ಮಾನವೀಯತೆ ಮೆರೆದ ಡಾ.ಗೀತಾ ಖಂಡ್ರೆ

ಬೀದರ್. ಅಪಘಾತದಲ್ಲಿ ಗಾಯಗೊಂಡು ರಸ್ತೆ ಮೇಲೆ ಬಿದ್ದಿರುವ ವ್ಯಕ್ತಿಗೆ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ ಡಾ.ಗೀತಾ ಖಂಡ್ರೆ ಮಾನವೀಯತೆ ಮೆರೆದಿದ್ದಾರೆ.
ಬೀದರ್ ನಗರದ ಕಿರಣ ಎಂಬಾದ ಗಾಯಳುಗೆ ಆಸ್ಪತ್ರೆಗೆ ಸೇರಿಸಿ ಡಾ.ಗೀತಾ ಮಾನವೀಯತೆ ಮೆರೆದಿದ್ದಾರೆ.

ಶನಿವಾರ ಸಂಜೆ ನಗರದ ನೆಹರು ಕ್ರೀಡಾಂಗಣ ಹತ್ತಿರ ಬೈಕ್ ಮೇಲೆ ಹೋಗುತ್ತಿದ್ದ ಕಿರಣಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಿರಣ ಬೈಕ್ ಮೇಲಿಂದ ಕೆಳಗೆ ಬಿದ್ದು ನರಳಾಡುತ್ತಿದ್ದರು.

ಇದೇ ವೇಳೆ ಇದೇ ರಸ್ತೆ ಮೂಲಕ ಡಾ.ಗೀತಾ ಖಂಡ್ರೆ ಬರುತ್ತಿದ್ದರು. ಅವಘಡ ನಡೆದಿರುವುದನ್ನು ಕಣ್ಣಾರೆ ಕಂಡ ಡಾ.ಗೀತಾ ಖಂಡ್ರೆ ತಮ್ಮ ವಾಹನ ನಿಲ್ಲಿಸಿ ಗಾಯಗೊಂಡ ಕಿರಣಗೆ ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸಕಾಲಕ್ಕೆ ಚಿಕಿತ್ಸೆ ದೊರೆತ ಕಾರಣ ಕಿರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವೇಳೆ ಡಾ. ಗೀತಾ ಖಂಡ್ರೆ ಮಾನವೀಯತೆಗೆ ಹಲವಾರು ಶ್ಲಾಘನೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ