ನಾವು ಹಳ್ಳಿಪಳ್ಳಿಯಲ್ಲಿದ್ದವರು, ಎಂಬಿಪಿ ಹೇಳಿಕೆಯನ್ನು ಪ್ರಸಾದವಾಗಿ ಸ್ವೀಕರಿಸುತ್ತೇನೆ: ಡಿಕೆಶಿ

ಬೆಂಗಳೂರು: ಗೃಹ ಸಚಿವ ಎಂ.ಬಿ ಪಾಟೀಲ್ ದೊಡ್ಡವರು. ನಾವು ಹಳ್ಳಿಪಳ್ಳಿಯಲ್ಲಿದ್ದವರು. ಹೀಗಾಗಿ ಅವರು ಏನ್ ಹೇಳಿದ್ರೂ ನಾವು ಬಹಳ ಸಂತೋಷದಿಂದ ಪ್ರಸಾದ ಎಂದು ಸ್ವೀಕರಿಸುತ್ತೇನೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ದೊಡ್ಡವರು ಏನ್ ಬೇಕಿದ್ರೂ ಮಾತನಾಡಬಹುದು. ನಾವು ಅವರಷ್ಟು ದೊಡ್ಡವರಲ್ಲ. ನಾವು ಹಳ್ಳಿಯಿಂದ ಬಂದಂತಹ ಕಾರ್ಯಕರ್ತರು. ಸುಮ್ನೆ ವ್ಯವಸಾಯ-ಗೀಸಾಯ ಮಾಡಿಕೊಂಡು ಬದುಕುತ್ತಾ ಇದ್ದೇವೆ ಅಂದ್ರು.

ಲೋಕಸಭಾ ಚುನಾವಣೆಯ ಹೊತ್ತಲ್ಲಿ ಇಂತಹ ಹೇಳಿಕೆಗಳು ಪಕ್ಷದ ಮೇಲೆ ಪರಿಣಾಮ ಬೀರಲಿದ್ದು, ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿಗೂ ಈ ಬಗ್ಗೆ ದೂರು ಕೊಡುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷವಾಗುತ್ತದೆ. ಪಕ್ಷ ಒಳ್ಳೆಯದಾಗಬೇಕಿದ್ರೆ ಶಿಸ್ತು ಇರಬೇಕು. ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಮಾರ್ಮಿಕವಾಗಿ ಉತ್ತರಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ