ನಾಳೆ ಕೆಲಸಕ್ಕೆ ಬಾರದ ಆಶ್ವಾಸನೆಗಳ ವಿರುದ್ಧ ಪ್ರತಿಭಟನೆ-ಪ್ರಗತಿ ಪರ ಚಿಂತಕಿ ಕವಿತ ಲಂಕೇಶ್

ಬೆಂಗಳೂರು,ಏ.3- ದೇಶಾದ್ಯಂತ ಇರುವ ಮಹಿಳೆಯರು ಮತ್ತು ಅಂಚಿಗೆ ದೂಡಲ್ಪಟ್ಟ ಸಮುದಾಯಗಳು ಪ್ರಸ್ತುತ ಭೀತಿ, ದ್ವೇಷದ ವಾತಾವರಣದಲ್ಲಿ ಬದುಕುತ್ತಿದ್ದು, ಇವರ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿರುವರರ ವಿರುದ್ದ ಮಹಿಳೆ ನಡಿಗೆ – ಭಾರತ ಎಂಬ ಘೊಷಣೆಯೊಂದಿಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ನಾಳೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿ ಪರ ಚಿಂತಕಿ ಕವಿತ ಲಂಕೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಸಮ್ಮತಿ ಧ್ವನಿಗಳನ್ನು ಏಕೀಕರಿಸುತ್ತ ಮಹಿಳೆಯರ ಮತ್ತು ಅಂಚಿಕೆ ದೂಡಲ್ಪಟ್ಟಿರುವ ಸಮುದಾಯಗಳ ಸಂವಿಧಾನಿಕ ಹಕ್ಕುಗಳ ವಿರುದ್ಧ ದಾಳಿ ನಡೆಸುತ್ತಿರುವ ಶಕ್ತಿಗಳನ್ನು ಸೋಲಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಭಾರತದ ಮಹಿಳೆಯರು ಬಿಜೆಪಿ ಸರ್ಕಾರದ ಮಹಿಳಾ ಸಬಲೀಕರಣ ಮತ್ತು ಬೇಟಿ ಬಚಾವೋ ಎಂಬ ಖಾಲಿ ಮತ್ತು ಕೆಲಸಕ್ಕೆ ಬಾರದ ಆಶ್ವಾಸನೆಗಳ ವಿರುದ್ಧ ಪ್ರಶ್ನೆಗಳನ್ನು ಎತ್ತಬೇಕಾಗಿದೆ. ನಮಗೆ ದೃಢವಾದ ಹಕ್ಕುಗಳು ಬೇಕು ಕೃತಕವಾದ ಮಾತುಗಳಲ್ಲ. 5 ವರ್ಷಗಳಲ್ಲಿ ಮೋದಿ ಸರ್ಕಾರವು ಮಹಿಳೆಯರಿಗಾಗಿ ಸುರಕ್ಷಿತ ಮತ್ತು ಘನತೆಯುಕ್ತ ಕೆಲಸವಾಗಲಿ ಜೀವನ ವೇತನವಾಗಲಿ ನೀಡುವುದರಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿದ ಅವರು ಮಹಿಳೆಯರ ಸರ್ವತೋಮುಖ ಅಭಿವೃದ್ದಿ ಹಾಗೂ ಜೀವನ ಸಂರಕ್ಷಣೆಗಾಗಿ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ