
ಬಳ್ಳಾರಿ: ಪಂಚರ್ ಹಾಕುವ ಹುಡುಗಿ ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.
ಸೋಮವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊಟ್ಟೂರಿನ ಇಂದು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ 600ಕ್ಕೆ 594 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಓದುವುದರ ಜತೆ-ಜತೆಗೆ ತಮ್ಮ ತಂದೆಯ ಪಂಚರ್ ಶಾಪ್ನಲ್ಲಿ ಕೆಲಸ ಮಾಡಿಕೊಂಡು ಈ ಸಾಧನೆ ಮಾಡಿರುವು ಹೆಮ್ಮೆಯ ಸಂಗತಿಯಾಗಿದೆ.