ಬೆಂಗಳೂರು, ಏ.2-ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ 40 ಮಂದಿ ಜೆಡಿಎಸ್ನ ಮುಖಂಡರು ತಾರಾ ಪ್ರಚಾರಕರಾಗಿ ಪಾಲ್ಗೊಳ್ಳಿದ್ದಾರೆ.
ಸಚಿವರಾದ ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಬಂಡೆಪ್ಪ ಕಾಶಂಪೂರ್, ಎಸ್.ಆರ್.ಶ್ರೀನಿವಾಸ್, ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ವೆಂಕಟರಾವ್ನಾಡಗೌಡ, ಸಾ.ರಾ.ಮಹೇಶ್, ಎಂ.ಸಿ.ಮನಗೂಳಿ ಅವರು ಜೆಡಿಎಸ್ನ ತಾರಾ ಪ್ರಚಾರಕರಾಗಿದ್ದಾರೆ.
ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಪಿ.ಜಿ.ಆರ್.ಸಿಂಧ್ಯಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಅವರು ಜೆಡಿಎಸ್ ತಾರಾ ಪ್ರಚಾರಕರಾಗಿ ಚುನಾವಣೆಯಲ್ಲಿ ಭಾಗಿಯಾಗಲಿದ್ದಾರೆ.
ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಅನಿತಾಕುಮಾರಸ್ವಾಮಿ, ಡಾ.ಕೆ.ಅನ್ನದಾನಿ, ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಬಸವರಾಜ್ ಹೊರಟ್ಟಿ, ಬಿ.ಎಂ.ಫಾರೂಕ್, ಕಾಂತರಾಜು, ಮರಿತಿಬ್ಬೇಗೌಡ, ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ಎಸ್.ಎ.ನೀರಾವರಿ, ಎನ್.ಎಚ್.ಕೋನರೆಡ್ಡಿ, ಬಿ.ಬಿ.ನಿಂಗಯ್ಯ,ಕೆ.ಎಂ.ತಿಮ್ಮರಾಯಪ್ಪ, ರಮೇಶ್ಬಾಬು ಅವರು ಕೂಡ ಜೆಡಿಎಸ್ನ ತಾರಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಪಕ್ಷದ ಮುಖಂಡರಾದ ಪ್ರೋ.ಸಿ.ಎಸ್.ರಂಗಪ್ಪ, ಸೈಯದ್ ಮೊಹಿದ್ ಅಲ್ತಾಫ್, ಭವಾನಿರೇವಣ್ಣ, ಡಾ.ಸೂರಜ್ ರೇವಣ್ಣ, ಕೆ.ವಿ.ಅಮರನಾಥ್, ಸೈಯದ್ ಶಫಿವುಲ್ಲಾ ಸಾಹೇಬ್ ಹಾಗೂ ಎ.ಪಿ.ರಂಗನಾಥ್ ಅವರು ಜೆಡಿಎಸ್ನ ತಾರಾ ಪ್ರಚಾರಕರಾಗಿದ್ದು, ಪ್ರಸಕ್ತ ಚುನಾವಣೆಯಲ್ಲಿ ರಾಜ್ಯಾದ್ಯಂತ ನಡೆಯುವ ಪಕ್ಷದ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.