ಡಿಎಂಕೆ ಖಜಾಂಚಿ ದುರೈ ಮುರುಗನ್ ನಿವಾಸದ ಮೇಲೆ ಐಟಿ, ಚುನಾವಣಾ ಅಧಿಕಾರಿಗಳ ದಾಳಿ

ವೆಲ್ಲೂರು: ಅಕ್ರಮ ಹಣ ವಹಿವಾಟು ಆರೋಪ ಹಿನ್ನಲೆಯಲ್ಲಿ ಡಿಎಂಕೆ ಖಜಾಂಚಿ ದುರೈ ಮುರುಗನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಜತೆಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತಮಿಳುನಾಡಿನ ವೆಲ್ಲೂರು ಬಳಿ ಇರುವ ಮುರುಗನ್ ನಿವಾಸದಲ್ಲಿ ಅಕ್ರಮ ಹಣದ ವಹಿವಾಟು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಚುನಾವಣಾ ಆಯೋಗ, ಐಟಿ ಅಧಿಕಾರಿಗಳ ಜತೆ ಸೇರಿ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಶೋಧ ಕಾರ್ಯಕ್ಕೆ ಆಗಮಿಸಿದ ಅಧಿಕಾರಿಗಳನ್ನು ತಡೆದ ಮುರಗನ್ ಅವರು ಕಾನೂನು ಸಲಹೆಗಾರರು, ಸರ್ಚ್ ವಾರೆಂಟ್ ಹಾಗೂ ಸೂಕ್ತ ದಾಖಲೆಗಳನ್ನು ತರುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಇದೇ ವೇಳೆ ಇದು ರಾಜಕೀಯ ಪ್ರೇರಿತ ದಾಳಿ. ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಆರಕ್ಕೊನಮ್ ಲೋಕಸಭಾ ವ್ಯಾಪ್ತಿಯಲ್ಲಿ ಶೋಧ ಕಾರ್ಯಕ್ಕೆ ವಾರಂಟ್ ತಂದು ವೆಲ್ಲೋರ್ ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಎಂಕೆ ಕಾನೂನು ವಿಭಾಗದ ಜಂಟಿ ಕಾರ್ಯದರ್ಶಿ ಪರಂದಾಮನ್ ದೂರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ