ಭತ್ತದ ನಾಡು ಗಂಗಾವತಿಯಲ್ಲಿ ಇದೇ 12ರಂದು ಪ್ರಧಾನಿ ಪ್ರಚಾರ

ಗಂಗಾವತಿ, ಏ.9-ಲೋಕಸಭೆ ಚುನಾವಣಾ ಕಣ ರಂಗೇರಿದ್ದು, ಭತ್ತದ ನಾಡು ಗಂಗಾವತಿಯಲ್ಲಿ ಪ್ರಧಾನಿ ನರೇಂದ್ರಮೋದಿ 12ರಂದು ಭರ್ಜರಿ ಪ್ರಚಾರ ನಡೆಸಲಿದ್ದಾರೆ.

ನಗರದ ಶರಣಬಸವೇಶ್ವರ ಕ್ಯಾಂಪ್ ಬಳಿ ಕೆವಿಕೆ (ಕೃಷಿ ವಿಜ್ಞಾನ ಕೇಂದ್ರ) ಎದುರಿನ 30 ಎಕರೆ ಜಾಗದಲ್ಲಿ ವೇದಿಕೆ ಮತ್ತು ಕಾರ್ಯಕರ್ತರಿಗಾಗಿ ಪೆಂಡಾಲ್‍ಹಾಕಲು ಹುಬ್ಬಳ್ಳಿಯ ತಂಡವೊಂದು ಉದ್ದೇಶಿತ ಜಾಗದಲ್ಲಿ ಬೀಡು ಬಿಟ್ಟಿದೆ.10 ಅಡಿ ಎತ್ತರ, 60 ಅಡಿ ಉದ್ದ ಮತ್ತು 40ಅಡಿ ಅಗಲದಲ್ಲಿ ಪೂರ್ವಾಭಿಮುಖವಾಗಿ ವೇದಿಕೆ ಹಾಕಲಾಗುತ್ತಿದೆ.

ವೇದಿಕೆಯಿಂದ 60 ಅಡಿ ಮುಂಭಾಗ ಭದ್ರತಾ ಸಿಬ್ಬಂದಿಗೆ ಕೌಂಟರ್, 700 ಅಡಿ ಉದ್ದ ಗಂಗಾವತಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ರೂಪುರೇಷೆಯ ಮತ್ತು 300 ಅಡಿ ಅಗಲ ಸೇರಿ 2.10 ಲಕ್ಷ ಚದರ ಅಡಿಯಲ್ಲಿ ಕಾರ್ಯಕರ್ತರಿಗೆ ತಂಡ ಕಾರ್ಯಕ್ರಮದ ಜಾಗವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರನ್ ಪರಿಶೀಲಿಸಿದರು.

ವೇದಿಕೆ ನಿರ್ಮಾಣ, ಪೆಂಡಾಲ್, ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.ವೇದಿಕೆ ಹಿಂಭಾಗದಲ್ಲಿ ಮೂರು ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ.ಸಿಎಂ ಸಿಬ್ಬಂದಿ, ಭದ್ರತಾ ಪಡೆಗಾಗಿ ಕಚೇರಿ ವ್ಯವಸ್ಥೆ, ಇಂಟರ್‍ನೆಟ್ ಸೌಲಭ್ಯ, ಪಿಎಂ ವಿಶ್ರಾಂತಿ ಕೊಠಡಿ, ಗ್ರೀನ್‍ರೂಮ್ ಮತ್ತು ಶೌಚಗೃಹ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

ಕೆವಿಕೆ ಮತ್ತು ಎಪಿಎಂಸಿ ಪ್ರಾಂಗಣದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಬಿಜೆಪಿ ಮುಖಂಡರೊಂದಿಗೆ ಪೊಲೀಸ್ ಅಧಿಕಾರಿಗಳು, ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಮುಖಂಡರಾದ ಎಚ್.ಎಸ್.ಗಿರೆಗೌಡ, ಸಂತೋಷ ಕೆಲೋಜಿ, ಶಿವಕುಮಾರ ರಾಯರ ರವಿ ಬಸಾಪಟ್ಟಣ, ನಗರಸಭೆ ಸದಸ್ಯ ಸಿಂಗನಾಳ, ಉಮೇಶ, ರಮೇಶ ನಾಗರಾಜ್ ಚಳಗೇರಿ, ಯಂಕಪ್ಪ ಕಟ್ಟಿಮನಿ, ಉದಯರವಿ, ಡಿವೈಎಸ್‍ಪಿ ಚಂದ್ರಶೇಖರ್ ಮತ್ತಿತರರು ಸಮಾವೇಶದ ಸಿದ್ಧತೆ ಹಾಗೂ ಭದ್ರತೆ ಕುರಿತು ಸಭೆ ನಡೆಸಿದರು.

ಜಾಗ ವೀಕ್ಷಣೆಗೆ ಎಸ್‍ಜಿಪಿ ತಂಡವೊಂದು ಇಂದು ನಗರಕ್ಕೆ ಆಗಮಿಸಲಿದ್ದು, ಸರ್ಕಿಟ್ ಹೌಸ್‍ನಲ್ಲಿ ಬಿಜೆಪಿ ಮುಖಂಡರು, ಪೊಲೀಸರು ಮತ್ತು ವೇದಿಕೆ ನಿರ್ವಹಣೆಗಾರರೊಂದಿಗೆ ಸಭೆ ನಡೆಸಲಿದ್ದಾರೆ. ಐಜಿಪಿ ಸೇರಿ ಮೂರು ಜಿಲ್ಲೆಯ ಎಸ್ಟಿಗಳು ಹಾಗೂ ಭದ್ರತಾ ಸಿಬ್ಬಂದಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮ ಪೂರ್ಣಗೊಳ್ಳುವರಿಗೂ ಎಲ್ಲ ರೀತಿಯಿಂದ ಸಹಕರಿಸಲಾಗುವುದು ಎಂದು ಬಿಜೆಪಿ ಮುಖಂಡರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ