ಜಾಧವ್ಪುರ್, ಏ. 12- ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಮತದಾರರ ಕೈ ಅಮೂಲ್ಯವಾದದ್ದು , ಆದರೆ ಅವರು ಕೈ ಕುಲುಕಲು ಬಂದರೆ ಗ್ಲೌಸ್ ಧರಿಸುವ ಮೂಲಕ ಮತದಾರರಿಗೆ ಅವಮಾನ ಮಾಡಿರುವ ಘಟನೆ ಜಾಧವ್ಪುರ್ನಲ್ಲಿ ನಡೆದಿದೆ.
ಚಿತ್ರನಟಿ ಹಾಗೂ ರಾಜಕಾರಣಿ ಮಿಮಿ ಚಕ್ರವರ್ತಿ ತೃಣಮೂಲ ಕಾಂಗ್ರೆಸ್ ಪಾರ್ಟಿಯಿಂದ ಜಾಧವ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದು ಚುನಾವಣಾ ಪ್ರಚಾರಕ್ಕೆ ಬಂದ ವೇಳೆ ಸಾರ್ವಜನಿಕರು ಈಕೆಯ ಕೈ ಕುಲುಕು ಮುಂದಾಗಿದ್ದಾರೆ.
ಆ ಸಮಯದಲ್ಲಿ ಜನರ ಕೈ ಸ್ಪರ್ಶದಿಂದ ದೂರವಿರಬೇಕೆಂಬ ಉದ್ದೇಶದಿಂದ ಮಿಮಿ ಚಕ್ರವರ್ತಿ ಗ್ಲೌಸ್(ಗವಸು) ಅನ್ನು ಧರಿಸುವ ಮೂಲಕ ಅವರ ಕೈ ಕುಲುಕುತ್ತಿರುವ ದೃಶ್ಯ ಈಗ ವೈರಲ್ ಆಗಿದೆ.
ಬಿಜೆಪಿ ಖಂಡನೆ:
ಮಿಮಿ ಚಕ್ರವರ್ತಿಯು ಗ್ಲೌಸ್ ಧರಿಸಿ ಸಾರ್ವಜನಿಕರ ಕೈ ಕುಲುಕಿರುವುದು ಮತದಾರರಿಗೆ ಮಾಡಿರುವ ಅವಮಾನವಾಗಿದ್ದು ಇಂತಹವರು ಗೆದ್ದು ಬಂದರೆ ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆಯೇ ಎಂದು ಬಿಜೆಪಿಯ ಮುಖ್ಯಸ್ಥ ಸುರೆಂದರ್ ಪೂನಿಯಾ ತಮ್ಮ ಟ್ವಿಟ್ಟರ್ ಮೂಲಕ ಟೀಕಿಸಿದ್ದಾರೆ.
ಮಿಮಿ ಸ್ಪಷ್ಟನೆ:
ಈ ವಿವಾದ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಿಮಿ ಚಕ್ರವರ್ತಿ ನಾನು ಉಗುರು ಸುತ್ತಿನಿಂದ ಬಳಲುತ್ತಿರುವುದರಿಂದ ಸಾರ್ವಜನಿಕರು ಕೈ ಕುಲುಕಲು ಬಂದಾಗ ಗ್ಲೌಸ್ ಧರಿಸಿಕೊಂಡಿದ್ದೆಯೇ ಹೊರತು ಅವರಿಗೆ ಅವಮಾನ ಮಾಡಲು ದೃಷ್ಟಿಯಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.