ಆಳಂದ‌ ನನ್ನ ತವರು ಮನೆ ಇದ್ದ ಹಾಗೆ

ಬೀದರ್. ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸಿಗುತ್ತಿರುವ ಜನ ಬೆಂಬಲ ನೋಡಿದರೆ ನನಗೆ ತವರು ಮನೆಗೆ ಬಂದಿರುವ ಭಾವನೆ ಬರುತ್ತಿದೆ ಎಂದು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪತ್ನಿ ಡಾ.ಗೀತಾ ಖಂಡ್ರೆ ಹೇಳಿದರು.

ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಶುಕ್ರವಾರ ವಕೀಲರ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿ ಮಾತನಾಡಿ ಡಾ.ಗೀತಾ ಖಂಡ್ರೆ, ಆಳಂದ ಮತದಾರರು ಸರಳ, ಸಜ್ಜನಿಕೆ ಸ್ವಭಾವದವರು.

ತವರು ಮನೆಯಲ್ಲಿ ಸಿಗುವ ಪ್ರೀತಿ ವಿಶ್ವಾಸ ಹಾಗೂ ಮಮತೆ ಇಲ್ಲಿನ ಜನರು ನೀಡಿತ್ತಿದ್ದಾರೆ. ಇಲ್ಲಿನ ಮತದಾರರಿಗೆ ನಾನು ಋಣಿ ಎಂದು ಹೇಳಿದರು.

ಸುಳ್ಳು ಹೇಳುವುದು ತಮ್ಮ ಬಂಡವಾಳ ಮಾಡಿಕೊಂಡಿರುವ ಬಿಜೆಪಿಗೆ ಅವರ ಮಾತಿಗೆ ಮರಳಾಗಬೇಡಿ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಗೆ ಈ ಬಾರಿ ಜನ ಮನೆಗೆ ಕಳುಹಿಸಲು ನಿರ್ಧರಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಭಾರಿ ಬಹುಮತದಿಂದ ಆರಿಸಿ ಬರಲಿದ್ದಾರೆ ಎಂದು ಹೇಳಿದರು.

ವಕೀಲರ ಸಂಘದ ಬಿ.ವಿ. ಪಾಟೀಲ್ ಮಾತನಾಡಿ, ಡಾ.ಗೀತಾ ಖಂಡ್ರೆ ಅವರು ನಮ್ಮ ಮನೆಯ ಮಗಳಂತೆ. ಅವರ ಓಡಾಟದ ಉತ್ಸಾಹ ನಮಗೆ ಮಾದರಿ. ಈ ಬಾರಿ ಆಳಂದ ಮತದಾರರು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಬಾಬಾ ಸಾಹೇಬ್ ಪಾಟೀಲ್, ಪ್ರಮುಖರಾದ ಇನಾಮದಾರ್, ಚಿಂಚೂರೆ, ಎಸ್.ಎ. ಪಾಟೀಲ್, ಜ್ಯೋತಿ ರೆಡ್ಡಿ, ನಾಗೇಶ, ವಂದನಾಪೂರ್ಣ, ಅರ್ಚನಾ ಪಾಟೀಲ್, ಪುಜಾ ರಮೇಶ, ಗುರುಶರಣ ಪಾಟೀಲ್ ಕೋರಳ್ಳಿ, ಪಪ್ಪು ಪಾಟೀಲ್ ಖಾನಾಪುರ ಇರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ