ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಗಡಿನಿಯಂತ್ರಣ ರೇಖೆ ಬಳಿ ಕಡನ ವಿರಾಮ ಉಲ್ಲಂಘನೆಮಾಡಿ ದಾಲಿ ನಡೆಸಿದ್ದ ಪಾಕ್ ಸೈನಿಕರಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ, ಪಾಕಿಸ್ತಾನದ 10 ಸೈನಿಕರನ್ನು ಸದೆಬಡಿದಿದೆ.
ಪಾಕ್ ಸೇನಾಪಡೆ ಸೋಮವಾರದಿಂದ ಹಲವು ಬಾರಿ ಕದನವಿರಾಮ ಉಲ್ಲಂಘಿಸಿ ಪೂಂಚ್ ವಲಯದಲ್ಲಿ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಪೂಂಚ್ ಜಿಲ್ಲೆಯ ಮನಕೋಟ್ ವಲಯದಲ್ಲಿ ನಾಲ್ವರು ಸಾರ್ವಜನಿಕರು ಗಾಯಗೊಂಡಿದ್ದು, ರಾಜೌರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಪೂಂಛ್ ಸೆಕ್ಟರ್ನಲ್ಲಿ ಒಬ್ಬ ಬಿಎಸ್ಎಫ್ ಜವಾನ ಹಾಗೂ ಇಬ್ಬರು ನಾಗರಿಕರು ಕೂಡ ಸಾವನ್ನಪ್ಪಿದ್ದರು.
ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾಪಡೆ ಯೋಧರು ಕೂಡ ಭಾರಿ ಗುಂಡಿನ ದಾಳಿ ನಡೆಸಿದ್ದು, ಪಾಕಿಸ್ತಾನದ 10ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ.
ಭಾರತದ ಪ್ರತಿಕ್ರಿಯೆ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನ, ಗಡಿ ನಿಯಂತ್ರಣ ರೇಖೆಯ ರಾವಲ್ಕೋಟ್ ಸೆಕ್ಟರ್ನ ರಖ್ಚಕ್ರಿ ಎಂಬಲ್ಲಿ ಭಾರತೀಯ ಪಡೆಗಳು ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದು, ಸುಬೇದಾರ್ ಮುಹಮ್ಮದ್ ರಿಯಾಜ್, ಲ್ಯಾನ್ಸ್ ಹವಾಲ್ದಾರ್ ಅಜೀಜ್ ಉಲ್ಲಾ ಮತ್ತು ಸಿಪಾಯಿ ಶಾಹಿದ್ ಮನ್ಸಿಬ್ ಸತ್ತಿದ್ದಾರೆ, 10 ಮಂದಿ ಇತರ ಸೈನಿಕರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನವು ಹೇಳಿಕೊಂಡಿದೆ.
ಇದೇ ವೇಳೆ, ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿ ಹೆಚ್ಚಿರುವುದರಿಂದ, ಗಡಿಯ ಐದು ಕಿಮೀ ವ್ಯಾಪ್ತಿಯ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಪೂಂಛ್ ವಲಯದ ಜಿಲ್ಲಾ ಮ್ಯಾಜಿಸ್ಟ್ರೇಟರು ಹೇಳಿದ್ದಾರೆ.
10 Pakistani Soldiers Killed by indian army