ಬೆಂಗಳೂರು,ಮಾ.29-ಭಾರತದ ಚುನಾವಣಾ ಆಯೋಗವು ಎಲ್ಲ ಮತದಾರರು ಗರಿಷ್ಠ ಪ್ರಮಾಣದಲ್ಲಿ ಮತದಾನ ಮಾಡುವಂತೆ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿ ಚುನಾವಣೆಯಲ್ಲೂ ಹಮ್ಮಿಕೊಳ್ಳುತ್ತಾ ಬಂದಿದ್ದರೂ ಇದುವರೆಗೂ ಸಾಧ್ಯವಾಗಿಲ್ಲ.
ಕಳೆದ 16 ಲೋಕಸಭಾ ಚುನಾವಣೆಗಳಲ್ಲಿ 1999ರಲ್ಲಿ ಶೇ.67.58ರಷ್ಟು ರಾಜ್ಯದಲ್ಲಿ ಮತದಾನವಾಗಿದ್ದು, ಇದುವರೆಗಿನ ಗರಿಷ್ಠ ದಾಖಲೆಯ ಮತದಾನವಾಗಿದೆ.
ರಾಜ್ಯದಲ್ಲಿ ಪ್ರಸಕ್ತ ಲೋಕಸಭೆ ಚುನಾವಣೆ ಎರಡು ಹಂತದಲ್ಲಿ ನಡೆಯುತ್ತಿದ್ದು, ಈಗಾಗಲೇ ಚುನಾವಣೆ ಕಾವು ರಂಗೇರತೊಡಗಿದೆ. ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಮತದಾರರನ್ನು ಆಕರ್ಷಿಸಲು ನಾನಾ ರೀತಿಯ ತಂತ್ರ ಹಾಗೂ ಪ್ರಚಾರಗಳನ್ನು ನಡೆಸತೊಡಗಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಮತದಾರರ ಪಟ್ಟಿಯಲ್ಲಿನ ದೋಷ ಸರಿಪಡಿಸುವಿಕೆ, ಮತದಾನದ ಬಗ್ಗೆ ಬೀದಿ ನಾಟಕ ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ. ಆದರೂ ಇದುವರೆಗೆ ರಾಜ್ಯದಲ್ಲಿನ ಮತದಾನದ ಪ್ರಮಾಣ ಶೇ.70ರ ಗಡಿ ದಾಟಿಲ್ಲ. ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಬೇಕೆಂಬ ಉದ್ದೇಶವನ್ನು ಆಯೋಗ ಹೊಂದಿದೆ.
ಮತದಾನದಂದು ವಿಶೇಷಚೇತನರಿಗೆ ವ್ಹೀಲ್ಛೇರ್, ರ್ಯಾಂಪ್ ಸೌಲಭ್ಯವನ್ನು ಮತಗಟ್ಟೆಗಳಲ್ಲಿ ಕಲ್ಪಿಸಲಾಗುತ್ತದೆ. ಅಲ್ಲದೆ, ಸಾರಿಗೆ ವ್ಯವಸ್ಥೆಯನ್ನೂ ಕೂಡ ಮಾಡಲಾಗುತ್ತದೆ.ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಆಯೋಗ ಮುಂದಾಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರಿಗೆ ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್, ಉದ್ಯೋಗಖಾತ್ರಿ ಯೋಜನೆ ಸೇರಿದಂತೆ ವಿವಿಧ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟಿದೆ.
ಮೊದಲ ಲೋಕಸಭೆ ಚುನಾವಣೆ 1951ರಲ್ಲಿ ನಡೆದಿದ್ದು, ಆಗ ಮೈಸೂರು ರಾಜ್ಯ ಅಸ್ತಿತ್ವದಲ್ಲಿತ್ತು.3,969,735 ಮತದಾರರಿದ್ದು, 2,82,4427 ಮತಚಲಾಯಿಸಿದ್ದು, ಶೇ.51.93 ಮತದಾನವಾಗಿತ್ತು.
ಎರಡನೇ ಲೋಕಸಭೆ ಚುನಾವಣೆ 1957ರಲ್ಲಿ ನಡೆದಿದ್ದು, 10006936 ಮತದಾರರಿದ್ದು, 5798440 ಮತದಾರರು ಮತ ಚಲಾಯಿಸಿದ್ದು, ಶೇ.52.21 ರಷ್ಟು ಮತದಾನವಾಗಿತ್ತು.
ಮೂರನೇ ಲೋಕಸಭೆ ಚುನಾವಣೆ 1962ರಲ್ಲಿ ನಡೆದಿದ್ದು, 11353892 ಮತದಾರರಿದ್ದು, 6733403 ಮತದಾರರು ಮತ ಚಲಾಯಿಸಿದ್ದರು.ಆಗ ಶೇ.59.30 ರಷ್ಟು ಮತದಾನ ನಡೆದಿತ್ತು.
ನಾಲ್ಕನೇ ಲೋಕಸಭೆ ಚುನಾವಣೆ 1967ರಲ್ಲಿ ನಡೆದಿದ್ದು, 12778996 ಮತದಾರರಿದ್ದು, 8044053 ಮತದಾರರು ಮತ ಚಲಾಯಿಸಿದ್ದರು.ಶೇ.62.95ರಷ್ಟು ಮತದಾನ ವಾಗಿತ್ತು.
ಐದನೇ ಲೋಕಸಭೆ ಚುನಾವಣೆ 1971ರಲ್ಲಿ ನಡೆದಿದ್ದು, 13789186 ಮತದಾರರಿದ್ದು, 7917061ಮತದಾರರು ಮತಚಲಾಯಿಸಿದ್ದು, ಶೇ.57.41ರಷ್ಟು ಮತದಾನ ನಡೆದಿತ್ತು.
6ನೇ ಲೋಕಸಭೆ ಚುನಾವಣೆ 1977ರಲ್ಲಿ ನಡೆದಿದ್ದು, ಆಗ ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣಗೊಂಡಿತ್ತು.16767195 ಮತದಾರರಲ್ಲಿ 10596342 ಮತದಾರರು ಮತ ಚಲಾಯಿಸಿದ್ದು, ಶೇ.63.20ರಷ್ಟು ಮತದಾನ ನಡೆದಿತ್ತು.
ಏಳನೇ ಲೋಕಸಭೆ ಚುನಾವಣೆ 1980ರಲ್ಲಿ ನಡೆದಿದ್ದು, ಆಗ ರಾಜ್ಯದಲ್ಲಿ 19562924 ಮತದಾರರಿದ್ದು, 11289532 ಮತದಾರರು ಮತದಾನ ಮಾಡಿದ್ದರು. ಶೇ.57.17ರಷ್ಟು ಮತದಾನವಾಗಿತ್ತು.
8ನೇ ಲೋಕಸಭೆಗೆ 1984ರಲ್ಲಿ ಚುನಾವಣೆ ನಡೆದಿದ್ದು, 21102484 ಮತದಾರರ ಪೈಕಿ 13857272 ಮತದಾರರು ಮತ ಚಲಾಯಿಸಿದ್ದರು. ಆಗ ಶೇ.65.67ರಷ್ಟು ಮತದಾನ ನಡೆದಿತ್ತು.
9ನೇ ಲೋಕಸಭೆÉ 1989ರಲ್ಲಿ ಚುನಾವಣೆ ನಡೆದಿದ್ದು, 28611444 ಮತದಾರರಿದ್ದು, 19320008 ಮತದಾರರು ಮತದಾನ ಮಾಡಿದ್ದರು. ಶೇ.67.53ರಷ್ಟು ಮತದಾನವಾಗಿತ್ತು.
10ನೇ ಲೋಕಸಭೆ 1991ರಲ್ಲಿ ಚುನಾವಣೆ ನಡೆದಿದ್ದು, 28839296 ಮತದಾರರಿದ್ದು, 15807311 ಮತದಾರರು ಮತ ಚಲಾವಣೆ ಮಾಡಿದ್ದರು. ಶೇ.54.81ರಷ್ಟು ಮತದಾನ ನಡೆದಿತ್ತು.
11ನೇ ಲೋಕಸಭೆಗೆ 1996ರಲ್ಲಿ ಚುನಾವಣೆ ನಡೆದಿದ್ದು, ಆಗ ರಾಜ್ಯದಲ್ಲಿ 31810069 ಮತದಾರರಿದ್ದು, 19155432ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಶೇ.60.22ರಷ್ಟು ಮತದಾನವಾಗಿತ್ತು.
12ನೇ ಲೋಕಸಭೆಗೆ 1998ರಲ್ಲಿ ನಡೆದ ಚುನಾವಣೆಯಲ್ಲಿ 33098338 ಮತದಾರರು ಇದ್ದು, 21488648 ಮತದಾರರು ಮತ ಚಲಾಯಿಸಿದ್ದು, ಶೇ.64.92ರಷ್ಟು ಮತದಾನವಾಗಿತ್ತು.
13ನೇ ಲೋಕಸಭೆಗೆ 1999ರಲ್ಲಿ ನಡೆದ ಚುನಾವಣೆಯಲ್ಲಿ 34284098 ಮತದಾರರಿದ್ದು, 23168337 ಮತದಾರರು ಮತ ಚಲಾಯಿಸಿದ್ದು, ಶೇ.67.58ರಷ್ಟು ಮತದಾನವಾಗಿತ್ತು.
14ನೇ ಲೋಕಸಭೆಗೆ 2004ರಲ್ಲಿ ನಡೆದ ಚುನಾವಣೆಯಲ್ಲಿ 38592095 ಮತದಾರರಿದ್ದು, 25081961 ಮತದಾರರು ಮತ ಚಲಾಯಿಸಿದ್ದರು. ಆಗ ಶೇ.65.14ರಷ್ಟು ಮತದಾನವಾಗಿತ್ತು.
15ನೇ ಲೋಕಸಭೆಗೆ 2009ರಲ್ಲಿ ನಡೆದ ಚುನಾವಣೆಯಲ್ಲಿ 41790939 ಮತದಾರರಿದ್ದು, 24572713 ಮತದಾರರು ಮತ ಚಲಾವಣೆ ಮಾಡಿದ್ದರು. ಶೇ.58.82ರಷ್ಟು ಮತದಾನವಾಗಿತ್ತು.
16ನೇ ಲೋಕಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ 46209813 ಮತದಾರರಿದ್ದು, 31053583ರಷ್ಟು ಮತದಾರರು ಮತ ಚಲಾಯಿಸಿದ್ದು, ಶೇ.67.20ರಷ್ಟು ಮತದಾನವಾಗಿತ್ತು.
ವಿದ್ಯುನ್ಮಾನ ಮತ ಯಂತ್ರ ಬಳಕೆಗೆ ಬಂದ ಮೇಲೆ ತಿರಸ್ಕøತ ಮತದಾನಗಳು ಇರುವುದಿಲ್ಲ. ಆದರೆ ಅಭ್ಯರ್ಥಿಗಳಿಗೆ ಮತ ಹಾಕಲು ಇಷ್ಟವಿಲ್ಲದ ಮತದಾರರು ಯಾರಿಗೂ ಮತವಿಲ್ಲ ಎಂಬ ನೋಟಾ ಚಲಾವಣೆ ಮಾಡಲು ಅವಕಾಶ ಕಲ್ಪಿಸಿದೆ.
ಪ್ರಸಕ್ತ ಲೋಕಸಭೆಗೆ ಏ.18 ಹಾಗೂ 23 ರಂದು ಎರಡು ಹಂತದಲ್ಲಿ ಮತದಾನ ನಡೆಯುತ್ತಿದೆ.ರಾಜ್ಯದಲ್ಲಿ 50346721 ಮತದಾರರಿದ್ದಾರೆ. 25494711 ಪುರುಷ, 24847292 ಮಹಿಳಾ ಹಾಗೂ 4718 ಇತರೆ ಮತದಾರರು ಇದ್ದಾರೆ.
58186 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಶೇ.7ರಷ್ಟು ಮತಗಟ್ಟೆಗಳ ಸಂಖ್ಯೆ ಹೆಚ್ಚಾಗಿದೆ.ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗವಲ್ಲದೆ ಕೆಎಸ್ಆರ್ಟಿಸಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕೂಡ ಜಾಗೃತಿ ಮೂಡಿಸುತ್ತಿವೆ.
ಈ ಬಾರಿಯ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾರರ ಮತ ಚಲಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.