ಮೈ ಭೀ ಚೌಕೀದಾರ್ ಎಂಬ ಟೀ ಕಪ್-ರೈಲ್ವೆ ಇಲಾಖೆಗೆ ನೋಟೀಸ್ ನೀಡಿದ ಚುನಾವಣಾ ಆಯೋಗ

ಬೆಂಗಳೂರು, ಮಾ.30- ನಾನು ದೇಶದ ಚೌಕೀದಾರ್ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ನಿನ್ನೆ ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಮಾರಾಟವಾದ ಮೈ ಭೀ ಚೌಕೀದಾರ್ ಎಂಬ ಟೀ ಕಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನೆಲ್ಲೇ ಇಂದು ರೈಲ್ವೆ ಇಲಾಖೆಗೆ ಚುನಾವಣಾ ಆಯೋಗ ನೋಟಿಸ್ ನೀಡಿ ಈ ಬಗ್ಗೆ ಉತ್ತರಿಸುವಂತೆ ಸೂಚಿಸಿದೆ.

ದೇಶದಲ್ಲಿ ನೀತಿ ಸಂಹಿತೆ ಜಾರಿ ಇದ್ದರೂ ಈ ರೀತಿಯ ಟೀ ಕಪ್ ಮುದ್ರಣ ಮಾಡಿರುವುದು ಮೇಲ್ನೋಟಕ್ಕೆ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಈ ಟೀ ಲೋಟವನ್ನು ಕೂಡಲೇ ಬಂದ್ ಮಾಡಿ. ನೋಟಿಸ್‍ಗೆ ಉತ್ತರಿಸುವಂತೆ ಚುನಾವಣಾ ಆಯೋಗ ಚೌಕೀದಾರ್ ಲೋಟವನ್ನು ಮುದ್ರಿಸಿದ್ದ ಸಂಸ್ಥೆಯ ಕಂಟ್ರಕ್ಟರ್‍ಗೆ ನೋಟಿಸ್ ನೀಡಿದೆ.

ರಾಜಕೀಯ ಪ್ರಚಾರಕ್ಕಾಗಿ ಪಕ್ಷದ ಒಳಶಕ್ತಿಯನ್ನು ಬಳಸಿ ಈ ರೀತಿಯ ಕಪ್‍ಗಳನ್ನು ತಯಾರಿಸಿರಬಹುದು ಎಂದು ಚುನಾವಣಾ ಆಯೋಗ ಶಂಕೆ ವ್ಯಕ್ತಪಡಿಸಿದೆ. ಕಪ್ ತಯಾರಿಕೆ ಮಾಡಿದ ಸಂಸ್ಥೆಗೆ 1ಲಕ್ಷ ರೂ. ದಂಡ ವಿಧಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ