ಡೆಸ್ಕ್‌ಟಾಪ್ ಕ್ಯಾಮೆರಾ ಆಫ್ ಮಾಡಲು ಮರೆತ ಪತಿ ; ಪತ್ನಿಯ ಸೆಕ್ಸ್ ವಿಡಿಯೋ ರೆಕಾರ್ಡ್

ಬೀಜಿಂಗ್: ಪತಿ ತನ್ನ ಕಂಪ್ಯೂಟರ್ ಡೆಸ್ಕ್‌ಟಾಪ್ ಕ್ಯಾಮೆರಾ ಆಫ್ ಮಾಡಲು ಮರೆತಿದ್ದು, ಅದರಲ್ಲಿ ಆತನ ಪತ್ನಿಯ ಸೆಕ್ಸ್ ವಿಡಿಯೋ ರೆಕಾರ್ಡ್ ಆದ ಘಟನೆ ಚೀನಾದ ಮುಂಡಾನ್‍ಜಿಹಾಂಗ್‍ನಲ್ಲಿ ನಡೆದಿದೆ.

ಯಂಗ್ ಡೆಸ್ಕ್‌ಟಾಪ್ ಕ್ಯಾಮೆರಾ ಆಫ್ ಮಾಡಲು ಮರೆತ ಪತಿ. ಯಂಗ್ ತನ್ನ ಡೆಸ್ಕ್‌ಟಾಪ್ ನಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ನೋಡಿ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಬಳಿಕ ವೇಶ್ಯವಾಟಿಕೆ ವ್ಯವಾಹಾರ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಕಾನೂನು ಬದ್ಧವಾಗಿ ಈಗ ವಿಚ್ಛೇದನ ಪಡೆದುಕೊಂಡಿದ್ದಾನೆ.

ಆ ದಿನ ನನ್ನ ಕಂಪ್ಯೂಟರ್ ಕ್ಯಾಮೆರಾ ಕೆಟ್ಟು ಹೋಗಿತ್ತು. ಹಾಗಾಗಿ ನಾನು ಅದನ್ನು ಆಫ್ ಮಾಡಿರಲಿಲ್ಲ. ಆದರೆ ಆ ಕ್ಯಾಮೆರಾ ವರ್ಕ್ ಆಗುತ್ತಿತ್ತು. ನನ್ನ ಪತ್ನಿ ನನ್ನ ಆತ್ಮೀಯ ಗೆಳೆಯ ಅಶ್ಲೀಲವಾಗಿ ವರ್ತಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಇಬ್ಬರು ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಯಂಗ್ ಹೇಳಿದ್ದಾನೆ.

ನನ್ನ ಪತ್ನಿ ಹಾಗೂ ನನ್ನ ಗೆಳೆಯ ನಡುವೆ ಅನೈತಿಕ ಸಂಬಂಧ ಇದೆ. ಲಿಯೂ ನನ್ನ ಒಳ್ಳೆಯ ಸ್ನೇಹಿತ ಹಾಗೂ ನನ್ನ ಮನೆಗೆ ಆಗಾಗ ಬರುತ್ತಿದ್ದನು. ನನ್ನ ಮನೆಗೆ ಬಂದ ವೇಳೆ ಆತನಿಗೆ ನನ್ನ ಪತ್ನಿಯ ಪರಿಚಯವಾಗಿದೆ. ಬಳಿಕ ನನ್ನ ಪತ್ನಿ ಲಿಯೂ ಜೊತೆ ಕೆಲಸ ಮಾಡಲು ಶುರು ಮಾಡಿದ್ದಳು ಎಂದು ಯಂಗ್ ಆರೋಪಿಸಿದ್ದಾನೆ.

ಪತಿಯ ಆರೋಪವನ್ನು ಪತ್ನಿ ತಳ್ಳಿ ಹಾಕಿದ್ದಾಳೆ. ಈ ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ದೃಶ್ಯ ಒಂದು ರ್ದುಘಟನೆ ಎಂದು ಯಂಗ್ ಪತ್ನಿ ತಿಳಿಸಿದ್ದಾಳೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ