ಶಿಕ್ಷಣ ವ್ಯವಸ್ಥೆ ಕರ್ನಾಟಕದಲ್ಲಿಅತ್ಯುತ್ತಮವಾಗಿದೆ-ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ನೆಲಮಂಗಲ,ಏ.15- ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆಅತ್ಯುತ್ತಮವಾಗಿದ್ದು, ಮಠಮಾನ್ಯಗಳು ಜಾತಿ, ಲಿಂಗ, ಭಾಷೆ ಎಂಬ ಬೇಧವಿಲ್ಲದೆ ಶಿಕ್ಷಣ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಥಿಂಕಕ್ರ್ಸ್ ಪೋರಮ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿನ ಶಿಕ್ಷಣ ಸಂಸ್ಥೆಗಳು ಪಠ್ಯದ ಜೊತೆಗೆ ಕಲೆ-ಸಂಸ್ಕøತಿಗೂ ಒತ್ತು ನೀಡುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಎಂದರು.

ಮೋದಿಯ ಐದು ವರ್ಷಗಳಲ್ಲಿ ಭಾರತ ಹೆಚ್ಚು ಪ್ರಭಾವ ಗಳಿಸಿದೆ. ಪ್ರಪಂಚದ ಎಲ್ಲೆಡೆ ಭಾರತದ ಆರ್ಥಿಕತೆ ಬಗ್ಗೆ ಮಾತನಾಡುವಂತಾಗಿದೆ ಮತ್ತು ಮೋದಿ ನಾಯಕತ್ವದಲ್ಲಿ ದೇಶ ಎಲ್ಲಿಗೆ ಸಾಗುತ್ತಿದೆ  ಎಂದು ನಿಮಗೆ ತಿಳಿದಿದೆ ಎಂದರು.

ಮೋದಿ ಪ್ರಧಾನಿಯಾಗುವ ಮುನ್ನಾ ಹಲವರು ಲೇವಡಿ ಮಾಡಿದ್ದರು. ಮೋದಿ ಗುಜರಾತ್‍ಗೆ ಮಾತ್ರ ಸೀಮಿತ. ದೆಹಲಿ ರಾಜಕೀಯಕ್ಕೆ ಮೋದಿ ನಾಲಾಯಕ್. ಸಂಸದನಾಗುವುಕ್ಕೂ ಮೋದಿ ಅರ್ಹನಲ್ಲಎಂದು ಲೇವಡಿ ಮಾಡುತ್ತಿದ್ದರು. ಆದರೆ ಇಂದು ಇಡೀ ವಿಶ್ವವೇ ಮೋದಿಯನ್ನು ಮೆಚ್ಚಿಕೊಂಡಿದೆ.

ಲೋಕಸಭೆಯಲ್ಲಿಅಧಿಕ ಬಹುಮತ ನಮಗಿದೆ. ದೇಶದಲ್ಲಿ ಬ್ಯಾಂಕಿಂಗ್‍  ಕ್ಷೇತ್ರ ಅಧಿಕವಾಗಿ ಬೆಳೆಯುತ್ತಿದೆ. ಮೊಬೈಲ್ ಮೂಲಕ ನೀವು ಸಾಲ ಪಡೆಯಬಹುದಾಗಿದೆ ಎಂದು ಅವರು ವಿವರಿಸಿದರು.

ಮಹಾಘಟಬಂದನ್‍ನಲ್ಲಿರುವವರು ಕಿತ್ತಾಡಿಕೊಳ್ಳುತ್ತಾರೆ. ಯಾರು ಯಾರಿಗೆ ಬೇಕು ನಾಯಕತ್ವ ಎನ್ನುವ ವಿಚಾರದಲ್ಲಿ ಬಡಿದಾಡಿಕೊಳ್ಳುತ್ತಾರೆ. ಅಂತಹವರು ದಿನದ 18 ಗಂಟೆ ಕೆಲಸ ಮಾಡುವವರಿಗೆ ಹೋಲಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ನಾಯಕರು ಕೇವಲ ಆಧಾರರಹಿತ ಆರೋಪ ಮಾಡುವುದರಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್‍ನ ಸ್ಥಿತಿ ನೀರಿನಿಂದ ಹೊರ ಬಂದ ಮೀನಿನಂತಾಗಿದೆ.

ಅಧಿಕಾರವಿಲ್ಲದೆ ಬದುಕಲು ಕಾಂಗ್ರೆಸ್‍ಗೆ ಆಗುತ್ತಿಲ್ಲಎಂದು ಅವರು ಲೇವಡಿ ಮಾಡಿದರು.

ಸೇನೆಯಲ್ಲಿಅಧಿಕವಾಗಿ ಯುವತಿಯರಿಗೆ ಅವಕಾಶಗಳನ್ನು ನೀಡಲಾಗುವುದು ಎನ್‍ಸಿಸಿ ಹಾಗೂ ಸ್ಕೌಟ್ ವಿಧ್ಯಾರ್ಥಿಗಳು ದೇಶ ಸೇವೆಗೆ ಯಾವ ರೀತಿ ಅವಕಾಶವಿದೆ?
ಎನ್‍ಸಿಸಿ ಹಾಗೂ ಸ್ಕೌಟ್ಸ್ ವಿಧ್ಯಾರ್ಥಿಗಳು ಸೇನೆಗೆ ಸೇರಲು ಮುಕ್ತ ಅವಕಾಶಗಳಿವೆ ಎಂದರು.

ದೇಶದ ಓಳ ನುಸುಳುವವರ ನಿಯಂತ್ರಣ ಮಾಡಲು ಸೇನೆಗೆ ಸಂಪೂರ್ಣ ಶಕ್ತಿ ಇದೆ. ದೇಶದ ಒಳಗಿರುವ ಭಯೋತ್ಪಾದಕರನ್ನು ಸ್ಥಳೀಯ ಪೊಲೀಸರು ನಿಯಂತ್ರಿಸಬೇಕೆಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ