ಕಠ್ಮಂಡು: ನೇಪಾಳದ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಸುಮಿತ್ ವಿಮಾನ ದುರಂತದಲ್ಲಿ ಮೂವರು ಮೃತಪಟ್ಟು ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಮುಂಜಾನೆ ಪೂರ್ವ ನೇಪಾಳದ ಸೋಲುಂಖುಬು ಜಿಲ್ಲೆ ಖುಂಬು ಪ್ರದೇಶದ ಲೂಕ್ಲಾ ವಿಮಾನ ನಿಲ್ದಾಣದಲ್ಲಿ ಈ ಅಪಘಾತ ಸಂಭವಿಸಿದೆ. ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಚಾಪರ್ ಒಂದಕ್ಕೆ ಡಿಕ್ಕಿ ಹೊಡೆದ ಬಳಿಕ ಈ ಅಪಘಾತ ನಡೆದಿದೆ ಎನ್ನಲಾಗಿದೆ.
ಲೂಕ್ಲಾದಿಂದ ಕಠ್ಮಂಡುವಿಗೆ ಈ ಸುಮಿತ್ ವಿಮಾನ ಪ್ರಯಾಣಿಸುತ್ತಿತ್ತು. ಅಪಘಾತದಲ್ಲಿ ಓರ್ವ ಪೋಲೀಸ್ ಸಿಬ್ಬಂದಿ ಸೇರಿ ನಾಲ್ವರು ಗಾಯಗೊಂಡಿದ್ದು ಅವರನ್ನು ತುರ್ತು ವಿಮಾನದ ಮೂಲಕ ಚಿಕಿತ್ಸೆಗಾಗಿ ಕಠ್ಮಂಡುವಿಗೆ ರವಾನಿಸಲಾಗಿದೆ.
3 killed, 4 injured in Nepal plane crash near Mount Everest