ಪತಿ ಖೂಬಾ ಪರ ಪತ್ನಿ ಬಿರುಸಿನ ಪ್ರಚಾರ

ಬೀದರ್: ಚಿಂಚೋಳಿ ನಗರದಲ್ಲಿ ಭಾರತಿಯ ಜನತಾ ಪಕ್ಷದ ಅಭ್ಯರ್ಥಿಯಾದ ಸಂಸದರಾದ ಶ್ರೀ. ಭಗವಂತ ಖೂಬಾರವರ ಪರವಾಗಿ ಧರ್ಮಪತ್ನಿಯಾದ ಶ್ರೀಮತಿ. ಶಿಲಾ ಭಗವಂತ ಖೂಬಾರವರು ಇಂದು ಚಿಂಚೋಳಿ ನಗರದಲ್ಲಿ ಪಾದಯಾತ್ರೆ ಮುಖಾಂತರ ಜನತೆಯಲ್ಲಿ ಮತಯಾಚನೆ ಮಾಡಿದರು. ಎಲ್ಲೆಡೆ ಜನರಿಂದ ಗೌರವಪೂರ್ವಕವಾಗಿ ಸ್ವಾಗತ ಮಾಡಿದ್ದಾರೆ.

ಹಾಗೆ ಮುಂಬರುವ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಮತಹಾಕಿ ಮತ್ತೊಮ್ಮೆ ಮೋದಿಜಿಯವರನ್ನ ಪ್ರಧಾನಮಂತ್ರಿಯನ್ನಾಗಿ ಮಾಡಲು ಬಯಸಿರುವುದಾಗಿ ತಿಳಿಸಿದ್ದಾರೆ ಜನತೆ.

ಸಂಸದರು ಸಹ ಯಾವೂದೆ ಅಹಂ ಇಲ್ಲದೆ ಎಲ್ಲರೊಂದಿಗೆ ಹೊಂದಿಕೊಂಡು ಒಬ್ಬ ಸಾಧಾರಣ ವ್ಯಕ್ತಿಯಾಗಿ ಜನತೆಯೊಂದಿಗೆ ಬೆರೆಯುತ್ತಾರೆ, ಆದ್ದರಿಂದ ಈ ಬಾರಿಯೂ ನಮ್ಮ ಮತ ಬಿ.ಜೆ.ಪಿಗೆ ಎನ್ನುತ್ತಿದ್ದಾರೆ ಕ್ಷೇತ್ರದ ಜನತೆ.
ಈ ಸಂದರ್ಭದಲ್ಲಿ ಚಿಂಚೋಳಿ ಮಂಡಲ ಅಧ್ಯಕ್ಷರಾದ ಶ್ರೀ. ಭಿಮಶೇಟ್ಟಿ ಮುರುಡಾ, ಶ್ರೀ. ಲಕ್ಷ್ಮಣ ಅವಂಟಿ, ಮತ್ತು ಪುರಸಭೇ ಸದಸ್ಯರಾದ ಶ್ರೀ. ಸಂತೋಷ ಗಡಂತಿ ಹಾಗೂ ಪಕ್ಷದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ