ಕೇಂದ್ರ ಸರ್ಕಾರದ ಫಲಕವಿದ್ದ ಕಾರು ಪರಿಶೀಲನೆ-ಚುನಾವಣಾ ಪ್ರಚಾರ ಸಾಮಾಗ್ರಿಗಳು ಪತ್ತೆ

ಮೈಸೂರು,ಏ.4- ಕೇಂದ್ರ ಸರ್ಕಾರದ ಫಲಕವಿದ್ದ ಇನೋವಾ ಕಾರಿನಲ್ಲಿ ಚುನಾವಣಾ ಪ್ರಚಾರ ಸಾಮಾಗ್ರಿಗಳು ಪತ್ತೆಯಾಗಿವೆ.

ಹುಣಸೂರು ಹೆದ್ದಾರಿಯ ಬಿಳಿಕೆರೆ ಚೆಕ್‍ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ಸಂದರ್ಭದಲ್ಲಿ ಮೈಸೂರಿನಿಂದ ತೆರಳುತ್ತಿದ್ದ ಕೇಂದ್ರ ಸರ್ಕಾರದ ಫಲಕವಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಚುನಾವಣಾ ಪ್ರಚಾರ ಸಾಮಾಗ್ರಿಗಳು ಇರುವುದು ಕಂಡುಬಂದಿದೆ ಎಂದು ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

ಬೆಂಗಳೂರಿನಿಂದ ಕೇರಳಕ್ಕೆ ಈ ಕಾರು ಹೋಗುತ್ತಿದ್ದಾಗ ಮಾರ್ಗಮಧ್ಯೆ ಬಿಳಿಕೆರೆ ಚೆಕ್‍ಪೋಸ್ಟ್ನಲ್ಲಿ ಕಾರು ತಡೆದು ಪರಿಶೀಲಿಸಿದಾಗ ಈ ಕಾರು ಕೇಂದ್ರ ಸರ್ಕಾರದ ಆಹಾರ ಸಚಿವಾಲಯಕ್ಕೆ ಸೇರಿದ್ದು ಚಾಲಕ ತಿಳಿಸಿದ್ದಾರೆ.

ಚುನಾವಣಾಧಿಕಾರಿಗಳು ಕಾರನ್ನು ವಶಕ್ಕೆ ಪಡೆದು ಚಾಲಕ ಹಾಗೂ ಪ್ರಯಾಣಿಕನೊಬ್ಬನನ್ನು ಬಿಳಿಕೆರೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ