ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಸೋಲಿನ ದಂಡ ಯಾತ್ರೆ ಮುಂದುವರೆದಿದೆ. ನಿನ್ನೆ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಕೊಹ್ಲಿ ಪಡೆ ವಿರೋಚಿತ ಸೋಲು ಅನುಭವಿಸಿತು. ಬನ್ನಿ ಹಾಗಾದ್ರೆ ಆರ್ಸಿಬಿ ಹೇಗೆ ಸೋಲು ಕಂಡಿತು ಅನ್ನೋದನ್ನ ತೋರಿಸ್ತೀವಿ ನೋಡಿ.
ಒಳ್ಳೆಯ ಓಪನಿಂಗ್ ಕೊಡಲಿಲ್ಲ ಕೊಹ್ಲಿ- ಪಾರ್ಥಿವ್
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿಗೆ ಕ್ಯಾಪ್ಟನ್ ಕೊಹ್ಲಿ ಮತ್ತು ಪಾರ್ಥಿವ್ ಪಟೇಲ್ ಡಿಸೇಂಟ್ ಓಪನಿಂಗ್ ಕೊಡಲಿಲ್ಲ. ಅಚ್ಚರಿ ರೀತಿಯಲ್ಲಿ ಓಪನಿಂಗ್ ಸ್ಲಾಟ್ನಲ್ಲಿ ಬಂದ ಕ್ಯಾಪ್ಟನ್ ಕೊಹ್ಲಿ Sಟoತಿ ಚಿಟಿಜ Sಣeಚಿಜಥಿ ಇನ್ನಿಂಗ್ಸ್ ಕಟ್ಟಿದ್ರು.
ಆರ್ಸಿಬಿಗೆ ವಿಲನ್ ಆದ ಶ್ರೇಯಸ್ ಗೋಪಾಲ್
ತಂಡಕ್ಕೆ ಕ್ಯಾಪ್ಟನ್ ಕೊಹ್ಲಿ, ಪಾರ್ಥಿವ್ ಇನ್ನೇನು ಒಳ್ಳೆಯ ಓಪನಿಂಗ್ ಕೊಡ್ತಾರೆ ಅಂದುಕೊಳ್ಳುವಾಗಲೇ ಲೆಗ್ ಸ್ಪಿನ್ನರ್ ಕನ್ನಡಿಗ ಶ್ರೇಯಸ್ ಗೋಪಾಲ್ ವಿಲನ್ ಆದ್ರು. ಏಳನೇ ಓವರ್ನಲ್ಲಿ ದಾಳಿಗಿಳಿದ ಶ್ರೇಯಸ್ ಮೂರನೇ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನ ಬೌಲ್ಡ್ ಮಾಡಿದ್ರು. ವಿರಾಟ್ ಕೊಹ್ಲಿ ಮೂರು ಬೌಂಡರಿ ಬಾರಿಸಿ ಒಟ್ಟು 25 ರನ್ ಕಲೆ ಹಾಕಿದ್ರು.
ಇದಾದ ನಂತರ 9ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಶ್ರೇಯಸ್ ಗೋಪಾಲ್ ಮತ್ತೋಮ್ಮೆ ಮ್ಯಾಜಿಕ್ ಮಾಡಿದ್ರು. ಮೂರನೇ ಎಸೆತದಲ್ಲಿ 13 ರನ್ ಗಳಿಸಿದ್ದ ಮಿಸ್ಟರ್ 360 ಎಬಿಡಿ ವಿಲಿಯರ್ಸ್ ಅವರನ್ನ ಕಾಟ್ ಅಂಡ್ ಬೌಲ್ಡ್ ಮಾಡಿದ್ರು.
ಈ ಆಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ನಂಬರ್ ನಾಲ್ಕರಲ್ಲಿ ಬಂದಿದ್ದ ಶಿಮ್ರಾನ್ ಹೇಟ್ಮರ್ ಒಂದು ರನ್ ಗಳಿಸಿದ್ದಾಗ ಗೋಪಾಲ್ ಎಸೆತದಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್ಗೆ ಬ್ಯಾಕ್ ನೀಡಿದ್ರು.
ಅರ್ಧ ಶತಕ ಬಾರಿಸಿದ ಪಾರ್ಥಿವ್ ಪಟೇಲ್
73 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್ಸಿಬಿಗೆ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಆಸರೆಯಾದ್ರು. ನಾಲ್ಕನೆ ವಿಕೆಟ್ಗೆ ಪಾಥೀವ್ ಜೊತೆಗೂಡಿದ ಸ್ಟೋಯ್ನಿಸ್ ಉತ್ತಮ ಸಾಥ್ ಕೊಟ್ರು. ಈ ಜೋಡಿ ನಾಲ್ಕನೆ ವಿಕೆಟ್ ಗೆ 53 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದ್ರು.
ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಪಾರ್ಥಿವ್ ಪಟೇಲ್ 29 ಎಸೆತದಲ್ಲಿ ಅರ್ಧ ಶತಕ ಬಾರಿಸಿದ್ರು. ಆದರೆ 67 ರನ್ ಗಳಿಸಿದ್ದಾಗ ಆರ್ಚರ್ಗೆ ಬಲಿಯಾದ್ರು.
ಆರ್ಸಿಬಿ ನಿಗದಿತ ಓವರ್ನಲ್ಲಿ 4 ವಿಕೆಟ್ಗೆ 158 ರನ್
ಕೊನೆಯಲ್ಲಿ ಬಂದ ಮೊಯಿನ್ ಅಲಿ ಅಜೇಯ 18 ರನ್ ಗಳಿಸಿದ್ರೆ , ಬಿರುಸಿನ ಬ್ಯಟಿಂಗ್ ಮಾಡಿದ ಸ್ಟೋಯ್ನಿಸ್ ಅಜೇಯ 31 ರನ್ ಗಳಿಸಿದ್ರು. ಆರ್ಸಿಬಿ ನಿಗದಿತ ಓವರ್ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಕಳೆ ಹಾಕಿತು.
ಡಿಸೇಂಟ್ ಓಪನಿಂಗ್ ಕೊಟ್ಟ ರಹಾನೆ , ಬಟ್ಲರ್
159 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನತ್ತಿದ ರಾಜಸ್ತಾನ ತಂಡಕ್ಕೆ ಓಪನರ್ಸ್ಗಳಾದ ಅಜಿಂಕ್ಯ ರಹಾನೆ ಮತ್ತು ಜೋಸ್ ಬಟ್ಲರ್ ಡಿಸೇಂಟ್ ಓಪನಿಂಗ್ ಕೊಟ್ರು.
ಆರ್ಸಿಬಿ ಬೌಲರ್ಸ್ಗಳನ್ನ ಮನಬಂದಂತೆ ಚೆಂಡಾಡಿದ ಈ ಜೋಡಿ ಮೊದಲ ವಿಕೆಟ್ಗೆ 60 ರನ್ ಸೇರಿಸಿದ್ರು. ಆದರೆ 22 ರನ್ ಗಳಿಸಿದ್ದ ಕ್ಯಾಪ್ಟನ್ ರಹಾನೆ ಚಾಹಲ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ರು.
ನಂಬರ್ 4ನಲ್ಲಿ ಬಂದ ಸ್ಟೀವ್ ಸ್ಮಿತ್ ಜೋಸ್ ಬಟ್ಲರ್ಗೆ ಉತ್ತಮ ಸಾಥ್ ಕೊಟ್ರು. ಇದೇ ಜೋಶ್ ನಲ್ಲಿ ಡೆಡ್ಲಿ ಬ್ಯಾಟಿಂಗ್ ಮಾಡಿದ ಜೋಸ್ ಬಟ್ಲರ್ 38 ಎಸೆತದಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ್ರು.
ಈ ವೇಳೆ ಚಹಲ್ ಅವರ16ನೇ ಓವರ್ನ ಮೊದಲ ಎಸೆತದಲ್ಲಿ ಸ್ಟೀವ್ ಸ್ಮಿತ್ ನೀಡಿದ ಕ್ಯಾಚ್ನ್ನ ಉಮೇಶ್ ಯಾದವ್ ಕೈಚೆಲ್ಲಿದ್ರು. ಇದಾದ ನಂತರ 17ನೇ ಓವರ್ನಲ್ಲಿ ಮೊಹ್ಮದ್ ಸಿರಾಜ್ ಎಸೆತದಲ್ಲಿ ಸ್ಟೋಯ್ನಿಸ್ ಕ್ಯಾಚ್ ಹಿಡಿಯಲಿಲ್ಲ.
59 ರನ್ಗಳಿಸಿದ ಜೋಸ್ ಬಟ್ಲರ್ ಚಹಲ್ ಎಸೆತದಲ್ಲಿ ಸ್ಟೋಯ್ನಿಸ್ಗೆ ಕ್ಯಾಚ್ ನೀಡಿದ್ರು. ಸ್ಮಿತ್ 38 ರನ್ ಗಳಿಸಿ ಸಿರಾಜ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ನಂತರ ಬಂದ ತ್ರಿಪಾಠಿ ಅಜೇಯ 38, ಆಲ್ರೌಂಡರ್ ಬೆನ್ಸ್ಟೋಕ್ಸ್ ಅಜೇಯ 1 ರನ್ ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಒಟ್ನಲ್ಲಿ ಕ್ಯಾಪ್ಟನ್ ಕೊಹ್ಲಿ ಸೇರಿದಂತೆ ತಂಡದ ತಂಡದ ಆಟಗಾರರು ಕಳಪೆ ಫೀಲ್ಡಿಂಗ್ ಮಾಡಿದ್ದರಿಂದ ನಾಲ್ಕನೆ ಪಂದ್ಯವನ್ನು ಆರ್ಸಿಬಿ ಕೈಚೆಲ್ಲಿ ಕೊಳ್ಳಬೇಕಾಯಿತು.