ಈ ಬಾರಿಯ ಬಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಹಲವಾರು ಅಚ್ಚರಿ ಫಲಿತಾಂಶಗಳನ್ನ ಕೊಟ್ಟಿದೆ. ಇದಕ್ಕೆ Game Change Momentಗಳೇ ಕಾರಣ. ಹಾಗಾದ್ರೆ ಐಪಿಎಲ್ನಲ್ಲಿ ಪ್ರಮುಖ Game Change Momentಗಳು ಗಳು ಯಾವುದು ಅನ್ನೋದನ್ನ ನೋಡೋಣ ಬನ್ನಿ.
ಜೋಸ್ ಬಟ್ಲರ್ರನ್ನ ಮಂಕಡಿಂಗ್ ಮಾಡಿದ ಆರ್.ಆಶ್ವಿನ್
ಈ ಬಾರಿಯ ಐಪಿಎಲ್ನಲ್ಲಿ ಧೂಳೆಬ್ಬಿಸಿದ ವಿಚಾರ ಅಂದ್ರೆ ಅದು ಮಂಕಂಡಿಂಗ್ ಪ್ರಕರಣ. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ವೇಳೆ ನಡೆದ ಘಟನೆ ಇಡೀ ವಿಶ್ವ ಕ್ರಿಕೆಟ್ನಲ್ಲಿ ಭಾರೀ ಚೆರ್ಚೆಗೆ ಎಡೆ ಮಾಡಿಕೊಟ್ಟಿತ್ತು.
ಬಿಗ್ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ತಂಡ ಕ್ಯಾಪ್ಟನ್ ರಹಾನೆ ಮತ್ತು ಜೋಸ್ ಬಟ್ಲರ್ ಆeಛಿeಟಿಣ ಓಪನಿಂಗ್ ಕೊಟ್ಟಿದ್ರು. ರಹಾನೆ ಔಟಾದ ನಂತರವೂ ಅಬ್ಬರಿಸಿದ ಜೋಸ್ ಬಟ್ಲರ್ ಅರ್ಧ ಶತಕ ಬಾರಿಸಿದ್ರು.
ಈ ಪ್ರಕರಣ ನಡೆಯದಿದ್ದರೇ ರಾಜಸ್ತಾನ ತಂಡದ ಸುಲಭವಾಗಿ ಪಂದ್ಯವನ್ನ ಗೆದ್ದು ಶುಭಾರಂಭ ಮಾಡುತ್ತಿತ್ತು. ಪಂಜಾಬ್ ತಂಡ ನಿಗದಿತ ಓವರ್ನಲ್ಲಿ 184 ರನ್ ಗಳಿಸಿತ್ತು. ಆದರೆ ಅವರ 13ನೇ ಓವರ್ ನಲ್ಲಿ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಜೋಸ್ ಬಟ್ಲರ್ ಅವರನ್ನ ಮಂಕಡ್ ಶೈಲಿಯಲ್ಲಿ ಔಟ್ ಮಾಡ್ತಾರೆ.
ಇಲ್ಲಿಂದ ರಾಜಸ್ತಾನ ತಂಡ ಪೆವಿಲಿಯನ್ ಪರೇಡ್ ನಡೆಸಿತು. ಜೋಸ್ ಬಟ್ಲರ್ ಔಟ್ ಆಗಿದ್ದು ಇಡೀ ಪಂದ್ಯಕ್ಕೆ ದೊಡ್ಡ ತಿರುವು ಸಿಕ್ಕಿತ್ತು. ರಾಜಸ್ತಾನ ತಂಡ ಕೊನೆಗೆ 14 ರನ್ಗಳ ಅಂತರಸಿಂದ ಸೋಲಬೇಕಾಯಿತು.
ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಆ್ಯಂಡ್ರೆ ರಸೆಲ್
ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಸನ್ರೈಸರ್ಸ್ ಮತ್ತು ಕೋಲ್ಕತ್ತಾ ನಡುವಿನ ಪಂದ್ಯ ರೋಚಕ ಕದನಕ್ಕೆ ಸಾಕ್ಷಿಯಾಗಿತ್ತು. ತವರಿನಲ್ಲಿ ಸನ್ರೈಸರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡಿ.ಕೆ. ಗ್ಯಾಂಗ್ ರೋಚಕವಾಗಿ ಗೆದ್ದು ಬೀಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ತಂಡ 183 ರನ್ಗಳಿಸಿತು. ಬಿಗ್ ಟಾರ್ಗೆಟ್ ಬೆನ್ನತ್ತಿದ ಸನ್ರೈಸರ್ಸ್ ಓಪನರ್ ನಿತೀಶ್ ರಾಣಾ ಅವರ ಅರ್ಧ ಶತಕದ ನೆರವಿನಿಂದ ಒಳ್ಳೆಯ ಓಪನಿಂಗ್ ಕೊಟ್ಟಿದ್ರು. ನಂತರ ತಂಡ ಸೋಲಿನ ದವಡೆಯಲ್ಲಿ ಸಿಲುಕಿತು. ಐದನೇ ಸ್ಲಾಟ್ನಲ್ಲಿ ಬಂದ ಸ್ಪೋಟಕ ಬ್ಯಾಟ್ಸ್ಮನ್ ಆ್ಯಂಡ್ರೆ ರಸೆಲ್ ಬಿರುಗಾಳಿಂತೆ ಅಬ್ಬರಿಸಿ ನಾಲ್ಕು ಬೌಂಡರಿ ನಾಲ್ಕು ಸಿಕ್ಸರ್ ಸಿಡಿಸಿ ಕೋಲ್ಕತ್ತಾ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ರು.
ವಾಂಖೆಡೆಯಲ್ಲಿ ರಿಷಭ್ ಪಂತ್ ಅಬ್ಬರ
ಐಪಿಎಲ್ ಸರಣಿಗೂ ಮುನ್ನ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ಭಾರೀ ಟೀಕೆಗಳಿಗೆ ಗುರಿಯಾಗಿದ್ದ ಮರಿ ಧೋನಿ ರಿಷಬ್ ಪಂತ್ ಐಪಿಎಲ್ನ ಮೊದಲ ಪಂದ್ಯದಲ್ಲೆ ಬ್ಯಾಟಿಂಗ್ನಲ್ಲಿ ಪರಾಕ್ರಮ ಮೆರೆದ್ರು. ಮುಂಬೈ ವಿರುದ್ಧದ ಪಂದ್ಯದಲ್ಲಿ ನಂ.5ನಲ್ಲಿ ಬಂದ ರಿಷಬ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಮಿಂಚಿದ್ರು. ಈ ಡೆಲ್ಲಿ ಡ್ಯಾಶರ್ ಕೇವಲ 27 ಎಸೆತದಲ್ಲಿ 7 ಬೌಂಡರಿ 7 ಸಿಕ್ಸರ್ ಬಾರಿಸಿ ತಂಡದ ಸ್ಕೋರ್ 200ರ ಗಡಿ ದಾಟಿಸುವಲ್ಲಿ ನೆರವಾದ್ರು. ರಿಷಬ್ ನೆರವಿನಿಂದ ಡೆಲ್ಲಿ 37 ರನ್ಗಳ ಅಂತರದಿಂದ ಗೆದ್ದುಕೊಂಡಿತು. ರಿಷಬ್ ಗೇಮ್ ಚೇಂಜರ್ರಾಗಿ ಹೊರ ಹೊಮ್ಮಿದ್ರು.
ಕೋಲ್ಕತ್ತಾ, ಡೆಲ್ಲಿ ನಡುವಿನ ಸೂಪರ್ ಮ್ಯಾಚ್
ಈ ಬಾರಿಯ ಐಪಿಎಲ್ನಲ್ಲಿ ಹೈವೋಲ್ಟೇಜ್ ಪಂದ್ಯ ಅಂದ್ರೆ ಅದು ಕೋಲ್ಕತ್ತಾ ಮತ್ತು ಡೆಲ್ಲಿ ನಡುವಿನ ಕದನ. ಫಿರೋಜ್ ಶಾ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲದ ಹೋರಾಟ ನೀಡಿದವು. ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ 185 ರನ್ ಗಳಿಸಿತು. ಡೆಲ್ಲಿ ತಂಡ ಮರಿ ಸಚಿನ್ ಪೃಥ್ವಿ ನೆರವಿನಿಂದ 185 ರನ್ ಗಳಿಸಿ ಪಂದ್ಯವನ್ನ ಟೈ ಮಾಡಿಕೊಂಡಿತ್ತು. ನಂತರ ನಡೆದ ಸೂಪರ್ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ರನ್ಗಳ ಅಂತರದಿಂದ ಗೆದ್ದುಕೊಂಡಿತ್ತು.
ಕ್ಯಾಪ್ಟನ್ ಕೊಹ್ಲಿಯನ್ನ ಔಟ್ ಮಾಡಿದ ಬುಮ್ರಾ
ಐಪಿಎಲ್ಗೂ ಮುನ್ನ ಕ್ಯಾಪ್ಟನ್ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಚಾಲೆಂಜ್ ಹಾಕಿದ್ರು. ಈ ಚಾಲೆಂಜ್ ಕ್ರಿಕೆಟ್ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲವಂತೆ ಮಾಡಿತ್ತು. ಇದರಂತೆ ಮೊನ್ನೆ ಚೆನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಯಾರ್ಕರ್ ಕಿಂಗ್ ಬುಮ್ರಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಕೆಟ್ ಪಡೆದು ಪಂದ್ಯದ ಗತಿಯನ್ನೆ ಬದಲಿಸಿದ್ರು. ಒಂದು ವೇಳೆ ವಿರಾಟ್ ಕೊಹ್ಲಿ ಔಟಾಗದಿದ್ದರೇ ಆರ್ಸಿಬಿ ಸುಲಭವಾಗಿ ಗೆಲ್ಲುತ್ತಿತ್ತು.
ಒಟ್ಟಾರೆ ಈ ಐದು ಗೇಮ್ ಚೇಂಜಿಂಗ್ ಅಂಶಗಳೇ ಐಪಿಎಲ್ ತಂಡಗಳ ಗೆಲುವಿಗೆ ಕಾರಣವಾಗಿದ್ದು ರೋಚಕತೆಗೆ ಹಿಡಿದ ಸಾಕ್ಷಿಯಾಗಿದೆ.