ನವದೆಹಲಿ: ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಶಿವಸೇನಾ ಪ್ರಣಾಳಿಕೆಗೆ 100ಕ್ಕೆ 200 ಅಂಕಗಳನ್ನು ನೀಡಿದೆ. ಇತ್ತೀಚಿಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಿಜೆಪಿಯು ಸಂವಿಧಾನದ ವಿಧಿ 370 ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ,ಹಾಗೂ ರಾಮಮಂದಿರ ನಿರ್ಮಾಣದ ಭರವಸೆಯನ್ನು ನೀಡಿರುವುದಕ್ಕೆ ಎನ್ ಡಿ ಎ ಮೈತ್ರಿಕೂಟದ ಶಿವಸೇನಾ ಮೆಚ್ಚುಗೆಯನ್ನು ಸೂಚಿಸಿದೆ.
ರಾಷ್ಟ್ರದ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು, ರಾಮಮಂದಿರ ನಿರ್ಮಾಣಕ್ಕೆ ಇದು ಕೊನೆಯ ಅವಕಾಶ ಎಂದು ಶಿವಸೇನಾ ಅಭಿಪ್ರಾಯಪಟ್ಟಿದೆ. ಬಿಜೆಪಿಯ ಸಂಕಲ್ಪ ಪತ್ರವು ದೇಶದ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ ಶಿವಸೇನಾದ ಬೇಡಿಕೆಗಳು ಸಹಿತ ಒಳಗೊಂಡಿದೆ.ಆದ್ದರಿಂದ ನಾವು ಬಿಜೆಪಿ ಪ್ರಣಾಳಿಕೆಗೆ 100ಕ್ಕೆ 200 ಅಂಕಗಳನ್ನು ನೀಡುತ್ತೇವೆ ಎಂದು ಶಿವಸೇನಾದ ಮುಖವಾಣಿ ಸಾಮ್ನಾ ಸಂಪಾದಕೀಯ ತಿಳಿಸಿದೆ. ಇದೇ ವೇಳೆ ಕಲಂ 370ನ್ನು ತೆಗೆದುಹಾಕುವುದಕ್ಕೆ ಒಮರ್ ಅಬ್ದುಲ್ಲಾ ಪಿಡಿಪಿ ಮೆಹಬೂಬ್ ಮುಫ್ತಿ ವಿರೋಧ ವ್ಯಕ್ತಪಡಿಸಿರುವುದಕ್ಕೆ ಶಿವಸೇನಾ ಅವರ ವಿರುದ್ಧ ಕಿಡಿ ಕಾರಿದೆ.
ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ, ಕಲಂ 370ಯನ್ನು ತೆಗೆದು ಹಾಕುವುದರ ಜೊತೆಗೆ ಬಡತನದ ನಿರ್ಮೂಲನೆ,ಶಿಕ್ಷಣಕ್ಕೆ ಆಧ್ಯತೆ ನೀಡಿರುವ ವಿಚಾರವಾಗಿ ಶಿವಸೇನಾ ಮೆಚ್ಚುಗೆ ವ್ಯಕ್ತಪಡಿಸಿದೆ.