ನಂಜನಗೂಡು, ಏ.3- ಚಾಮರಾಜನಗರ (ಮೀಸಲು) ಕ್ಷೇತ್ರದಲ್ಲಿ ಆರ್. ಧ್ರುವನಾರಯಣ್ ಅವರಿಗೆ ಸೋಲಿನ ರುಚಿ ತೋರಿಸಲು ವಿ.ಶ್ರೀನಿವಾಸ್ ಪ್ರಸಾದ್ರಿಂದ ಸಾಧ್ಯವಿದೆ ಎಂದು ಶಾಸಕ ಬಿ.ಹರ್ಷವರ್ಧನ್ ನುಡಿದರು.
ಹೆಗ್ಗಡಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಕತ್ವಾಡಿಪುರ, ದೇಬೂರು, ಹಂಡುವಿನಹಳ್ಳಿ ಬ್ಯಾಳಾರು ಸೇರಿದಂತೆ 20 ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಮುಖಂಡರು, ಯಜಮಾನರು, ಕಾರ್ಯಕರ್ತರಿಗೆ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ರವರನ್ನು ಪರ ಪ್ರಚಾರ ನಡೆಸಿ ನಂತರ ಮಾತನಾಡಿದರು.
46 ವರ್ಷಗಳ ಸುಧೀರ್ಘ ರಾಜಕೀಯ ಅನುಭವವಿರುವ ಹಿರಿಯ ವಿ.ಶ್ರೀನಿವಾಸ್ ಪ್ರಸಾದ್ ಅವರು ಅಭಿಮಾನಿಗಳಳು ಮತ್ತು ಬೆಂಬಲಿಗರ ಒತ್ತಾಯಕ್ಕೆ ಮಣಿದು ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಜನತೆ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಶ್ರೀನಿವಾಸ ಪ್ರಸಾದ್ 25 ವರ್ಷ ಸಂಸದರಾಗಿ, 8 ವರ್ಷ ಶಾಸಕರಾಗಿದ್ದು. ಅದರಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಮಂತ್ರಿಗಳಾಗಿ ಜನರ ಸೇವೆ ಒಳ್ಳೆಯ ಕೆಲಸ ಮಾಡಿ ಉತ್ತಮ ವಿಚಾರಗಳನ್ನು ತಿಳಿದುಕೊಡಿದ್ದಾರೆ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ 5 ವರ್ಷದಲ್ಲಿ ಯಾವ ಸಾಧನೆ ಮಾಡಿದೆ ಎಂದು ಹೇಳಲು ಹೋದರೆ ಇಡೀ ದಿನವೇ ಬೇಕಾಗುತ್ತದೆ.ಅಷ್ಟರ ಮಟ್ಟಿಗೆ ಅವರು ಕೆಲಸವನ್ನು ಮಾಡುತ್ತಿದ್ದಾರೆ. ಅವರ 5 ವರ್ಷದ ಅವಧಿಯಲ್ಲಿ ಎಂದಾದರೂ ರಜೆ ಹಾಕಿರುವ ವಿಷಯವನ್ನು ಕೇಳಿದ್ದೀರಾ ! ಎಂದು ಶಾಸಕ ಬಿ.ಹರ್ಷವರ್ಧನ್ ಕಾರ್ಯಕರ್ತರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ದಿನದಿನಕ್ಕೆ ಕುಸಿಯುತ್ತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 20-22 ಸ್ಥಾನವನ್ನು ಗೆಲ್ಲಲಿದ್ದು. ಬಿ.ಎಸ್.ಯಡಿಯೂರಪ್ಪರವರು ರಾಜ್ಯದ ಮುಖ್ಯಮಂತ್ರಿಯಾಗುವುದು ಖಂಡಿತ ಎಂದು ಭವಿಷ್ಯ ನುಡಿದರು.
ತಾಲೂಕು ಅಧ್ಯಕ್ಷ ಹೆಚ್.ಎಂ,ಕೆಂಡಗಣ್ಣಪ್ಪ, ತಾ.ಪಂ,ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ರಾಜ್ಯ ಎಸ್.ಟಿ, ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯಕ, ಜಿ.ಪಂ,ಸದಸ್ಯ, ಹೆಚ್.ಎಸ್.ದಯಾನಂದಮೂರ್ತಿ, ವಳಗೆರೆ ಪುಟ್ಟಸ್ವಾಮಿ, ಕಪ್ಪುಸೋಗೆ ಶಿವರುದ್ರ, ಹಂಡುವಿನಹಳ್ಳಿ ರಾಜು, ಪರಶಿವಮೂರ್ತಿ, ಜಗದೀಶ್, ತಾಪಂ ಸದಸ್ಯೆ ದೊಡ್ಡೀರಮ್ಮ ಮುಂತಾದ ಪ್ರಮುಖರು ಇದ್ದರು.