ಬೆಂಗಳೂರು, ಏ.3- ಅತಿಸೂಕ್ಷ್ಮ ಪ್ರದೇಶ, ಚೆಕ್ ಪೋಸ್ಟ್, ಮತಗಟ್ಟೆ ಕೇಂದ್ರಗಳಿಗೆ ಭಾರತ ಸರ್ಕಾರದ ಚುನಾವಣಾ ವೀಕ್ಷಕ ಪಿ.ಎಸ್.ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮತದಾರರು, ಸಾರ್ವಜನಿಕರನ್ನು ಭೇಟಿ ಮಾಡಿ, ಮತದಾನ ಮಾಡುವಂತೆ ಹೇರಿಕೆ, ಭಯದ ವಾತಾವರಣ ಮೂಡಿಸುವ ವ್ಯಕ್ತಿಗಳು ನೀಡುತ್ತಿರುವ ಕಿರುಕುಳದ ಬಗ್ಗೆ ಸಾರ್ವಜನಿಕರು ಮುಕ್ತ ಮತ್ತು ಪತ್ರದ ಮೂಲಕ ದೂರು ನೀಡಬಹುದು ಎಂದು ವೀಕ್ಷಕರು ತಿಳಿಸಿದರು.
ಮತದಾನ ವೇಳೆಯಲ್ಲಿ ಥ್ರೆಟ್, ಆಮಿಷ, ಅಶಾಂತಿ ಉಂಟು ಮಾಡುವ ಜನರ ಮೇಲೆ ನಿಗಾ ವಹಿಸಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ತಿಗಳರಪಾಳ್ಯ, ಅಂಧ್ರಹಳ್ಳಿ, ದೊಡ್ಡಬಿದರಕಲ್ಲು, ಹೊಸಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಾರ್ವಜನಿಕರ ಜೊತೆ ವೀಕ್ಷಕರು ಚರ್ಚಿಸಿದರು.
ಕಣಿಮಿಣಿಕೆ, ನೈಸ್‍ರಸ್ತೆ, ಗೊಲ್ಲರಹಟ್ಟಿ, ಚೆಕ್‍ಪೋಸ್ಟ್ಗಳಿಗೆ ಭೇಟಿ ನೀಡಿ ಯಾವ ರೀತಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.ಅವರ ಕುಂದುಕೊರತೆ ಆಲಿಸಿದರು.
ಸಹಾಯಕ ಚುನಾವಣಾಧಿಕಾರಿ ಎ.ಎಲ್.ಮಂಜುನಾಥ್, ಮತದಾರ ನೋಂದಣಾಧಿಕಾರಿ ಸಂತೋಷ್‍ಕುಮಾರ್, ಬಿ.ಅರುಣ್‍ಕುಮಾರ್ ಇದ್ದರು.