ಐಪಿಎಲ್ 12ನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರೀ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಸೋಲಿನ ಪ್ರತೀಕಾರ ತೀರಿಸಿಕೊಳ್ಳೇಕೆ ರೋಹಿತ್ ಶರ್ಮಾ ಪಡೆ ಕಾದುಕುಳಿತಿದೆ. ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ ಗೆದ್ದಿರೋ ಪಂಜಾಬ್ ಇಂದೂ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ ಪಡೆಯನ್ನ ಅವ್ರ ಅಂಗಳದಲ್ಲೇ ಸೋಲಿಸೋ ಲೆಕ್ಕಾಚಾರದಲ್ಲಿ ಪ್ರೀತಿ ಹುಡುಗ್ರು ಇದ್ದಾರೆ..
ಟೂರ್ನಿಯಲ್ಲಿ ಆರ್ಸಿಬಿ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಮುಂಬೈ 5 ಪಂದ್ಯಗಳ ಪೈಕಿ 3 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದೆ.. ಇನ್ನೂ ಕಳೆದ ಪಂದ್ಯದಲ್ಲಿ ಬಲಿಷ್ಠ ಸನ್ರೈಸರ್ಸ್ ಹೈದ್ರಾಬಾದ್ ತಂಡವನ್ನು ಮಣಿಸಿರೋ ಮುಂಬೈ ಇಂದು ಪ್ರೀತಿ ಝೀಂಟಾ ಹುಡುಗ್ರನ್ನ ಸೋಲಿಸುವ ಲೆಕ್ಕಾಚಾರದಲ್ಲಿದೆ. 3 ಪಂದ್ಯಗಳನ್ನು ಗೆದ್ದಿದ್ರು ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ಗಳಿಂದ ಹೇಳಿಕೊಳ್ಳೋ ಪ್ರದರ್ಶನ ಕಂಡು ಬಂದಿಲ್ಲ. ನಾಯಕ ರೋಹಿತ್ ಶರ್ಮಾ ಪದೇ ಪದೇ ವಿಫಲವಾಗ್ತಿರೋದು ತಂಡದ ಚಿಂತೆಗೆ ಕಾರಣವಾಗಿದೆ. ಕ್ವಿಂಟನ್ ಡಿ ಕಾಕ್, ಆಲ್ರೌಂಡರ್ ಕೀರನ್ ಪೊಲಾರ್ಡ್, ಪಾಂಡ್ಯಾ ಬ್ರದರ್ಸ್ ಮೇಲೆ ತಂಡ ಹೆಚ್ಚು ಅವಲಂಭಿತವಾಗಿದೆ. ಆದರೆ ಮತ್ತೆ ಲಯ ಕಂಡುಕೊಳ್ಳುವ ತವಕದಲ್ಲಿರುವ ರೋಹಿತ್ ತವರಿನಲ್ಲಿ ವಿಜೃಂಭಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.
ಇನ್ನೂ ಬ್ಯಾಟಿಂಗ್ಗೆ ಹೋಲಿಸಿದ್ರೆ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿ ಕಾಣ್ತಿದೆ.. ಪಂಜಾಬ್ ವಿರುದ್ಧ 176 ರನ್ಗಳ ಟಾರ್ಗೆಟ್ ರಕ್ಷಿಸಿಕೊಳ್ಳಲು ಎಡವಿದ್ದ ಮುಂಬೈ, ಇಂದು ತವರಿನಲ್ಲಿ ಬ್ಯಾಟ್ಸ್ಮನ್ಗಳಿಗೆ ಟಕ್ಕರ್ ಕೊಡಲು ರೆಡಿಯಾಗಿದ್ದಾರೆ. ಸನ್ರೈಸರ್ಸ್ ವಿರುದ್ಧ ಅದ್ಬುತ ದಾಳಿ ಸಂಘಟಿಸಿದ್ದ ಅಲ್ಜಾರಿ ಜೊಸೆಫ್ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.. ಇನ್ನೂ ತಂಡದಲ್ಲಿಆಸಿಸ್ ವೇಗಿ ಜೆಸನ್ ಬೆಹ್ರೆಂಡ್ರಾಫ್, ಜಸ್ಪ್ರೀತ್ ಬೂಮ್ರಾ ತಂಡದ ಪ್ರಮುಖ ಅಸ್ತ್ರಗಳಾಗಿದ್ದಾರೆ.. ಇನ್ನೂ ರಾಹುಲ್ ಚಹರ್ ಮ್ಯಾಜಿಕ್ ಸ್ಪೆಲ್ ಮೂಲಕ ತಂಡಕ್ಕೆ ನೆರವಾಗ್ತಿದ್ದಾರೆ..
ಟೂರ್ನಿಯಲ್ಲಿ 6 ಪಂದ್ಯಗಳ ಪೈಕಿ 4 ಪಂದ್ಯಗಳನ್ನು ಗೆದ್ದಿರೋ ಕಿಂಗ್ಸ್ ಇಲೆವೆನ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದ ಕಿಂಗ್ಸ್ ಇಲೆವೆನ್ ಮತ್ತೆ ಸನ್ ರೈಸರ್ಸ್ ವಿರುದ್ಧ ಗೆದ್ದು ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಮುಂಬೈನಾ ವಾಂಖೆಡೆಯಲ್ಲಿ ಇಂದು ಗೆಲುವಿನ ಲೆಕ್ಕಾಚಾರದೊಂದಿದೆ ಪ್ರೀತಿ ಝೀಂಟಾ ಹುಡುಗ್ರು ಕಣಕ್ಕಿಳಿತೀದ್ದಾರೆ. ಪಂಜಾಬ್ ತಂಡದ ಬ್ಯಾಟಿಂಗ್ ಸೆನ್ಸೇಷನ್ ಕ್ರಿಸ್ ಗೇಲ್ ಫ್ಲಾಪ್ ಆಗ್ತಿರೋದು ತಂಡಕ್ಕೆ ಸ್ವಲ್ಪ ಹಿನ್ನಡೆಯಾಗ್ತಿದೆ. ಮುಂಬೈ ವಿರುದ್ಧದ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಕನ್ನಡಿಗರಾದ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಇಂದೂ ಸಹ ತಮ್ಮ ಬ್ಯಾಟಿಂಗ್ ಖದರ್ ತೋರಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ.. ಸರ್ಫರಾಜ್ ಖಾನ್ ಇತರೆ ಬ್ಯಾಟ್ಸ್ಮನ್ಗಳಿಗೆ ಸಾಥ್ ನೀಡೋ ಮೂಲಕ ತಂಡಕ್ಕೆ ನೆರವಾಗ್ತಿದ್ದಾರೆ. ಇನ್ನೂ ಮಧ್ಯಮಕ್ರಮಾಂಕದ ಬ್ಯಾಟ್ಸ್ಮನ್ಸ್ ಮಿಲ್ಲರ್, ಮನ್ದೀಪ್ ಸಿಂಗ್ ಸಿಡಿದೆದ್ರೆ ಪಂಜಾಬ್ ಗೆಲ್ಲೋದ್ರಲ್ಲಿ ಸಂಶಯವೇ ಇಲ್ಲ..