
ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಪತ್ನಿ ಡಾ. ಗೀತಾ ಖಂಡ್ರೆ ಸೋಮವಾರ ಚಿಂಚೋಳಿ ಪಟ್ಟಣದಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.
ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದ ಡಾ.ಗೀತಾ ಖಂಡ್ರೆ, ಕಾಂಗ್ರೆಸ್ ಗೆ ಬೆಂಬಲ ಮೂಲಕ ಈಶ್ವರ ಖಂಡ್ರೆ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಭಾಲ್ಕಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಈಶ್ವರ ಖಂಡ್ರೆ ಅವರಿಗೆ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.
ಕ್ಷೇತ್ರದ ಸಮಗ್ರ ವಿಜನ್ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಗೆಲ್ಲುವ ಕುದರೆ ಎಂದು ತಿಳಿದು ಹೈಕಮಾಂಡ್ ಟಿಕೆಟ್ ನೀಡಿದೆ. ಕ್ಷೇತ್ರದ ಎಲ್ಲೆಡೆ ಸಿಗುತ್ತಿರುವ ಬೆಂಬಲ ಗಮನಿಸಿದರೆ, ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.
ಈ ಬಾರಿ ಮೋದಿ ಹವಾ ನಡೆಯಲ್ಲ. 2014ರಲ್ಲಿ ಸುಳ್ಳು ಭರವಸೆ ನೀಡಿ ಮೋದಿ ಅಧಿಕಾರಕ್ಕೆ ಬಂದರು. ಆದರೆ ಐದು ವರ್ಷಗಳ ಅವಧಿಯಲ್ಲಿ ಮೋದಿ ಸಾಧನೆ ಶೂನ್ಯ. ಈ ಬಾರಿ ಮೋದಿ ಆಟ ನಡೆಯಲ್ಲ. ಈಶ್ವರ ಖಂಡ್ರೆ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖರಾದ ಟಿಂಕು, ಶಿವಕುಮಾರ, ಸಂಗಮೇಶ, ಕಪಿಲ್, ಆನಂದ, ಉಮಾ ಪಾಟೀಲ್ ಅನೀತಾ ಪಾಟೀಲ್ , ಗೌತಮ್ ಪಾಟೀಲ್, ಅಬ್ದುಲ್ ಬಸೀದ್, ಅಮರ, ಪ್ರವೀಣ, ಶ್ರೀನಿವಾಸ, ಶರಣು ಗೌಡಾ, ಶಬೀರ್, ರೆಖಾ ವಿಲಾಸ ಪಾಟೀಲ್, ಪ್ರದಿಪ್ ಶಿಲವಂತ್, ವಿರೆಶ್ ಬೀರದರ್, ಗೌತಮ್ ಪಾಟೀಲ್, ಅಶೋಕ್ ಮಡಿವಾಳ, ಜಗದೀಶ್ ಮಾಲ್ಗಾ, ಉಮೆಶ್ ಕಾಡದಿ, ಗಜನಂದ್, ಸಚಿನ್, ಶಿವಶರಣ್ಣಪಾ ಚಿಟಾ,ಶಿವನಂದ ಪಾಟೀಲ್,ಸಂಜೂಕುಮಾರ್ ರೇಖಾ ವಿಲಾಸ್ ಪಾಟೀಲ್, ಡಾ ವಿಜಯ್ ಲಕ್ಮಿ ಗುದ್ಗೆ ,ಶೀತಲ್ ಚವನ್, ಪಪ್ಪು ಪಾಟೀಲ್ ಖಾನಾಪುರ್, ಸಂಗಮೇಶ ವಲೇ,ಕಪಿಲ್ ಕಲ್ಯಾಣಿ,ಸಂಗಮೇಶ ಹುಣ್ಣುಜೆ,ಸಂತೋಷ್ ಹುಣ್ಣಜೆ, ಶಿವಕುಮಾರ ರಾಜಭವನ್,ಆನಂದ್ ಬಿರಾದಾರ್,ಲೋಕೇಶ್ ಭುರೇ, ಗಿರೀಶ್ ಬಿರಾದಾರ್, ಅನಿಲ್ ಸಾಹುಕಾರ, ಸಂಜು ದೇಶಮುಖ್, ರವಿಕುಮಾರ್,ಚಂದ್ರಕಾಲ್ ಕೋಟಿಗಿ, ರವಿ ಬೋರವೆಲ್, ಗೌತಮ ಪಾಟೀಲ್,ಅಬ್ದುಲ್, ರಮೇಶ್ ಚಿಂಚೋಳಿ, ವಿವೇಕನಂದ್ ಬಸಿದ್,ಅಮರ್ ,ಪವನ್,ಶ್ರೀನಿವಾಸ,ಶರಣಗೌಡ, ಸಬೇರ್, ಇತರರಿದ್ದರು