ಆಮ್ರೋಹ: ಉಗ್ರರ ವಿರುದ್ಧ ಭಾರತ ಕ್ರಮ ಕೈಗೊಂಡರೆ ಇಲ್ಲಿನ ಕೆಲವರು ನಿದ್ರೆ ಕಳೆದುಕೊಳ್ಳುತ್ತಾರೆ; ಭಯೋತ್ಪಾದಕರಿಗೆ ಅವರದ್ದೇ ಆದ ಭಾಷೆಯಲ್ಲಿ ಉತ್ತರ ನೀಡುವುದನ್ನು ದೇಶದಲ್ಲಿನ ಕೆಲವರು ಇಷ್ಟಪಡುವುದಿಲ್ಲ, ಉಗ್ರರ ಮೇಲೆ ಕೆಲವರು ಮೃಧು ಧೋರಣೆ ಹೊಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಆಮ್ರೋಹದಲ್ಲಿ ಮಾತನಾಡಿದ ಪ್ರಧಾನಿ ಮೋದಿ ,ಭಯೋತ್ಪಾದಕರಿಗೆ ನಾವು ತಿರುಗೇಟು ನೀಡಿದಾಗ ವಿರೋಧ ಪಕ್ಷಗಳು ಅವರ ಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ ಮತ್ತು ಆ ಮೂಲಕ ದೇಶದ ಜನರ ಬದುಕು ಮತ್ತು ಭವಿಷ್ಯವನ್ನು ಅವರು ಅಪಾಯಕ್ಕೆ ಸಿಲುಕಿಸುತ್ತಾರೆ ಎಂದು ಆರೋಪಿಸಿದರು.
ಭಯೋತ್ಪಾದಕರ ದಾಳಿಯ ಬಳಿಕ ನಾನು ಸುಮ್ಮನೆ ಕುಳಿತಿರಬೇಕಿತ್ತೇ ಅಥವಾ ಅವರಿಗೆ ತಿರುಗೇಟು ನೀಡಬೇಕಿತ್ತೇ ? ಎಂದು ನೆರೆದ ಜನಸಮೂಹವನ್ನು ಪ್ರಶ್ನಿಸಿದರು.
‘ಉಗ್ರವಾದವನ್ನು ಪೋಷಿಸುವ ಒಂದು ದೇಶವಾಗಿ ಪಾಕಿಸ್ಥಾನವನ್ನು ನಾವು ವಿಶ್ವ ಸಮುದಾಯದ ಮುಂದೆ ಅನಾವರಣಗೊಳಿಸಿದಾಗ ನಮ್ಮಲ್ಲಿನ ಕೆಲವರು ಪಾಕಿಸ್ಥಾನದ ಹೀರೋ ಆಗುವ ತವಕದಲ್ಲಿ ಆ ದೇಶದ ಪರವಾಗಿ ಮಾತನಾಡುತ್ತಾರೆ; ಅದು ಕಾಂಗ್ರೆಸ್ ಇರಲಿ, ಎಸ್ಪಿ, ಬಿಎಸ್ಪಿ ಯೇ ಇರಲಿ; ಅವರು ನಮ್ಮ ದೇಶದ ಜನರ ಬದುಕು ಮತ್ತು ಭವಿಷ್ಯವನ್ನು ಅಪಾಯಕ್ಕೆ ದೂಡುತ್ತಾರೆ ಎಂದು ಮೋದಿ ಕಿಡಿಕಾರಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಮತ್ತು ಉತ್ತರ ಪ್ರದೇಶದಲ್ಲಿ ಎಸ್ಪಿ ಅಥವಾ ಬಿಎಸ್ಪಿ ಸರಕಾರ ಇದ್ದಾಗ ಲಕ್ನೋದಲ್ಲಿ ಆಗಾಗ ಬಾಂಬ್ ಸ್ಫೋಟಗಳು ಆಗುತ್ತಿದ್ದವು; ಹಾಗೆಯೇ ರಾಮ್ಲಾಲಾ, ಕಾಶಿಯಲ್ಲಿ ಮತ್ತು ರಾಮಪುರದ ಸಿಆರ್ಪಿಎಫ್ ಕ್ಯಾಂಪ್ ಮೇಲೆ ಉಗ್ರ ದಾಳಿಗಳು ನಡೆಯುತ್ತಿದ್ದವು. ಹಾಗಿದ್ದರೂ ಬುವಾ (ಮಾಯಾವತಿ) ಮತ್ತು ಬಾಬು (ಅಖೀಲೇಶ್ ಯಾದವ್) ಸರಕಾರಗಳು ಶಂಕಿತ ಉಗ್ರರ ಬಗ್ಗೆ ಸಹಾನುಭೂತಿ ಹೊಂದಿದ್ದವು ಮತ್ತು ತುಂಬ ಮೃದುವಾಗಿ ವ್ಯವಹರಿಸುತ್ತಿದ್ದವು’ ಎಂದು ಮೋದಿ ಆರೋಪಿಸಿದರು.
‘ಆದರೆ ಈ ಉಗ್ರ ದಾಳಿಗಳು ನಂಟು ಬಹುದೂರಕ್ಕೂ ವ್ಯಾಪಿಸಿತ್ತು. ನಮ್ಮ ಭದ್ರತಾ ಸಂಸ್ಥೆಗಳು ಶಂಕಿತ ಉಗ್ರರನ್ನು ಬಂಧಿಸಿದಾಗ ಓಟ್ ಬ್ಯಾಂಕ್ ಪಾಲಿಟಿಕ್ಸ್ ಗಾಗಿ ಬುವಾ ಮತ್ತು ಬಾಬು ಸರಕಾರಗಳು ಅವರನ್ನು ಬಂಧಮುಕ್ತ ಗೊಳಿಸುತ್ತಿದ್ದವು ಎಂದರು.
“ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಾಗಲೀ ದೇಶದ ಬೇರೆಡೆಗಳಲ್ಲಾಗಲೀ ಉಗ್ರ ಬಾಂಬ್ ಸ್ಫೋಟಗಳು ನಿಂತು ಹೋಗಿವೆ. ಕಾರಣ ಕೇಂದ್ರದಲ್ಲೀಗ ಚೌಕೀದಾರ ಇದ್ದಾನೆ. ಭಯೋತ್ಪಾದಕ ಪಾತಾಳದಲ್ಲಿದ್ದರೂ ನಾನು ಅವನನ್ನು ಹುಡುಕಿ ತೆಗೆಯುತ್ತೇನೆ; ವೋಟ್ ಬ್ಯಾಂಕ್ ಗಾಗಿ ಮೋದಿ ಎಂದೂ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ಭಯೋತ್ಪಾದನೆಗೆ ಹೊಣೆಗಾರರಾದವರು ಈಗ ಜೈಲಿನಲ್ಲಿ ಇದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.
Some people lose their sleep when India hits back at terrorists: PM Modi