ಬೀದರ್ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಪರವಾಗಿ ಖಂಡ್ರೆ ಆಪ್ತ, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಪಪ್ಪುಪಾಟೀಲ್ ಖಾನಾಪುರ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಗುರುವಾರ ಆಳಂದ ತಾಲೂಕಿನ ಕೌವಲಗಾ ಹಾಗೂ ಜಿಡಗಾ ಗ್ರಾಮಗಳಲ್ಲಿ ಈಶ್ವರ ಖಂಡ್ರೆ ರವರ ಪರವಾಗಿ ಮನೆ ಮನೆಗೆ ತೆರುಳಿ ಮತ ಯಾಚನೆ ಮಾಡಲಾಯಿತು.
ಈಶ್ವರ ಖಂಡ್ರೆ ಬೀದರ್ ನ ಮಹಾ ಶಕ್ತಿ ಇದ್ದ ಹಾಗೆ. ಇವರ ಶಕ್ತಿ ಎದರು ಎಂಥ ಹವಾ ನಡೆಯುದಿಲ್ಲ. ಹವಾ ಮೇಲೆ ನೆಚ್ಚಿ ಕುಳಿತಿರುವ ಬಿಜೆಪಿಗೆ ಈ ಬಾರಿ ಮುಖಭಂಗವಾಗಲಿದೆ. ಈಶ್ವರ ಖಂಡ್ರೆ ಮಹಾ ಶಕ್ತಿ ಹೇಗಿದೆ ಎನ್ನುವುದು ಮೇ 23ರಂದು ತಿಳಿಯಲಿದೆ ಎಂದರು.
ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಈಶ್ವರ ಖಂಡ್ರೆ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರ ಗೆಲುವಿಗೆ ಅವರು ಮಾಡಿದ ಕೆಲಸಗಳೆ ಶ್ರೀರಕ್ಷೆಯಾಗಲಿವೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಯಾವುದೇ ಕೆಲಸ ಮಾಡಿಲ್ಲ. ಅಭಿವೃದ್ಧಿಯಲ್ಲಿ ಬೀದರ್ ಜಿಲ್ಲೆಯನ್ನು ಭಗವಂತ ಖೂಬಾ ಐದು ವರ್ಷಗಳ ಕಾಲ ಹಿಂದಕ್ಕಕರೆದುಕೊಂಡು ಹೋಗಿದ್ದಾರೆ ಎಂದು ದೂರಿದರು.