ಚುನಾವಣಾ ಬಂದೋಬಸ್ತ್ ಗಾಗಿ ರಾಜ್ಯಕ್ಕೆ 62 ಕಂಪನಿ ಕೇಂದ್ರ ಪಡೆಗಳು

ಬೆಂಗಳೂರು, ಏ.15 -ಚುನಾವಣಾ ಬಂದೋಬಸ್ತ್ ಗಾಗಿ 62 ಕಂಪನಿ ಕೇಂದ್ರ ಪಡೆಗಳು ಬಂದಿವೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಕಮಲ್‍ಪಂತ್ ತಿಳಿಸಿದ್ದಾರೆ.

ಸಿಆರ್‍ಪಿಎಫ್ 14, ಬಿಎಸ್‍ಎಫ್ 8, ಸಿಐಎಸ್‍ಎಫ್ 21, ಐಟಿಬಿಪಿ 6, ಎಸ್‍ಎಪಿ 13 ಕಂಪನಿಗಳು ಬಂದಿವೆ ಎಂದು ಹೇಳಿದರು.ಚುನಾವಣಾ ಪ್ರಕ್ರಿಯೆ ಆರಂಭದಲ್ಲಿ ಕೆಲವು ಕಂಪನಿಗಳು ಬಂದಿದ್ದವು.ಉಳಿದ ಕಂಪನಿಗಳು ನಿನ್ನೆ ಬಂದಿವೆ ಎಂದು ಅವರು ಹೇಳಿದರು.

ಕೇಂದ್ರ ಪಡೆಗಳ ಜೊತೆ ಕೆಎಸ್‍ಆರ್‍ಪಿ ಮತ್ತು ಡಿಎಆರ್ ಪಟ್ಲೂನ್‍ಗಳನ್ನು ಸಹ ಚುನಾವಣಾ ಬಂದೋಬಸ್ತ್‍ಗಾಗಿ ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿನ ಎಸ್‍ಪಿ, ಹೆಚ್ಚುವರಿ ಎಸ್‍ಪಿ, ಡಿವೈಎಸ್ಪಿ ಹಾಗೂ ಇನ್ಸ್‍ಪೆಕ್ಟರ್‍ಗಳು ಮತದಾನದ ದಿನದಂದು ಗಸ್ತಿನಲ್ಲಿರುತ್ತಾರೆ.ಒಟ್ಟಾರೆ ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸಲು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.

ಇದೇ 18 ರಂದು ಮೊದಲ ಹಂತದ ಚುನಾವಣೆ 14 ಕ್ಷೇತ್ರಗಳಲ್ಲಿ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ