ಜೆಡಿಎಸ್-ಕಾಂಗ್ರೇಸ್ ಮೈತ್ರಿಯ ಎಫೆಕ್ಟ್ ನಿಂದಾಗಿ ಬಿಜೆಪಿಗೆ ದೊಡ್ಡ ಹೊಡೆತ

ಬೆಂಗಳೂರು,ಮಾ.31-ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಾರ್ವತ್ರಿಕ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಕದನಕ್ಕೆ ಇಳಿದಿವೆ. ಮೈತ್ರಿಯ ಎಫೆಕ್ಟ್‍ನಿಂದಾಗಿ ಬಿಜೆಪಿಗೆ ದೊಡ್ಡ ಹೊಡೆತ ಎಂಬುದು ಕಳೆದ 3 ಲೋಕಸಭಾ ಉಪಚುನಾವಣೆಗಳ ಫಲಿತಾಂಶದಿಂದ ಸಾಬೀತಾಗಿತ್ತು.

ಹಲವು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದೋಸ್ತಿಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿದರೆ 15ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ನಿರಾಸವಾಗಿ ಗೆಲ್ಲುವ ಅವಕಾಶ ಇದೆ.

2014ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಡೆದುಕೊಂಡಿರುವ ಶೇಕಡವಾರ ಮತಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಬಿಜೆಪಿಗಿಂತ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸುವುದು ನಿಸ್ಸಂದೇಹ.

15 ಕ್ಷೇತ್ರಗಳಲ್ಲಿ ದೋಸ್ತಿ ಪಕ್ಷಗೆದ್ದರೆ 13 ಬಿಜೆಪಿ ಪಾಲಾಗಲಿವೆ. ಅಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಭಾರೀ ಅಲೆಯಲ್ಲೂ ಕರ್ನಾಟಕ 28 ಕ್ಷೇತ್ರಳಲ್ಲಿ ಬಿಜೆಪಿ 17, ಕಾಂಗ್ರೆಸ್9 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿತ್ತು.

ಈಗ ಎರಡು ಪಕ್ಷಗಳು ಒಂದಾಗಿರುವುದರಿಂದ 28 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ದೋಸ್ತಿ ಪಕ್ಷಗಳು ಸ್ಪಷ್ಟವಾಗಿ ಹೆಚ್ಚಿನ ಸ್ಥಾನಗಳಿಸುವ ಲಕ್ಷಣಗಳು ಗೋಚರಿಸಿವೆ.

ಆದರೆ ಈಗಲೂ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ಒಂದಾಗದಿರುವುದು, ನಾಯಕರ ನಡುವಿನ ಮುಸುಕಿನ ಗುದ್ದಾಟ, ಭಿನ್ನಾಭಿಪ್ರಾಯ ಇಂತಹುವೇ ಚುನಾವಣಾ ಸಂದರ್ಭದಲ್ಲಿ ಅಧಿಕೃತ ಅಭ್ಯರ್ಥಿಗಳಿಗೆ ಒಳ ಹೊಡೆತ ಕೊಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ದೋಸ್ತಿಗೆ ಎಲ್ಲೆಲ್ಲಿ ಲಾಭ:
ಒಟ್ಟು 28 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ.ಏಕೆಂದರೆ 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ಶೇ.44.43ರಷ್ಟು ಮತ ಪಡೆದಿದ್ದರೆ, ಕಾಂಗ್ರೆಸ್‍ನಪ್ರಕಾಶ್ ಹುಕ್ಕೇರಿ ಶೇ.44.72 , ಜೆಡಿಎಸ್ ಅಭ್ಯರ್ಥಿ ಶೇ.3.77 ಮತ ಪಡೆದಿದ್ದರು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿರುವುದರಿಂದ ಒಟ್ಟಾರೆ ಮತ ಪ್ರಮಾಣ ಶೇ.48. 49ರಷ್ಟಾಗುತ್ತದೆ. ಬೆಳಗಾವಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಒಂದಾದರೂ ಬಿಜೆಪಿಯನ್ನು ಕಟ್ಟಿ ಹಾಕುವುದು ಅಷ್ಟು ಸುಲಭವಲ್ಲ.

2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಒಟ್ಟು ಚಲಾವಣೆಯಾದ ಮತದಾನದಲ್ಲಿ ಶೇ.51.96ರಷ್ಟು ಮತ ಪಡೆದಿದ್ದರು.ಕಾಂಗ್ರೆಸ್ 44.85 ಹಾಗೂ ಜೆಡಿಎಸ್ ಶೇ.0.80 ಮತ ಪಡೆದಿತ್ತು.ಎರಡೂ ಪಕ್ಷಗಳ ಒಟ್ಟು ಶೇಕಡವಾರು ಮತ ಶೇ.45.65 ಪಡೆದಿದೆ.

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಶೇ.53.19ರಷ್ಟು ಮತ ಪಡೆದರೆ ಕಾಂಗ್ರೆಸ್ ಶೇ.48.58 ಹಾಗೂ ಜೆಡಿಎಸ್ ಶೇ.0.26 ಮತ ಗಳಿಸಿದೆ. ಎರಡೂ ಪಕ್ಷಗಳು ಒಂದಾದರೆ ಶೇ.49.2ರಷ್ಟಾಗುತ್ತದೆ.

ವಿಜಾಪುರದಲ್ಲಿ ಬಿಜೆಪಿ ಕಳೆದ ಚುನಾವಣೆಯಲ್ಲಿ 49.22ರಷ್ಟು , ಕಾಂಗ್ರೆಸ್ 41.94ರಷ್ಟು ಜೆಡಿಎಸ್ ಶೇ.6ರಷ್ಟು ಪತ ಪಡೆದಿದ್ದವು. ಇಲ್ಲಿ ಮೈತ್ರಿ ಪಕ್ಷ ಒಂದಾಗಿರುವುದರಿಂದ ಒಟ್ಟು ಪ್ರಮಾಣ ಶೇ.47.94ರಷ್ಟಾದರೂ ಬಿಜೆಪಿ ಮೇಲುಗೈ ಸಾಧಿಸಿದಂತಾಗುತ್ತದೆ.

ಕಲಬುರಗಿಯಲ್ಲಿ ಕಾಂಗ್ರೆಸ್ ಶೇ.51.35ರಷ್ಟು ಮತ ಪಡೆದಿದೆ.ಈಗ ಕಾಂಗ್ರೆಸ್‍ಗೆ ಜೆಡಿಎಸ್ ಬೆಂಬಲ ನೀಡುತ್ತಿರುವುದರಿಂದ ಅದರ ಬಲ ಇನ್ನಷ್ಟು ಹೆಚ್ಚಾಗಲಿದೆ.ಬಿಜೆಪಿ ಶೇ.43.78ರಷ್ಟು ಹಾಗೂ ಜೆಡಿಎಸ್ ಶೇ.0.68 ಮತ ಪಡೆದಿದೆ.

ರಾಯಚೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶೇ.46.42ರಷ್ಟು ಮತ ಪಡೆದರೆ, ಬಿಜೆಪಿ ಶೇ.46.26 ಮತ ಗಳಿಸಿತ್ತು. ಜೆಡಿಎಸ್ ಶೇ.2.7 ಮತ ಪಡೆದಿದೆ.ಎರಡೂ ಪಕ್ಷಗಳ ಸರಾಸರಿ ಮತ ಶೇ.48.69ರಷ್ಟಾಗುತ್ತದೆ.

ಬೀದರ್‍ನಲ್ಲಿ ಕಾಂಗ್ರೆಸ್-ಜೆಡಿಎಸ್‍ಒಂದಾದರೂ ಒಂದಾದರು ಬಿಜೆಪಿ ಮುಂಚೂಣಿಯಲ್ಲಿದೆ. ಶೇ.48.01ರಷ್ಟು ಮತ ಪಡೆದರೆ ಕಾಂಗ್ರೆಸ್ ಶೇ.38.37, ಜೆಡಿಎಸ್ 6.14ರಷ್ಟು ಒಟ್ಟು 44.05 ಮತ ಗಳಿಸಿದೆ.

ಕೊಪ್ಪಳದಲ್ಲೂ 2014ರಲ್ಲಿ ಬಿಜೆಪಿ ಕಾಂಗ್ರೆಸ್-ಜೆಡಿಎಸ್‍ಗಿಂತ ಶೇಕಡವಾರು ಮತಗಳಿಕೆಯಲ್ಲಿ ಮುಂದಿದೆ.ಬಿಜೆಪಿ ಶೇ.48.01 ಮತ ಪಡೆದರೆ, ಕಾಂಗ್ರೆಸ್ ಶೇ.46.65 ಹಾಗೂ ಬಿಎಸ್‍ಪಿ ಶೇ.0.96 ಪಡೆದಿದೆ. ಇಲ್ಲಿ ದೋಸ್ತಿ ಪಕ್ಷಗಳು ಒಂದಾಗಿದ್ದರೂ ಹಿನ್ನೆಡೆಯಾಗುವುದು ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಬಿಜೆಪಿ ಶೇ.51.56, ಕಾಂಗ್ರೆಸ್ ಶೇ.43.43 ಹಾಗೂ ಜೆಡಿಎಸ್ ಶೇ.1.2ರಷ್ಟು ಮತ ಗಳಿಸಿತ್ತು. ಕೆಲ ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಅರ್ಶರ್ಯಕರ ಫಲಿತಾಂಶ ಹೊರಬಿದ್ದಿದೆ.

ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶೇ.50.96ರಷ್ಟು ಮತ ಪಡೆದರೆ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಶೇ.43.09 ಹಾಗೂ ಜೆಡಿಎಸ್ ಶೇ.0.88ರಷ್ಟು ಮತ ಗಳಿಸಿದೆ.

ಧಾರವಾಡದಲ್ಲಿ ಬಿಜೆಪಿ ಶೇ.53.04 ಮತಗಳಿಸಿದರೆ ಕಾಂಗ್ರೆಸ್ ಶೇ.41.99 ಹಾಗೂ ಜೆಡಿಎಸ್ ಶೇ.0.86 ಮತ ಪಡೆದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶೇ.55.45ರಷ್ಟು ಮತ ಪಡೆದಿರುವುರಿಂದ ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದರೂ ಮೈತ್ರಿ ಎಷ್ಟರಮಟ್ಟಿಗೆ ಪರಿಣಾಮಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

ದಕ್ಷಿಣ ಕನ್ನಡದಲ್ಲಿ ಬಿಜೆಪಿ ಒಟ್ಟು ಚುನಾವಣೆಯಾದ ಮತದಾನಲ್ಲಿ ಶೇ.53.55ರಷ್ಟು ಮತ ಪಡೆದಿದ್ದರಿಂದ ದೋಸ್ತಿ ಪಕ್ಷಗಳುಒಂದಾಗಿರುವುದು ಅಷ್ಟೇನೂ ಪರಿಣಾಮ ಬೀರುವ ಸಾಧ್ಯತೆಇಲ್ಲ.

ಶಿವಮೊಗ್ಗದಲ್ಲೂ ಕೂಡ ಹಾಲಿ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶೇ.55.03 ಮತ ಪಡೆದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಸ್ಪಷ್ಟಪವಾಗಿ ಹಿಂದಿಕ್ಕಿದ್ದರು.

ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿ ಶೇ.56.63 ,ಹಾಸನದಲ್ಲಿ ಜೆಡಿಎಸ್ ಶೇ.44.73ರಷ್ಟು ಮತ ಪಡೆದರೆ ಕಾಂಗ್ರೆಸ್ ಶೇ.35.92ರಷ್ಟು ಮತ ಗಳಿಕೆ ಮಾಡಿತ್ತು.
ಚಿತ್ರದುರ್ಗದಲ್ಲೂ ಕಾಂಗ್ರೆಸ್ ಶೇ.42.49ರಷ್ಟು , ಜೆಡಿಎಸ್ ಶೇ.18.58ರಷ್ಟು ಮತ ಪಡೆದಿದೆ.

ತುಮಕೂರಿನಲ್ಲಿ ಕಾಂಗ್ರೆಸ್ ಶೇ.39.49,ಜೆಡಿಎಸ್ ಶೇ.18. 58 ಹಾಗೂ ಬಿಜೆಪಿ ಶೇ.32.69ರಷ್ಟು ಮತ ಗಳಿಸಿತ್ತು.

ಸಕ್ಕರೆ ಜಿಲ್ಲೆ ಮಂಡ್ಯ ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ವರವಾಗುವ ಲಕ್ಷಣವಿದೆ. ಕಳೆದ ಬಾರಿ ಜೆಡಿಎಸ್ ಶೇ.44.19 , ಕಾಂಗ್ರೆಸ್ ಶೇ.43.73ರಷ್ಟು ಹಾಗೂ ಬಿಜೆಪಿ ಶೇ.5.33ರಷ್ಟು ಮತ ಪಡೆದಿದ್ದವು.

ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಎರಡೂ ಪಕ್ಷಗಳು ಒಂದಾದರೆ ಬಿಜೆಪಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಶೇ.43.78ರಷ್ಟು , ಕಾಂಗ್ರೆಸ್ ಶೇ.41.05 ಹಾಗೂ ಜೆಡಿಎಸ್ ಶೇ.12.04ರಷ್ಟು ಮತ ಗಳಿಸಿತ್ತು.

ಚಾಮರಾಜನಗರದಲ್ಲಿ ಕಾಂಗ್ರೆಸ್ ಶೇ.50.68, ಬಿಜೆಪಿ ಶೇ.28.08 ಹಾಗೂ ಜೆಡಿಎಸ್ ಶೇ.5.24ರಷ್ಟು ಮತ ಗಳಿಸಿದ್ದವು.

ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಶೇ.45.19ರಷ್ಟು , ಬಿಜೆಪಿ ಶೇ.24.14 ಹಾಗೂ ಜೆಡಿಎಸ್ ಶೇ.21.99ರಷ್ಟು ಮತ ಪಡೆದಿವೆ.

ಉಳಿದಂತೆ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ,ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಶೇ.50ಕ್ಕಿಂತಲೂ ಹೆಚ್ಚು ಮತಗಳಿಸಿವೆ.

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ದೋಸ್ತಿ ಪಕ್ಷವೇ ಮೇಲುಗೈ ಸಾಧಿಸಲಿವೆ.

ಕ್ಷೇತ್ರಗಳು ಪಡೆದ ಮತಗಳು ಶೇ.
ಚಿಕ್ಕೋಡಿ  

ಬಿಜೆಪಿ- 471370 44.43
ಕಾಂಗ್ರೆಸ್-4472 ಶೇ.44.72
ಜೆಡಿಎಸ್-39992ಶೇ.3.77
ಒಟ್ಟು – 48.49

ಬೆಳಗಾವಿ
ಬಿಜೆಪಿ- 445517 51.96
ಕಾಂಗ್ರೆಸ್- 478557 ಶೇ.44.85
ಜೆಡಿಎಸ್- 8524ಶೇ.0.80
ಒಟ್ಟು – 45.65

ಬಾಗಲಕೋಟೆ
ಬಿಜೆಪಿ-57154853.19
ಕಾಂಗ್ರೆಸ್-45498848.58
ಜೆಡಿಎಸ್-72370.68
ಒಟ್ಟು – 43.26

ವಿಜಾಪುರ
ಬಿಜೆಪಿ-4717574.22
ಕಾಂಗ್ರೆಸ್-40193841.94
ಜೆಡಿಎಸ್-575511.59
ಒಟ್ಟು – 52.94

ಕಲಬುರಗಿ
ಬಿಜೆಪಿ-43246043.78
ಕಾಂಗ್ರೆಸ್-50719351.35
ಜೆಡಿಎಸ್-156900.68
ಒಟ್ಟು – 43.26

ರಾಯಚೂರು
ಬಿಜೆಪಿ-44216046.26
ಕಾಂಗ್ರೆಸ್-44365946.42
ಜೆಡಿಎಸ್-2170622.7
ಒಟ್ಟು – 48.69

ಬೀದರ್
ಬಿಜೆಪಿ-45929048.01
ಕಾಂಗ್ರೆಸ್-36706838.37
ಜೆಡಿಎಸ್-587286.14
ಒಟ್ಟು – 44.05

ಕೊಪ್ಪಳ
ಬಿಜೆಪಿ-48638348.95
ಕಾಂಗ್ರೆಸ್-45396945.69
ಬಿಎಸ್‍ಪಿ- 95290.96
ಒಟ್ಟು – 46.65

ಬಳ್ಳಾರಿ
ಬಿಜೆಪಿ-53440651.66
ಕಾಂಗ್ರೆಸ್-44926743.43
ಜೆಡಿಎಸ್-126131.2
ಒಟ್ಟು – 44.65

ತುಮಕೂರು
ಬಿಜೆಪಿ-35582732.69
ಕಾಂಗ್ರೆಸ್-42986839.49
ಜೆಡಿಎಸ್-25868323.76
ಒಟ್ಟು – 63.25

ಮಂಡ್ಯ
ಬಿಜೆಪಿ-8699375.33
ಕಾಂಗ್ರೆಸ್-51885243.73
ಜೆಡಿಎಸ್-52437044.19

ಒಟ್ಟು – 87.92

ಮೈಸೂರು
ಬಿಜೆಪಿ-50390843.78
ಕಾಂಗ್ರೆಸ್-47230041.05
ಜೆಡಿಎಸ್-13858712.04
ಒಟ್ಟು – 53.09

ಚಾಮರಾಜನಗರ
ಬಿಜೆಪಿ-42660028.08
ಕಾಂಗ್ರೆಸ್-56778250.68
ಜೆಡಿಎಸ್-587605.24
ಒಟ್ಟು – 55.92

ಬೆಂಗಳೂರು ಗ್ರಾಮಾಂತರ
ಬಿಜೆಪಿ-4212429.14
ಕಾಂಗ್ರೆಸ್-65272345.16
ಜೆಡಿಎಸ್-31787021.99
ಒಟ್ಟು – 66.15

ಬೆಂಗಳೂರು ಉತ್ತರ
ಬಿಜೆಪಿ-271832653.42
ಕಾಂಗ್ರೆಸ್-44856236.33
ಜೆಡಿಎಸ್-926816.69
ಒಟ್ಟು – 43.22

ಬೆಂಗಳೂರು ಕೇಂದ್ರ
ಬಿಜೆಪಿ-55713052.56
ಕಾಂಗ್ರೆಸ್-41963039.36
ಜೆಡಿಎಸ್-203871.91
ಒಟ್ಟು – 41.72

ಬೆಂಗಳೂರು ದಕ್ಷಿಣ
ಬಿಜೆಪಿ-633816457.29
ಕಾಂಗ್ರೆಸ್-40524136.63
ಜೆಡಿಎಸ್-256772.32
ಒಟ್ಟು – 38.95

ಚಿಕ್ಕಬಳ್ಳಾಪುರ
ಬಿಜೆಪಿ-41528033.07
ಕಾಂಗ್ರೆಸ್-42480033.83
ಜೆಡಿಎಸ್-34633927.58
ಒಟ್ಟು -61.41

ಕೋಲಾರ
ಬಿಜೆಪಿ-27732223.82
ಕಾಂಗ್ರೆಸ್-41892637.33
ಜೆಡಿಎಸ್-37107633.07
ಒಟ್ಟು – 70.4

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ