ಬೀದರ್: ಭವ್ಯ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿz್ದÉೀ ಕಾಂಗ್ರೆಸ್. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಸಿಗುತ್ತಿರುವ ಸೌಲಭ್ಯಗಳಿಗೆ ಹಿಂದಿನ ಕಾಂಗ್ರೆಸ್ ಆಡಳಿತವೇ ಕಾರಣ. ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಈಗ ಸುಳ್ಳಿನಾಟ ನಡೆಯದು. ಬಿಜೆಪಿಗೆ ಸೋಲಿಸಿ ಪ್ರಜಾತಂತ್ರ ಗಟ್ಟಿಗೊಳಿಸಬೇಕು ಎಂದು ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಹೇಳಿದರು.
ಔರಾದ್ ತಾಲೂಕಿನ ಠಾಣಾ ಕುಶನೂರ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ಇದಾಗಿದೆ. ಪ್ರಜಾತಂತ್ರ, ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ಗೆ ಗೆಲ್ಲಿಸಬೇಕಿದೆ ಎಂದು ಹೇಳಿದರು.
ಐದು ವರ್ಷದ ಮೋದಿ ದುರಾಡಳಿತದಿಂದÀ ಜನತೆ ಬೇಸತ್ತಿದ್ದಾರೆ. ಪ್ರಜಾತಂತ್ರದ ವ್ಯವಸ್ಥೆ ಬುಡಮೇಲು ಮಾಡಲು, ಸಂವಿಧಾನ ಬದಲಿಸಿ ಜಾತಿ-ಜಾತಿಗಳ ನಡುವೆ ಜಗಳ ಹಚ್ಚಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು.
ಮತ ಕೇಳಲು ಬರುವ ಬಿಜೆಪಿಯವರಿಗೆ ಐದು ವರ್ಷಗಳ ಸಾಧನೆ ಬಗ್ಗೆ ಕೇಳಿ. ಪೆÇಳ್ಳು ಭರವಸೆಗೆ ಜನ ಮೋಸ ಹೋಗಬೇಡಿ. ಈ ಬಾರಿ ಕೈಗೆ ಬೆಂಬಲಿಸಬೇಕು. ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೆ ಹೈ ಲೀಡ್ ಕೊಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಐದು ವರ್ಷ ಅಧಿಕಾರ ನಡೆಸಿದ ಮೋದಿ ಸರ್ಕಾರ ಕೇವಲ ಸುಳ್ಳಿನ ಭರವಸೆ ನೀಡಿ ಜನರಿಗೆ ಮೋಸ ಮಾಡಿದೆ. ಸಂಸದ ಭಗವಂತ ಖೂಬಾ ಅವರು ಕೇಂದ್ರದಿಂದ ಜಿಲ್ಲೆಗೆ ಅನುದಾನ ತಂದು ಪ್ರಗತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಕ್ರೀಡಾ ಸಚಿವ ರಹೀಮ್ ಖಾನ್, ಮಾಜಿ ಶಾಸಕ ಗುಂಡಪ್ಪ ವಕೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಮುಖಂಡರಾದ ವಿಜಯಕುಮಾರ ಕೌಡ್ಯಾಳ, ಮೀನಾಕ್ಷಿ ಸಂಗ್ರಾಮ, ಭೀಮಸೇನರಾವ ಸಿಂಧೆ, ಚರಣ ರಾಠೋಡ್ ಇತರರಿದ್ದರು.
ಔರಾದ್ನಲ್ಲಿ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಶನಿವಾರ ಔರಾದ್ ಹಾಗೂ ಕಮಲನಗರ ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದು. ಬೆಳಗ್ಗೆ ಕಮಲನಗರ, ನಂತರ ಠಾಣಾಕುಶನೂರ, ಸಂತಪುರ, ವಡಗಾಂವ್, ಚಿಂತಾಕಿ, ದಾಬಕಾ, ಏಕಂಬಾ ಹಾಗೂ ರಾತ್ರಿ ಔರಾದ್ನಲ್ಲಿ ಖಂಡ್ರೆ ಬಿರುಸಿನ ಪ್ರಚಾರ ನಡೆಸಿದರು.