ಬೀದರ್. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಔರಾದ್ ತಾಲೂಕಿನ ಹಂದಿಕೇರಾ ಗ್ರಾಮದಲ್ಲಿ ಯುವ ಮುಖಂಡ ಡಾ. ರಾಹುಲ್ ಭೂಮೆ ಪ್ರಚಾರ ನಡೆಸಿದರು.
ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಮತ ಹಾಕುವ ಮೂಲಕ ಅಧಿಕ ಅಂತರದಿಂದ ಗೆಲ್ಲಿಸಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿ ಗೆ ಖಂಡ್ರೆ ಪರಿವಾರದ ಕೊಡುಗೆ ಅಪಾರ. ಬೀದರ್ ನ ಸಮಗ್ರ ಅಭಿವೃದ್ಧಿ ಗೆ ಖಂಡ್ರೆ ಅವರಿಂದ ಮಾತ್ರ ಸಾಧ್ಯ.
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಕ್ಷೇತ್ರದ ಜನತೆ ಅವಕಾಶ ನೀಡಿದರು ಸಹ ವಿಫಲರಾಗುದ್ದಾರೆ. ಹೀಗಾಗಿ ಈ ಬಾರಿ ಯುವಕರ ಕಣ್ಮಣಿಯಾದ ಈಶ್ವರ ಖಂಡ್ರೆ ಅವರಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.