ನಿರ್ದಿಷ್ಟ ಮಾರ್ಗದೊಂದಿಗೆ ದೇಶದ ಅಭಿವೃದ್ಧಿ ನಮ್ಮ ಗುರಿ: ಪ್ರಧಾನಿ ಮೋದಿ

ನವದೆಹಲಿ: ನಿರ್ದಿಷ್ಟ ಗುರಿ, ನಿರ್ದಿಷ್ಟ ಮಾರ್ಗದೊಂದಿಗೆ ದೇಶದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ಸಮಾಜದ ಎಲ್ಲಾ ಕ್ಷೇತ್ರಗಳ ಅಗತ್ಯಗಳನ್ನು ಒಳಗೊಂಡ 75 ಗುರಿಗಳನ್ನು ಪೂರ್ಣಗೊಳಿಸುವ ಭರವಸೆಯೊಂದಿಗೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ 50 ವರ್ಷಗಳಲ್ಲಿ ಪೂರ್ಣಗೊಳಿಸಲಾಗದ ಕೆಲಸಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ಕಳೆದ 5 ವರ್ಷಗಳಲ್ಲಿ ಪೂರ್ಣಗೊಳಿಸಿದೆ. 5 ವರ್ಷಗಳಲ್ಲಿ ಸರ್ಕಾರದ ಆಡಳಿತದಲ್ಲಿ ಸಹಕಾರ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಮ್ಮ ಪಕ್ಷದ ಪ್ರಣಾಳಿಕೆ ಹೊರತರಲು 2-3 ತಿಂಗಳು ನಿರಂತರ ಕೆಲಸ ಮಾಡಲಾಯಿತು. ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವ ಸರ್ಕಾರವೇ ಅಧಿಕಾರದಲ್ಲಿ ಮುಂದುವರಿಯಬಹುದಾದ ಸಾಧ್ಯತೆ ಹೆಚ್ಚಿದೆ ಎನಿಸುತ್ತದೆ. ದೇಶದ ಜನರಿಗೆ ನಾವು ಕಾಲಮಿತಿಯ ಆಧಾರದಲ್ಲಿ ಭರವಸೆಗಳನ್ನು ನೀಡುತ್ತಿದ್ದೇವೆ ಎಂದರು.

2014 ರಿಂದ 2019ರ ವರೆಗಿನ 5 ವರ್ಷಗಳ ಅನುಭವ ನಮಗೆ ಈ ಪ್ರಣಾಳಿಕೆಯನ್ನು ರೂಪಿಸಲು ನೆರವಾಯಿತು. ವಿವಿಧತೆಯಿಂದ ಕೂಡಿದ ನಮ್ಮ ದೇಶದಲ್ಲಿ ಎಲ್ಲಾ ಸ್ತರದ ಜನರ ಬಲವರ್ಧನೆಗೆ ಅನುಕೂಲವಾಗುವಂತೆ ವಿವಿಧ ಹಂತಗಳಲ್ಲಿ ಪ್ರಗತಿ ಸಾಧಿಸಲು ನೆರವಾಗುವಂತೆ ಯೋಜನೆಗಳನ್ನು ರೂಪಿಸಲಾಗಿದೆ. ದೇಶದಲ್ಲಿರುವ ಜಲ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮತ್ತು ದೇಶದ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಪ್ರತ್ಯೇಕ ಜಲಶಕ್ತಿ ಸಚಿವಾಲಯ ಸ್ಥಾಪಿಸಲಾಗುವುದು. 2024ರೊಳಗೆ ಎಲ್ಲರಿಗೂ ಕುಡಿಯುವ ನೀರು ಸಿಗುವಂತೆ ಮಾಡುತ್ತೇವೆ ಎಂದು ಪ್ರಧಾನಿ ತಿಳಿಸಿದರು.

ನಮ್ಮ ಸರ್ಕಾರ 1 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲವನ್ನು ರೈತರಿಗೆ ನೀಡಲಿದೆ. ಜತೆಗೆ ಎಲ್ಲ ರೈತರಿಗೂ 6000 ರೂ. ಪ್ರೋತ್ಸಾಹಧನ ನೀಡಲಿದೆ ಮತ್ತು 60 ವರ್ಷ ಮೀರಿದ ರೈತರಿಗೆ ಪಿಂಚಣಿ ನೀಡಲಾಗುವುದು. 2047ರೊಳಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವಲ್ಲ, ಅಭಿವೃದ್ಧಿ ರಾಷ್ಟ್ರ ಮಾಡುವುದು ನಮ್ಮ ಗುರಿ ಎಂದರು.

ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ಜನರ ಜೀವನ ಮಟ್ಟ ಸುಧಾರಿಸಲು 100 ಲಕ್ಷ ಕೋಟಿ ರೂಪಾಯಿ ನೀಡುವ ಭರವಸೆಯನ್ನು ಪ್ರಧಾನಿ ಘೋಷಿಸಿದ್ದಾರೆ.2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸಲು, ಉತ್ಪಾದನೆ ವಲಯಗಳಿಂದ ಜಿಡಿಪಿಯನ್ನು ಸುಧಾರಿಸಿ ದೇಶದ ರಫ್ತಿನ ವಲಯವನ್ನು ಹೆಚ್ಚಿಸಲು ಪ್ರಣಾಳಿಕೆಯಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದರು.

ಉತ್ತರ ಮತ್ತು ದಕ್ಷಿಣ ಭಾರತೀಯರ ನಡುವಿನ ಅಂತರವನ್ನು ಕಡಿಮೆ ಮಾಡಿ ಸಂಪರ್ಕ ಬೆಸೆಯಲು ನಾವು ಅನೇಕ ವಿಷಯಗಳನ್ನು ಇಲ್ಲಿ ಹೇಳಿದ್ದೇವೆ. ಅಭಿವೃದ್ಧಿಯನ್ನು ಜನರ ಚಳವಳಿಯಾಗಿ ಮಾಡಬೇಕು. ಸ್ವಚ್ಛತೆ ಬಗ್ಗೆ ಹೇಳಲು ಮತ್ತು ಜನರ ಗಮನ ಸೆಳೆಯಲು ಸ್ವಚ್ಛ ಭಾರತ ಹೇಗೆ ಸಹಾಯ ಮಾಡಿತು ಎಂಬುದನ್ನು ನೋಡಬಹುದು ಎಂದು ಮೋದಿ ಹೇಳಿದರು.

ನಮ್ಮ ಸರ್ಕಾರ ನಾಗರಿಕರ ಸಶಕ್ತೀಕರಣಕ್ಕೆ ಮತ್ತು ಬಡವರ ಸಶಕ್ತತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ನಾವು ಯಶಸ್ಸನ್ನು ಕಂಡಿದ್ದೇವೆ. ನಿಖರತೆ ಆಡಳಿತದಲ್ಲಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಿದೆ. 2022ರ ವೇಳೆಗೆ ಭಾರತ ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸಲಿದೆ. 21ನೇ ಶತಮಾನ ಏಷ್ಯಾ ಖಂಡಕ್ಕ ಸೇರಿದ್ದಾಗಿದ್ದು ಅದರ ಮುಂಚೂಣಿ ಭಾರತ ದೇಶ ವಹಿಸಬಾರದೇಕೆ ಎಂದು ಪ್ರಧಾನಿ ಕೇಳಿದರು.

ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ಜನರ ಜೀವನ ಮಟ್ಟ ಸುಧಾರಿಸಲು 100 ಲಕ್ಷ ಕೋಟಿ ರೂಪಾಯಿ ನೀಡುವ ಭರವಸೆಯನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸಲು, ಉತ್ಪಾದನೆ ವಲಯಗಳಿಂದ ಜಿಡಿಪಿಯನ್ನು ಸುಧಾರಿಸಿ ದೇಶದ ರಫ್ತಿನ ವಲಯವನ್ನು ಹೆಚ್ಚಿಸಲು ಪ್ರಣಾಳಿಕೆಯಲ್ಲಿ ಕ್ರಮ ಕೈಗೊಂಡಿದ್ದಾರೆ.

Will Take India On One Mission, One Direction; PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ