್ಲಿ ಬಂದಿದೆ. ದಶಕಗಳಿಂದ ಪಾಕಿಸ್ತಾನದ ಉಗ್ರರಿಂದ ನಮ್ಮ ಯೋಧರು ಅನುಭವಿಸುತ್ತಿದ್ದ ಸಂಕಷ್ಟಗಳಿಗೆ ಸ್ಪಂದಿಸಿದ ಮೋದಿ ಅವರಿಗೆ ಶ್ಲಾಘನೀಯ. ಹಗಲಿರುಳು ದೇಶದ ಅಭಿವೃದ್ಧಿಗೆ ಯೋಧರಂತೆ ಕೆಲಸ ಮಾಡುತ್ತಿರುವ ಆದರ್ಶ ವ್ಯಕ್ತಿ ಅವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ಜನತೆಗೆ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಭಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತಿರುವ ಮೋದಿ ವಿರುದ್ದ ವಾಕ್ಸಮರ ಮಾಡುತ್ತಿರುವ ಪಕ್ಷಗಳಿಗೆ ಪಾಠ ಕಲಿಸಲಿದ್ದಾರೆ ಎಂದರು.
ಪ್ರಾಮಾಣಿಕ ಪ್ರಜೆಗಳ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಒಕ್ಕೂರಿಲಿನ ಒತ್ತಾಯವಾಗಿದೆ.ಮೋದಿ ಅವರು ದೇಶಕ್ಕಾಗಿ ಶ್ರಮಿಸುತ್ತಿದ್ದು, ಐಷಾರಾಮಿ ಜೀವನ ನಡೆಸುವವರು ಅವರಲ್ಲ ಎಂದು ತಿಳಿಸಿದರು.
ದೇಶವು ಇಂದು ಸಂಕಷ್ಟದಲ್ಲಿದ್ದು, ಮೋದಿ ಮತ್ತೊಮ್ಮೆ ಚುನಾಯಿತರಾಗದೇ ಇದ್ದರೆ ದೇಶ ವಿಭಜನೆ ಆಗುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ಯಾವುದೇ ಪ್ರಯೋಜನವಿಲ್ಲ ಎಂದು ಮಾಹಿತಿ ನೀಡಿದರು.