ಬೀದರ, ಏ. 08: ಬೀದರ ಜಿಲ್ಲೆಯ ಶೇ. 95 ಪ್ರತಿಶತ ಮರಾಠ ಸಮಮುದಾಯವರು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಮತದಾನ ಮಾಡುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿಜೆಪಿ ಮುಖಂಡ ಪದ್ಮಾಕರ ಪಾಟೀಲರು ಹೇಳಿದರು.
ಅವರು ಇಂದು ಬೀದರ ನಗರದ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಮರಾಠ ಸಮಾಜದ ಮುಖಂಡರು ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಬಿಜೆಪಿ ಮರಾಠ ಸಮುದಾಯದ ನನಗೆ 2005 ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನ್ನಾಗಿ ಮಾಡಿದ್ದು, 2007 ರಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿದೆ. ಬಾಬುರಾವ ಕಾರಬಾರಿ ಅವರನ್ನು ಸಹ ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿದೆ ಬಿಜೆಪಿ ಪಕ್ಷ ಎಂದರು.
ಈಶ್ವರ ಖಂಡ್ರೆ ಅವರು ಶಾಸಕ ಹಾಗೂ ಜಿಲ್ಲಾ ಉತುವಾರಿ ಸಚಿವರಾಗಿದ್ದಾಗ ಮರಾಠ ಸಮಾಜಕ್ಕೆ ಮಾಡಿದ್ದೇನು? ಈಗ ಲೋಕಸಭೆ ಚುನಾವಣೆಯಲ್ಲಿ ಮರಾಠ ಸಮಾಜದವರ ನೆನಪು ಆಗುತ್ತಿದೆಯೇ? ಮರಾಠ ಸಮಾಜದ ಪರವಾಗಿ ಈಶ್ವರ ಖಂಡ್ರೆ ಅವರಿಗೆ ಇಷ್ಟೊಂದು ಪ್ರೀತಿ ಉಕ್ಕುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.
ಮರಾಠ ಸಮಾಜ ಹಿಂದೆಯೂ ಬಿಜೆಪಿ ಬೆಂಬಲಿಸುತ್ತ ಬಂದಿದೆ. ಮುಂದೆಯೂ ಬೆಂಬಲಿಸುತ್ತದೆ. ಈಶ್ವರ ಖಂಡ್ರೆ ಅವರು ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಲಿಂಗಾಯತ ಮತ್ತು ಮರಾಠ ಸಮಾಜದ ಒಬ್ಬರನ್ನು ಟಿಕೆಟ್ ನೀಡಿಲ್ಲ. ಆಗ ಈಶ್ವರ ಖಂಡ್ರೆ ಅವರಿಗೆ ಮರಾಠ ಸಮಾಜದ ನೆನಪು ಬರಲಿಲ್ಲವೇ? ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕ್ಷೇತ್ರೀಯ ಮರಾಠ ಪರಿಷತ್ತ ಬೀದರ ಜಿಲ್ಲಾಧ್ಯಕ್ಷ ದಿಗಂಬರರಾವ ಮಾನ್ಕರಿ ಅವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಮರಾಠ ಸಮಾಜದ ಬೆಂಬಲ ಇಲ್ಲ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಬೀದರ ಜಿಲ್ಲೆಯ ಮರಾಠ ಸಮಾಜದವರ ಸಂಪೂರ್ಣ ಬೆಂಬಲಿವಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಕಾರದಿಂದ ಆಚರಿಸಲು ನಿರ್ಣಯಕೈಗೊಂಡಿತ್ತು. ಅಲ್ಲದೇ ಬೀದರ ನಗರದ ನೌಬಾದಲ್ಲಿ ಮರಾಠ ಸಮಾಜ ಭವನಕ್ಕೆ 25 ಲಕ್ಷ ರೂ. ಮಂಜೂರು ಮಾಡಲಾಗಿತ್ತು ಎಂದರು. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಮರಾಠ ಸಮಾಜವನ್ನು 2ಎಗೆ ಸೇರಿಸಲು ಈಶ್ವರ ಖಂಡ್ರೆ ಅವರು ಮರಾಠ ಸಮಾಜದ ಪ್ರಮುಖರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಳಿಗೆ ನಿಯೋಗ ಹೋಗಿತ್ತು. ಆದರೆ, ಮುಖ್ಯಮಂತ್ರಿಗಳು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದರು ಎಂದರು.
ಭಾಲ್ಕಿ ಪಟ್ಟಣದ ಶಿವಾಜಿ ಕಾಲೇಜು 25 ವರ್ಷಗಳಿಂದ ಸರ್ಕಾರದ ಅನುದಾನ ಇಲ್ಲದೇ ನಡೆಸಲಾಗಿತ್ತಿತ್ತು. ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು 2013ರಲ್ಲಿ ಶಿವಾಜಿ ಕಾಲೇಜಿಗೆ ಸರ್ಕಾರದ ಮಾನ್ಯತೆ ನೀಡಿದರು. ಆದರೆ, 2014ರಲ್ಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಸರ್ಕಾರ ಅನುದಾನ ಬಿಡುಗಡೆಯಾದಂತೆ ನೋಡಿಕೊಂಡಿದ್ದರು. ಭಾಲ್ಕಿ ತಾಲೂಕಿನಲ್ಲಿ ಬ್ರೀಜ್ ಕಮ್ ಬ್ಯಾರೇಜ್ ಕಾಮಗಾರಿಗಳು ಅಪೂರ್ಣವಿದ್ದ ಕಾರಣ ರೈತರ ಹೊಲಗಳಿಗೆ ನೀರು ಹರಿಯುತ್ತಿಲ್ಲ. ರೈತರ ಹೊಲ-ಗದ್ದೆಗಳಿಗೆ ನೀರು ಹರಿದರೆ, ಭಾಲ್ಕಿ ಕ್ಷೇತ್ರದ ಜನತೆ ಅವರ ಮನೆಯ ಮುಂದೆ ಕೈ ಕಟ್ಟಿ ನಿಲ್ಲುತ್ತಿಲ್ಲ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಾಬುರಾವ ಕಾರಬಾರಿ ಅವರು ಮಾತನಾಡಿ, ಬೀದರ ಜಿಲ್ಲೆಯ 2.5 ಲಕ್ಷ ಮರಾಠ ಮತದಾರರು ಬಿಜೆಪಿಯ ಅಭ್ಯರ್ಥಿ ಭಗವಂತಗ ಖೂಬಾ ಅವರಿಗೆ ಮತದಾನ ಮಾಡಲಿದ್ದಾರೆ. ಇದನ್ನು ಮೇ. 23ರ ಫಲಿತಾಂಶದಂದು ಭಗವಂತ ಖೂಬಾ ಅವರ ಗೆದ್ದ ಬಳಿಕ ಮರಾಠ ಸಮಾಜ ಯಾರಿಗೆ ಬೆಂಬಲಿಸಿದೆ ಎಂಬುದು ತಿಳಿಯಲಿದೆ ಎಂದರು.
ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ಬೀದರ ಜಿಲ್ಲೆಯ ಮರಾಠ ಸಮಾಜದವರಿಗೆ ಏನ್ನನ್ನು ಮಾಡಿಲ್ಲ ಎಂದ ಅವರು, ಸಂಸದ ಭಗವಂತ ಖೂಬಾ ಅವರು ಮರಾಠ ಸಮಾಜ ಆರಾಧ್ಯ ದೇವ ಪಂಡರಪೂರ ವಿಠನ ದರ್ಶನ ಪಡೆಯಲು ಭಕ್ತರಿಗೆ ಅನುಕೂಲವಾಗಲು ಬೀದರದಿಂದ ಪಂಡರಪೂರ, ಕೋಲ್ಹಾಪೂರದ ಜ್ಯೋತಿಬಾ ದರ್ಶನಕ್ಕೆ ಮತ್ತು ಬೀದರದಿಂದ ಕೋಲ್ಹಾಪೂರ ಮತ್ತು ವ್ಯಾಪಾರಿಗಳ ಅನುಕೂಲಕ್ಕಾಗಿ ಬೀದರದಿಂದ ಮುಂಬಯಿಗೆ ರೈಲು ಸಂಚಾರ ಆರಂಭಿಸಿದ್ದಾರೆ ಎಂದರು.
ರಾಮರಾವ ವರವಟ್ಟಿ ಅವರು ಮಾತನಾಡಿ, ಮರಾಠ ಕ್ಷೇತ್ರೀಯ ಸಮಾಜ ಎಂದೆಂದಿಗೂ ಬಿಜೆಪಿ ಜೊತೆ ಇರುತ್ತದೆ. ದೇಶದಲ್ಲಿ ನರೇಂದ್ರ ಮೋದಿ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬೀದರ ಜಿಲ್ಲೆಯ ಮರಾಠ ಸಮಾಜದವರು ಬಿಜೆಪಿಯ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತ ಗೆಲ್ಲಿಸಿಕೊಂಡು ಬರುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಬೀದರ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಲೋಕಸಭಾ ಸದಸ್ಯ ಭಗವಂತ ಖೂಬಾ, ಚುನಾವಣೆ ಸಂಚಾಲಕರಾದ ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈಶ್ವರಸಿಂಗ ಠಾಕೂರ, ಜಯಕುಮಾರ ಕಾಂಗೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾವೂಸಾಬ ಬಿರಾದಾರ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಜಕುಮಾರ ಪಾಟೀಲ ನೇಮತಾಬಾದ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಬಾಬುವಾಲಿ, ಬಿಜೆಪಿ ಔರಾದ ತಾಲೂಕಾ ಘಟಕದ ಅಧ್ಯಕ್ಷ ಸತೀಶ ಪಾಟೀಲ ದಾಬಕಾ, ನಿಲೇಶ ಜಾಧವ ಪ್ರತಾವರಾವ ಪಾಟೀಲ, ಸಂಗಮೇಶ ನಾಶಿಗಾರ ಸೇರಿದಂತೆ ಭಾರತೀಯ ಜನತಾ ಪಾರ್ಟಿಯ ಮರಾಠಾ ಸಮಾಜದ ಮುಖಂಡರು ಹಾಗೂ ಇತರೆ ನಾಯಕರು ಉಪಸ್ಥಿತರಿದ್ದರು ಎಂದು ಬೀದರ ಲೋಕಸಭಾ ಚುನಾವಣೆಯ ಬಿಜೆಪಿ ಘಟಕದ ಮಾಧ್ಯಮ ಸಹ ಸಂಚಾಲಕರಾದ ಶ್ರೀನಿವಾಸ ಚೌಧರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.