ಇಂದು ಕಲರ್ಫುಲ್ ಟೂರ್ನಿ ಐಪಿಎಲ್ನಲ್ಲಿ ಇಂದು ಹೈವೋಲ್ಟೇಜ್ ಕದನ ನಡೆಯಲಿದೆ. ಪಿಂಕ್ ಸಿಟಿ ಜೈಪುರದಲ್ಲಿ ಆತಿಥೇಯ ರಾಜಸ್ತಾನ ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಮೊನ್ನೆಯಷ್ಟೆ ರಾಜಸ್ತಾನ ತಂಡ ಚೆನ್ನೈ ವಿರುದ್ಧ ವಿರೋಚಿತ ಸೋಲು ಕಂಡಿತ್ತು. ಇದೀಗ ಈ ಸೇಡನ್ನ ತೀರಿಸಿಕೊಳ್ಳಲು ರಾಜಸ್ತಾನ ತವರಿನಲ್ಲಿ ಕಾದು ಕುಂತಿದೆ.
ಟೂರ್ನಿಯಲ್ಲಿ 5 ಪಂದ್ಯಗಳ ಪೈಕಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಸಿಹಿ ಕಂಡಿರೋ ರಾಜಸ್ಥಾನ. ಇಂದಿನ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 2ನೇ ಬಾರಿಗೆ ಸೆಣಸಲಿದೆ.. ತವರಿನ ಸವಾಯ್ ಮಾನ್ಸಿಂಗ್ ಸ್ಟೇಡಿಯಂ ಪಂದ್ಯ ನಡೆಯಲಿದ್ದು 2ನೇ ಗೆಲುವಿನ ಮೇಲೆ ರಹಾನೆ ಬಳಗ ಕಣ್ಣಿಟ್ಟಿದೆ..
ಚೆನ್ನೈನ ಚೆಪಾಕ್ ಅಂಗಳದಲ್ಲಿನ ಸೋಲಿನ ಮುಖಭಂಗ ತೀರಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ರಣತಂತ್ರ ರೂಪಿಸಿದೆ. ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿರೋ ಚೆನ್ನೈ ಸೂಪರ್ ಕಿಂಗ್ಸ್ ಇಂದಿನ ಪಂದ್ಯದಲ್ಲಿ ಮತ್ತೆ ರಾಜಸ್ಥಾನ ರಾಯಲ್ಸ್ ತಂಡವನ್ನ ಮಣಿಸೋ ಹುಮ್ಮಸ್ಸಿನಲ್ಲಿದೆ.
ಜೈಪುರದಲ್ಲಿ ಕಿಂಗ್ಸ್ ಎದುರು ಕಿಂಗ್ ಆಗಬೇಕು ರಾಜಸ್ತಾನ..!
ಆರ್ಸಿಬಿ ವಿರುದ್ಧ ಮೊದಲ ಜಯ ದಾಖಲಿಸಿರೋ ರಾಜಸ್ಥಾನ ತವರಿನಲ್ಲಿ 2ನೇ ಜಯದ ಕನವರಿಕೆಯಲ್ಲಿದೆ. ರಾಜಸ್ಥಾನ ತಂಡ ಉತ್ತಮ ಹೋರಾಟ ನಡೆಸುತ್ತಿದ್ರು ಗೆಲುವು ಮಾತ್ರ ಮರಿಚೀಕೆಯಾಗೆ ಉಳಿದಿದೆ. ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ರುಧೋನಿಯ ಅಬ್ಬರಕ್ಕೆ ರಾಜಸ್ಥಾನ್ ಮಂಕಾಗಿತ್ತು. ಚೆನ್ನೈ ತವರಿನ ಅಂಗಳದಲ್ಲಿ ಸೋತಿದ್ರು ತನ್ನ ತವರಿನಲ್ಲಿ ಪುಟಿದೇಳೋ ಆತ್ಮವಿಶ್ವಾಸದಲ್ಲಿ ರಹಾನೆ ಪಡೆಯಿದೆ. ಆರ್ಆರ್ ಬ್ಯಾಟ್ಸ್ಮನ್ಗಳಾದ ಅಜಿಂಕ್ಯಾ ರಹಾನೆ, ಜಾಸ್ ಬಟ್ಲರ್, ಸ್ಟೀವನ್ ಸ್ಮಿತ್, ರಾಹುಲ್ ತ್ರಿಪಾಠಿ ಫಾರ್ಮ್ನಲ್ಲಿದ್ದಾರೆ.
ಇನ್ನೂ ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಡಿಪಾರ್ಟ್ಮೆಂಟ್ ಬಲಿಷ್ಠವಾಗಿದೆ. ರಾಜಸ್ಥಾನ ಟ್ರಂಪ್ ಕಾರ್ಡ್ ಜೋರ್ಫ ಆರ್ಚರ್, ಜೈದೇವ್ ಉನದ್ಕತ್, ಧವಳ್ ಕುಲಕರ್ಣಿ ಎದುರಾಳಿಗ ರನ್ ದಾಹಕ್ಕೆ ಬ್ರೇಕ್ ಹಾಕಬಲ್ಲರು. ಇನ್ನೂ ಆರ್ಸಿಬಿ ಬ್ಯಾಟ್ಸ್ಮನ್ಗಳಿಗೆ ಕಂಟಕವಾಗಿ ಕಾಡಿದ್ದ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್ ಇಂದು ಅದೇ ಮ್ಯಾಜಿಕ್ ಸ್ಪೆಲ್ ಮಾಡಿದ್ರೆ ರಾಜಸ್ಥಾನ ಗೆಲುವು ಸಾಧಿಸೋದ್ರಲ್ಲಿ ಅನುಮಾನವೇ ಇಲ್ಲ..
ಹ್ಯಾಟ್ರಿಕ್ ಗೆಲುವಿನ ಮೇಲೆ ಸೂಪರ್ ಕಿಂಗ್ಸ್ ಕಣ್ಣು
ಟೂರ್ನಿಯಲ್ಲಿ ನಾನು ನಡೆದಿದ್ದೆ ದಾರಿ ಎಂಬ ಲೆಕ್ಕಾಚಾರದಲ್ಲಿರೋ ಚೆನ್ನೈ, ರಾಜಸ್ಥಾನಕ್ಕೆ ಮತ್ತೆ ಶಾಕ್ ನೀಡೋ ಉತ್ಸುಕದಲ್ಲಿದೆ. 6 ಪಂದ್ಯಗಳನ್ನಾಡಿರೋ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ವಿರುದ್ಧ ಬಿಟ್ರೆ ಉಳಿದ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮುಂಬೈ ವಿರುದ್ಧ ಸೋಲಿನ ಬಳಿಕ ಪಂಜಾಬ್, ಕೋಲ್ಕತ್ತಾ ವಿರುದ್ಧ ಗೆದ್ದು ಮತ್ತೆ ಗೆಲುವಿನ ಟ್ರ್ಯಾಕ್ಗೆ ಚೆನ್ನೈ ಮರಳಿದ್ದು, ಹ್ಯಾಟ್ರಿಕ್ ಜಯದ ಕನವರಿಕೆಯಲ್ಲಿದೆ..
ಐಪಿಎಲ್ನಲ್ಲಿ ಡ್ಯಾಡ್ಸ್ ಖ್ಯಾತಿಯ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ಗಳು ಸ್ಥಿರಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಶೇನ್ ವಾಟ್ಸನ್ ಡೆಲ್ಲಿ ವಿರುದ್ಧ ಮಿಂಚಿದ್ದು ಬಿಟ್ರೆ ಹೇಳಿಕೊಳ್ಳುವಂತ ಆಟವಾಡಿಲ್ಲ.. ಅಂಬಾಟಿ ರಾಯುಡು, ರೈನಾ, ಜಾಧವ್, ಸಂಪೂರ್ಣ ವಿಫಲರಾಗಿದ್ದಾರೆ. ಬ್ಯಾಟಿಂಗ್ನಲ್ಲಿ ಫಾಪ್ ಡುಪ್ಲಿಸಿಸ್ ಹಾಗೂ ನಾಯಕ ಧೋನಿ ಅವರನ್ನು ತಂಡ ಹೆಚ್ಚಾಗಿ ಅವಲಂಬಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ಓಟದ ಹಿಂದೆ ಬೌಲರ್ಗಳ ಪಾತ್ರ ಹೆಚ್ಚಿದೆ.. ವೇಗಿ ದೀಪಕ್ ಚಹರ್ ಚೆನ್ನೈ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಚೆನ್ನೈ ಸ್ಪಿನ್ ಅಸ್ತ್ರವಾಗಿರೋ ಹರಭಜನ್ ಸಿಂಗ್, ಇಮ್ರಾನ್ ತಾಹೀರ್ ಜೋಡಿಯ ಮೋಡಿ ಸಖತ್ ಹಾಗೇ ವರ್ಕೌಟ್ ಆಗದೆ.. ಈ ಜೋಡಿ ಮತ್ತೆ ಮ್ಯಾಜಿಕ್ ಮಾಡಿದ್ರೆ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನ ಕನಸು ಭಗ್ನಗೊಳ್ಳೋದು ಗ್ಯಾರೆಂಟಿ..
ಒಟ್ನಲ್ಲಿ ಚೆನ್ನೈ ಮತ್ತು ರಾಜಸ್ತಾನ ಫೈಟ್ ಇದು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಸಿಗೋದು ಗ್ಯಾರಂಟಿಯಾಗಿದೆ