ರೆಪೋ ದರ ಶೇ.25ರಷ್ಟು ಇಳಿಕೆ ಮಾಡಿದ ಆರ್ ಬಿ ಐ

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ರೆಪೋದರದಲ್ಲಿ ಇಳಿಕೆ ಮಾಡಿದ್ದೆ, ಶೇ.6.25 ಇದ್ದ ರೆಪೋ ದರಗಳು ಈಗ ಶೇ.6ಕ್ಕೆ ಇಳಿಕೆ ಮಾಡಿದೆ. ಈ ಮೂಲಕ ವರ್ಷದಲ್ಲಿ ಎರಡನೇ ಬಾರಿಗೆ ರೆಪೋ ದರವನ್ನು 25 ಅಂಶಗಳ ಇಳಿಕೆ ಮಾಡಿದಂತಾಗಿದೆ.

ಆರ್​ಬಿಐ ಗವರ್ನರ್​ ಶಕ್ತಿಕಾಂತ ದಾಸ ಅವರ ನೇತೃತ್ವದ 6 ಸದಸ್ಯರ ವಿತ್ತೀಯ ನೀತಿ ಸಮಿತಿ ಹೊಸ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ ಸಭೆ ನಡೆಸಿತು. ಈ ಸಭೆಯಲ್ಲಿ ರೆಪೋ ದರಗಳನ್ನು ಇಳಿಸುವ ಬಗ್ಗೆ ನಿರ್ಧರಿಸಿದೆ. ಇದರಿಂದಾಗಿ ಇದರಿಂದಾಗಿ ಬಡ್ಡಿ ದರಗಳಲ್ಲಿ ಕೂಡ ಇಳಿಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.

ಇದರಿಂದ ಗೃಹ ಮತ್ತು ವಾಹನ ಸಾಲಗಳ ಇಎಂಐ ಪಾವತಿ ತಿಂಗಳಿಗೆ 300ರಿಂದ 400 ರೂಪಾಯಿಗಳಷ್ಟು ಅಗ್ಗವಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಇದಕ್ಕೂ ಮುನ್ನ ಈ ವರ್ಷದ ಫೆಬ್ರವರಿಯಲ್ಲಿ ಆರ್​ಬಿಐ ರೆಪೋ ದರಗಳನ್ನು 25 ಅಂಶ ಇಳಿಕೆ ಮಾಡಿತ್ತು. ಈ ಪರಿಣಾಮ ರೆಪೊ ದರ ಶೇ.6.50ರಿಂದ ಶೇ.6.25ಕ್ಕೆ ಇಳಿಕೆಯಾಗಿತ್ತು. ಈಗ ಮತ್ತೆ ರೆಪೊ ದರ ಶೇ.0.25 ಕಡಿತವಾಗಿದೆ. ಆರಂಭದಲ್ಲಿ ಶೇ.0.50ರ ರೆಪೊ ದರ ಕಡಿತವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

ರಿವರ್ಸ್ ರೆಪೊ ದರ ಶೇಕಡಾ 5.75ರಷ್ಟಿದೆ. ಕಳೆದ 6 ತಿಂಗಳಲ್ಲಿ ಹಣದುಬ್ಬರವು ಕಡಿಮೆಯಿದ್ದು, ಆರ್‌ಬಿಐನ ಗುರಿಯಾದ ಶೇ.4ರೊಳಗೇ ಇದೆ. ಮುಂದಿನ 6 ತಿಂಗಳೂ ಹಣದುಬ್ಬರವು ನಿರೀಕ್ಷಿತ ಇಳಿಕೆಯ ಮಟ್ಟದಲ್ಲಿಯೇ ಸಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಆರ್ಥಿಕ ಬೆಳವಣಿಗೆಗೆ ತ್ವರಿತವೇಗ ನೀಡುವ ನಿಟ್ಟಿನಲ್ಲಿ ರೆಪೊ ದರವನ್ನು ಆರ್‌ಬಿಐ ಮತ್ತೆ ಇಳಿಕೆ ಮಾಡಲಿದೆ ಎಂದು ಕೇರ್‌ ರೇಟಿಂಗ್‌ ಇತ್ತೀಚಿನ ವರದಿಯಲ್ಲಿ ಹೇಳಿದೆ.

RBI rate cut: RBI cuts repo rate by 25 basis points; loan EMIs likely to …

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ