
ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಪತ್ನಿ ಡಾ.ಗೀತಾ ಖಂಡ್ರೆ ಬಸವಕಲ್ಯಾಣ ತಾಲೂಕಿನ ವಿವಿಧೆಡೆ ಮಂಗಳವಾರ ಪ್ರಚಾರ ನಡೆಸಿದರು
ಐತಿಹಾಸಿಕ ಹ್ರಾಮ ಗೋರ್ಟ್ ಹಾಗೂ ಮುಚಲಂಬ,ಧನೂರ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮನೆ, ಮನೆಗಳಿಗೆ ತೆರಳಿ ಈಶ್ವರ ಖಂಡ್ರೆ ರವರ ಪರವಾಗಿ ಮತ ಯಾಚನೆ ಮಾಡಿದರು.
ಗೋರ್ಟಾ ಐತಿಹಾಸಿಕ ಗ್ರಾಮ. ಇಲ್ಲಿನ ಚರಿತ್ರೆ ಓದಿದವರಿಗೆ ಮೈ ರೋಮಾಂಚನಗೊಳ್ಳುತ್ತದೆ. ಇಂತಹ ಗ್ರಾಮದ ಜನರಿಗೆ ಮೋಸ ಮಾಡುವ ಮೂಲಕ ಬಿಜೆಪಿ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಗೋರ್ಟಾ ದಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಹೇಳಿ ಕಾಮಗಾರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಂದ ಚಾಲನೆ ಕೊಡೊಸಿತು.
ಒಂದು ವರ್ಷದೊಳಗೆ ಕೆಲಸ ಮುಗಿಸುವುದಾಗಿ ಬಿಜೆಪಿ ಹೇಳಿತು. ಆದರೆ ನಾಲ್ಕು ವರ್ಷವಾದರೂ ಕಾಮಗಾರಿ ಮುಗಿಸಿಲ್ಲ. ಬರೀ ಸುಳ್ಳು ಹೇಳುವುದು ಬಿಜೆಪಿಯವರು ಕಾಯಕ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಭಗವಂತ ಅವರು ಗೋರ್ಟಾ ಗ್ರಾಮವನ್ನು ಆದರ್ಶ ಗ್ರಾಮವಾಗಿ ಮಾಡುವುದಾಗಿ ಹೇಳಿ ಇಲ್ಲಿಯವರೆಗೆ ಒಂದು ಸಿಸಿ ರಸ್ತೆ ಮಾಡಲು ಅವರ ಕೈಯಲ್ಲಿ ಆಗಿಲ್ಲ, ಗೋರ್ಟಾ ಗ್ರಾಮ ಒಂದು ಅಭಿವೃದ್ಧಿ ಮಾಡಲು ಆಗಿಲ್ಲ. ಕ್ಷೇತ್ರದಲ್ಲಿ ಇರುವ ಸಾವಿರ ಹಳ್ಳಿ ಹೇಗೆ ಭಗವಂತ ಖೂಬಾ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು
ಶಾಸಕ ಬಿ.ನಾರಾಯಣ ರಾವ್, ಪ್ರಮುಖ ರಾದ ಶಿವಶರಣ ಪಾಟೀಲ್, ಶಿವರಾಜ ನರಶೆಟ್ಟಿ, ಸುನೀಲ್ ಪಾಟೀಲ್, ಶೆಶಿಕಾಂತ ದುರಗೆ, ಅನೀಲಕುಮಾರ, ಪಪ್ಪು ಪಾಟೀಲ್ ಖಾನಾಪುರ ಇತರರು ಇದ್ದರು.