ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಪತ್ನಿ ಡಾ. ಗೀತಾ ಖಂಡ್ರೆ ಭಾನುವಾರ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಇಲ್ಲಿಯ ನೌಬಾದ್, ಯಲ್ಲಾಲಿಂಗ ಕಾಲೋನಿ, ಮಂಗಲಪೇಟ್ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಮನೆ, ಮನೆಗೆ ತೆರಳಿ ಪ್ರಚಾರ ನಡೆದ ಡಾ.ಗೀತಾ ಖಂಡ್ರೆ, ಕ್ಷೇತ್ರದ ಸಮಗ್ರ ವಿಜನ್ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುಸುವ ಮೂಲಕ ದಿಲ್ಲಿಗೆ ಕಳುಹಿಸಿ, ಅವಕಾಶ ಕೊಟ್ಟರು ಕೆಲಸ ಮಾಡದ ಭಗವಂತ ಖೂಬಾ ಗೆ ಮನೆಗೆ ಕಳುಹಿಸಿ ಎಂದು ಹೇಳಿದರು.

ಈ ಬಾರಿ ಮೋದಿ ಹವಾ ನಡೆಯಲ್ಲ. ಈಶ್ವರ ಖಂಡ್ರೆ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾತಿನಲ್ಲಿ ಮನೆ ಕಟ್ಟುವ ಬಿಜೆಪಿಗೆ ಈ ಬಾರಿ ಜನ ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಭಾರಿ ಬಹುಮತದಿಂದ ಆರಿಸಿ ಬರಲುದ್ದಾರೆ ಎಂದು ಹೇಳಿದರು.
ಪಪ್ಪು ಪಾಟೀಲ್ ಖಾನಾಪುರ ಇತರರಿದ್ದರು.






