ಬರೀ ಗೆಲುವುಗಳನ್ನೆ ಕಾಣುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲೂ ಗೆಲುವಿನ ದಂಡ ಯಾತ್ರ ಮುಂದುವರೆಸಿದೆ. ಬಲಿಷ್ಠ ಕೋಲ್ಕತ್ತಾ ವಿರುದ್ಧ ಧೋನಿ ಪಡೆ 5 ವಿಕೆಟ್ಗಳ ರೋಚಕ ಗೆಲುವು ಪಡೆದಿದ್ದು ಹೇಗೆ ನೋಡೋಣ ಬನ್ನಿ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೋಲ್ಕತ್ತಾ ತಂಡಕ್ಕೆ ಎಡಗೈ ಸ್ಪಿನ್ನರ್ ಸ್ಯಾಂಟ್ನರ್ ಆರಂಭದಲ್ಲೆ ಓಪನರ್ ಸುನಿಲ್ ನರೈನ್ ವಿಕೆಟ್ ಪಡೆದು ಶಾಕ್ ಕೊಟ್ರು..
ಕೋಲ್ಕತ್ತಾ ಪಂಕ್ಚರ್ ಮಾಡಿದ ಇಮ್ರಾನ್ ತಾಹೀರ್
ಹನ್ನೊಂದನೇ ಓವರ್ನಲ್ಲಿ ದಾಳಿಗಿಳಿದ ಇಮ್ರಾನ್ ತಾಹೀರ್ 21 ರನ್ ಗಳಿಸಿದ್ದ ನಿತೀಶ್ ರಾಣಾಗೆ ಪೆವಲಿಯನ್ ದಾರಿ ತೋರಿಸಿದ್ರು. ಇದಾದ ಕೆಲವೇ ಹೊತ್ತಿನಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಡಕೌಟ್ ಆದ್ರು.
ಏಕಾಂಗಿ ಹೋರಾಟ ಮಾಡಿ ಅರ್ಧ ಶತಕ ಬಾರಿಸಿದ ಕ್ರಿಸ್ ಲೀನ್
ಐದನೇ ಕ್ರಮಾಂಕದಲ್ಲಿ ಬಂದ ದಿನೇಶ್ ಕಾರ್ತಿಕ್ ಕ್ರಿಕಸ್ ಉತ್ತಮ ಸಾಥ್ ಕೊಟ್ರು. ಕ್ರಿಸ್ ಲೀನ್ ಅಬ್ಬರದ ಬ್ಯಾಟಿಂಗ್ ಮಾಡಿ 36 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು. ಆದರೆ ಈ ಖುಷಿ ಹೆಚ್ಚು ಹೊತ್ತು ಉಳಿಯಲ್ಲಲ್ಲ. 82 ರನ್ ಗಳಿಸಿದ್ದ ಕ್ರಿಸ್ ಲೀನ್ ಇಮ್ರಾನ್ ತಾಹೀರ್ಗೆ ಬಲಿಯಾದ್ರು. ರಸ್ಸೆಲ್ ಕೂಡ ಇಮ್ರಾನ್ ತಾಹೀರ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು.
ನಾಲ್ಕು ಓವರ್ ಬೌಲಿಂಗ್ ಮಾಡಿದ ಇಮ್ರಾನ್ ತಾಹೀರ್ ನಾಲ್ಕು ವಿಕೆಟ್ ಪಡೆದು ಮಿಂಚಿದ್ರು. ಸೂಪರ್ ಸ್ಪೆಲ್ ಮಾಡಿ ಕೇವಲ 27 ರನ್ ಕೊಟ್ರು.
ಕೋಲ್ಕತ್ತಾ ತಂಡ 8 ವಿಕೆಟ್ಗೆ 161 ರನ್
ಕೊನೆಯಲ್ಲಿ ಬಂದ ರಸ್ಸೆಲ್ 10, ಶುಭಮನ್ ಗಿಲ್ 15, ಪಿಯೂಶ್ ಚಾವ್ಲಾ 4 ರನ್, ದಿನೇಶ್ ಕಾರ್ತಿಕ್ 18 ರನ್ ಗಳಿಸಿದ್ರು. ಕೋಲ್ಕತ್ತಾ ತಂಡ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
162 ರನ್ಗಳ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ತಂಡ ಒಳ್ಳೆಯ ಆರಂಭಸಿಗಲಿಲ್ಲ. ಓಪನರ್ಸ್ ಗಳಾದ ಫಾಫ್ ಡುಪ್ಲೇಸಿಸ್ ಮತ್ತು ಫಾಫ್ ಡುಪ್ಲೇಸಿಸ್ ಬೇಗೆನೆ ಪೆವಿಲಿಯನ್ ಸೇರಿದ್ರು.
ಅರ್ಧ ಶತಕ ಬಾರಿಸಿದ ಪವರ್ ಹಿಟ್ಟರ್ ರೈನಾ
ಮಿಡ್ಲ್ ಆರ್ಡರ್ನಲ್ಲಿ ಬಂದ ಅಂಬಟಿ ರಾಯ್ಡು 5, ಕೇದಾರ್ ಜಾಧವ್ 20, ಕ್ಯಾಪ್ಟನ ಧೋನಿ 16 ರನ್ ಗಳಿಸಿದ್ರು. ರೈನಾ 36 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು.
ಅಬ್ಬರಿಸಿ ರೋಚಕ ಗೆಲುವು ತಂದುಕೊಟ್ಟ ಜಡ್ಡು
ಆರನೇ ವಿಕೆಟ್ಗೆ ರೈನಾ ಜೊತೆಗೂಡಿದ ರವೀಂದ್ರ ಜಡೇಜಾ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ರು. ಕೇವಲ 17 ಎಸೆತದಲ್ಲಿ 5 ಬೌಂಡರಿ ಬಾರಿಸಿ 31 ರನ್ ಕಲೆ ಹಾಕಿದ್ರು. ಇನ್ನು ಎರಡು ಎಸೆತ ಬಾಕಿ ಇರುವಂತೆ ಚೆನ್ನೈ ತಂಡ ಗೆಲುವಿನ ನಗೆ ಬೀರಿತು. ಇದರೊಂದಿಗೆ ಧೋನಿ ಪಡೆ ಸತತ ನಾಲ್ಕನೆ ಗೆಲುವು ಪಡೆಯಿತು.