ಐಪಿಎಲ್ನಲ್ಲಿ ಅನ್ಲಕ್ಕಿ ಟೀಂ ಅಂದ್ರೆ ಅದು ಆರ್ಸಿಬಿ ಅಂತ ಕಣ್ಣು ಮುಚ್ಚಿ ಹೇಳಬಹುದು. ಯಾಕಂದ್ರೆ ಕಲ್ಲರ್ ಫುಲ್ ಟೂರ್ನಿಯಲ್ಲಿ ಬಲಿಷ್ಠ ತಂಡ ಎಂದೆ ಗುರುತಿಸಿಕೊಂಡು ಬಂದ ಆರ್ಸಿಬಿಗೆ ಕಳೆದ ಹನ್ನೊಂದು ಸೀಸನ್ಗಳಲ್ಲಿ ಪ್ರಶಸ್ತಿ ಗೆಲ್ಲುವ ಅದೃಷ್ಟ ಮಾತ್ರ ಕೂಡಿ ಬಂದಿಲ್ಲ.
ಮೂರು ಬಾರಿ ಫೈನಲ್ ತಲುಪಿದ್ರು ಪ್ರಶಸ್ತಿ ಅನ್ನೋ ಅದೃಷ್ಟ ಲಕ್ಷ್ಮಿ ಕಡೆ ಗಳಿಗೆಯಲ್ಲಿ ಕೈಕೊಟ್ಟು ನಿರಾಸೆ ಅನುಭವಿಸುವಂತೆ ಮಾಡಿತು. ಹೀಗೆ ಆಡಿದ ಹನ್ನೊಂದು ಸೀಸನ್ಗಳಲ್ಲಿ ಪ್ರಶಸ್ತಿ ಗೆಲ್ಲುವ ಅರ್ಹತೆ ಇದ್ರು ಟ್ರೋಫಿಗೆ ಮುತ್ತಿಕ್ಕುವ ಅದೃಷ್ಟ ಮಾತ್ರ ಇನ್ನು ಕೂಡಿ ಬಂದಿಲ್ಲ.
ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಳೆದ ಏಳು ವರ್ಷಗಳಿಂದ ತಂಡವನ್ನ ಮುನ್ನಡೆಸುತ್ತಿದ್ದಾರೆ. ಒಮ್ಮೆ ಮಾತ್ರ ಫೈನಲ್ಗೆ ಕೊಂಡೋಯ್ದಿರುವ ವಿರಾಟ್ ಕೊಹ್ಲಿ ಯಶಸ್ಸಿಗಿಂತ ಬರೀ ವೈಫಲ್ಯಗಳನ್ನೆ ಹೆಚ್ಚು ಅನುಭವಿಸಿದ್ದಾರೆ. ತಂದದಲ್ಲಿ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಇದ್ರು ಕೊಹ್ಲಿ ಮಾತ್ರ ಐಪಿಎಲ್ ಗೆದ್ದಿಲ್ಲ. ಆರ್ಸಿಬಿ ಪ್ರತಿ ಸೀಸನಲ್ಲೂ ಫ್ಲಾಪ್ ಆದ್ರು ಅಭಿಮಾನಿಗಳು ಮಾತ್ರ ಕಡಿಮೆಯಾಗಿಲ್ಲ. ಆರ್ಸಿಬಿಗೆ ಇರುವಷ್ಟು ಅಭಿಮಾನಿಗಳು ಬೇರ್ಯಾವ ತಂಡಗಳಿಗು ಇಲ್ಲ. ಅಷ್ಟರ ಮಟ್ಟಿಗೆ ಅಭಿಮಾನಿಗಳಿದ್ದಾರೆ. ಅಭಿಮಾನಿಗಳು ಪ್ರತಿ ಸೀಸನ್ನಲ್ಲೂ ಈ ಸಲ ಕಪ್ ನಮ್ದೆ ಅಂತಾ ಹೇಳ್ತಾರೆ ಆದ್ರೆ ವಿರಾಟ್ ಪಡೆ ಮಾತ್ರ ಫೈನಲ್ಗೂ ಮುನ್ನವೇ ಟೂನಿರ್ಯಿಂದಲೇ ಹೊರ ಬಿದ್ದಿರುತ್ತಾರೆ.
ಈ ಬಾರಿ ಹೀನಾಯ ಸೋಲುಗಳನ್ನ ಕಂಡ ಆರ್ಸಿಬಿ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೀನಾಯ ಸೋಲು
ಈ ಹಿಂದಿನ ಎಲ್ಲ ಐಪಿಎಲ್ ಸೀಸನ್ಗಳಿಗಿಂತ ಈ ಬಾರಿಯ ಸೀಸನ್ನಲ್ಲಿ ಆರ್ಸಿಬಿ ಹೀನಾಯ ಪ್ರದರ್ಶನ ನೀಡಿದೆ. ಆಡಿದ ಐದು ಪಂದ್ಯಗಳಲ್ಲಿ ಐದು ಪಂದ್ಯಗಳನ್ನ ಸೋತು ಮಣ್ಣು ಮುಕ್ಕಿದೆ. ಈ ಹಿಂದಿನ ಸೀಸನ್ಗಳಿಗಿಂತ ಕಳಪೆ ಪರ್ಫಾಮನ್ಸ್ ಕೊಟ್ಟು ಭಾರೀ ಮುಖಭಂಗ ಅನುಭವಿಸಿದೆ. ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 70 ರನ್ ಗಳಿಸಿ ಮೊದಲ ಪಂದ್ಯದಲ್ಲೆ ಹೀನಾಯವಾಗಿ ಸೋಲು ಕಂಡಿತು.
ಮುಂಬೈ ವಿರುದ್ಧ ನಂಬಲಾಗದ ಸೋಲು
ನಂತರ ತವರಿನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕೊಹ್ಲಿ ಪಡೆಗೆ ಅದೃಷ್ಟ ಕೈಕೊಟ್ಟಿತ್ತು. ಭಾರೀ ಪೈಪೋಟಿ ನೀಡಿದ ಪಂದ್ಯದಲ್ಲಿ ಆರ್ಸಿಬಿ ಚೇಸಿಂಗ್ನಲ್ಲಿ ಎಡವಿತು. ಪಂದ್ಯದ ಕೊನೆಯ ಎಸೆತದಲ್ಲಿ 7 ರನ್ ಬೇಕಿದ್ದಾಗ ಆರ್ಸಿಬಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಕೊನೆಯ ಎಸೆತ ನೋ ಬಾಲ್ ಆಗಿದ್ದನ್ನ ಅಮಪೈರ್ ಗಮನಿಸದೇ ಇದ್ದಿದ್ದು ಅರ್ಸಿಬಿ ಸೋಲಿಗೆ ಕಾರಣವಾಯಿತು.
ಸನ್ರೈಸರ್ಸ್ ವಿರುದ್ಧ ವಿರುದ್ಧ ಅಪಜಯ
ಇದಾದ ನಂತರ ಮೂರನೇ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧವೂ ಹೀನಾಯವಾಗಿ ಸೋಲು ಕಂಡಿತು. ಟಾಸ್ ಗೆದ್ದ ಹೊರತಾಗಿಯೂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಸನ್ರೈಸರ್ಸ್ ನೀಡಿದ 231 ರನ್ಗಳನ್ನ ಬೆನ್ನತ್ತಲಾಗದೇ ಕೇವಲ 113 ರನ್ಗಳಿಗೆ ಆಲೌಟ್ ಆಯಿತು ಇದರೊಂದಿಗೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿತು.
ರಾಜಸ್ತಾನ ವಿರುದ್ಧ ವಿರೋಚಿತ ಸೋಲು
ಹೋಗಲಿ ಮೂರು ಸೋಲಿನ ನಂತರವಾದ್ರು ಆರ್ಸಿಬಿ ಎಚ್ಚೆತ್ತುಕೊಳ್ಳೇಕಾಗಿದ್ದ ವಿರಾಟ್ ಪಡೆ ನಾಲ್ಕನೆ ಪಂದ್ಯದಲ್ಲೂ ಎಡವಿಬಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 158 ರನ್ ಕಲೆ ಹಾಕಿತು. ಕ್ಯಾಪ್ಟನ್ ಕೊಹ್ಲಿ ಮತ್ತು ತಂಡದ ಆಟಗಾರರು ಕೆಟ್ಟದಾಗಿ ಫೀಲ್ಡಿಂಗ್ ಮಾಡಿ ಪಂದ್ಯವನ್ನ ಕೈಚೆಲ್ಲಿದ್ರು.
ಕೋಲ್ಕತ್ತಾ ವಿರುದ್ಧ ಮರೆಯಲಾದ ಸೋಲು
ಆಡಿದ ನಾಲ್ಕು ಪಂದ್ಯಗಳನ್ನ ಸೋತಿದ್ದಾಯಿತು. ಇನ್ನಾದ್ರು ಗೇಮ್ ಪ್ಲಾನ್ ಚೇಂಜ್ ಮಾಡಿ ಐದನೇ ಪಂದ್ಯದಲ್ಲಿ ತವರಿನಲ್ಲಿ ಕೋಲ್ಕತ್ತಾ ವಿರುದ್ಧ ಕಣಕ್ಕಿಳಿದ ಆರ್ಸಿಬಿ ಚೆನ್ನಾಗಿ ಬ್ಯಾಟಿಂಗ್ ಮಾಡಿತ್ತಾದ್ರು. ರಸ್ಸೆಲ್ ಅಬ್ಬರಕ್ಕೆ ತತ್ತರಿಸಿ ಮತ್ತೆ ಸೋಲು ಕಂಡಿತು. ಇದರೊಂದಿಗೆ ಟೂರ್ನಿಯಲ್ಲಿ ಸತತ ಐಸು ಸೋಲುಗಳನ್ನ ಕಂಡಿತು.
ಆರ್ಸಿಬಿ ಸೋಲನ್ನ ಕಂಡಿರುವ ಅಭಿಮಾನಿಗಳು ಈ ಸಲ್ ಕಪ್ ಗೆಲ್ಲೋದಿರಲಿ ಒಂದು ಪಂದ್ಯವನ್ನಾದ್ರು ಗೆದ್ದು ಬನ್ನಿ ಅಂತ ಬೇಸರದಿಂದ ಹೇಳುತ್ತಿದ್ದಾರೆ. ಇಂದು ತವರಿನಲ್ಲಿ ಡೆಲ್ಲಿ ವಿರುದ್ಧ ನಡೆಯುವ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಗೆಲುವಿನ ಖಾತೆ ತೆರೆಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.