ಐಪಿಎಲ್ನಲ್ಲಿ ಬದ್ಧ ವೈರಿಗಳೆನಿಸಿಕೊಂಡಿರುವ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿರುವ ಹೈವೊಲ್ಟೇಜ್ ಕದನ ತವರಿನಲ್ಲಿ ಆಡುತ್ತಿರುವ ಆರ್ಸಿಬಿಗೆ ಇದು ಪ್ರತಿಷ್ಠೆಯ ಪಂದ್ಯವಾದ್ರೆ. ಮುಂಬೈ ಇಂಡಿಯನ್ಸ್ ತಂಡ ಮೊದಲ ಸೋಲಿನಿಂದ ಹೊರ ಬರುವ ತವಕದಲ್ಲಿದೆ.
ಗಾಯಗೊಂಡ ಹುಲಿಯಂತಾಗಿವೆ ಉಭಯ ತಂಡಗಳು
ಹೌದು ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳು ಗಾಯಗೊಂಡ ಹುಲಿಯಂತಾಗಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್ಸಿಬಿ ಹೀನಾಯವಾಗಿ ಸೋಲುಕಂಡಿತ್ತು. ಇನ್ನು ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ವಿರುದ್ಧ ತವರಿನಲ್ಲೆ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ತವರಿನ ಅಭಿಮಾನಿಗಳೆದುರು ಮುಖಭಂಗ ಅನುಭವಿಸಿತ್ತು.
ಗೆಲ್ಲಲ್ಲೇಬೇಕಾದ ಒತ್ತಡದಲ್ಲಿ ಆರ್ಸಿಬಿ
ಮುಂಬೈ ತವರಿನಲ್ಲಿ ಮುಂಬೈ ವಿರುದ್ಧ ಆಡುತ್ತಿರುವ ಆರ್ಸಿಬಿ ಇಂದು ಗೆಲ್ಲಲ್ಲೇಬೇಕಾದ ಒತ್ತಡವನ್ನ ಎದುರಿಸುತ್ತಿದೆ. ಚೆನ್ನೈ ವಿರುದ್ಧ ಸೋತಾಗ ಆರ್ಸಿಬಿ ಅಭಿಮಾನಿಗಳು ಭಾರೀ ನಿರಾಸೆ ಅನುಭವಿಸಿದ್ರು. ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ಭಾರೀ ಟ್ರೋಲ್ ಆಗಿತ್ತು. ಮೊದಲ ಪಂದ್ಯದಲ್ಲಿ ಸೋತಾಗ ಈ ಬಾರಿಯೂ ಕಪ್ ನಮ್ದಲ್ಲ ಅಂತ ಆರ್ಸಿಬಿ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದು ಸಹಜವಾಗಿ ಆರ್ಸಿಬಿ ಒತ್ತಡವನ್ನ ಎದುರಿಸುತ್ತಿದೆ.
ಕ್ಯಾಪ್ಟನ್ ಕೊಹ್ಲಿಯನ್ನ ಚಿಂತೆಗೀಡು ಮಾಡಿದ ತಂಡದ ಬ್ಯಾಟಿಂಗ್
ತಂಡದ ಬ್ಯಾಟಿಂಗ್ ಡಿಪಾರ್ಟ್ಮೆಂಟ್ ಕ್ಯಾಪ್ಟನ್ ಕೊಹ್ಲಿಯನ್ನ ಚಿಂತೆಗೀಡು ಮಾಡಿದೆ. ಮೊನ್ನೆ ಚೆಪಾಕ್ ಅಂಗಳದಲ್ಲಿ ಚೆನ್ನೈ ವಿರುದ್ಧ ತಂಡದ ಎಲ್ಲ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಪರೇಡ್ ನಡೆಸಿದ್ರು. ತಂಡದ ಓಪನರ್ ಪಾರ್ಥಿವ್ ಪಟೇಲ್ 29 ರನ್ಗಳಿಸಿದ್ದು ಬಿಟ್ಟರೆ ತಂಡದ ಇನ್ನಲ್ಲ ಬ್ಯಾಟ್ಸ್ ಮನ್ಗಳು ಒಂದಂಕಿ ರನ್ ಗಳಿಸಿದ್ರು.
ಇನ್ನೂ ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ವೇಗಿಗಳಾದ ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಎದುರಾಳಿಗಳನ್ನ ಆರಂಭದಲ್ಲಿ ಕಟ್ಟಿಹಾಕಬೇಕು. ಸಿಎಸ್ಕೆ ವಿರುದ್ಧ ಉತ್ತಮ ದಾಳಿ ಸಂಘಟಿಸಿದ್ದ ಯಜುವೇಂದ್ರ ಚಹಲ್ ತಮ್ಮ ಚಾರ್ಮ್ ಮುಂದುವರಿಸಬೇಕಿದೆ. ಜೊತೆಗೆ ಚಹಲ್ಗೆ ಆಲ್ರೌಂಡರ್ ಮೊಹಿನ್ ಆಲಿ ಉತ್ತಮ ಸಾಥ್ ನೀಡಿದ್ರೆ ತವರಲ್ಲಿ ಆರ್ಸಿಬಿ ವಿಜಯ ಪತಾಕೆ ಹಾರಿಸೋದ್ರಲ್ಲಿ ಅನುಮಾನವೇ ಇಲ್ಲ
ಮುಂಬೈ ಇಂಡಿಯನ್ಸ್ಗೆ ಆಲ್ರೌಂಡರ್ಗಳ ಬಲ
ಐಪಿಎಲ್ನಲ್ಲಿ ಉತ್ತಮ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ಮುಂಬೈ ಇಂಡಿಯನ್ಸ್ ತವರಿನಲ್ಲಿ ಆರ್ಸಿಬಿಯನ್ನ ಮಣಿಸುವ ಉತ್ಸುಕದಲ್ಲಿದೆ. ಒಪನರ್ಗಳಾದ ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅಬ್ಬರಿಸೋ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಆಲ್ರೌಂಡರ್ಗಳಾದ ಕಿರನ್ ಪೋಲಾರ್ಡ್, ಹಾರ್ದಿಕ್ ಪಾಂಡ್ಯಾ, ಕೃನಾಲ್ ಪಾಂಡ್ಯಾ, ಬೆನ್ ಕಟ್ಟಿಂಗ್ ಸಿಡಿದೆದ್ರೆ ಎದುರಾಳಿಗಳು ಉಡೀಸ್ ಆಗೋದು ಗ್ಯಾರಂಟಿ.
ಮುಂಬೈ ಇಂಡಿಯನ್ಸ್ ಬೌಲಿಂಗ್ ಡಿಪಾರ್ಟ್ಮೆಂಟ್ ಕೂಡ ಅಷ್ಟೇ ಬಲಿಷ್ಠವಾಗಿದ್ದು ಎದುರಾಳಿಗಳ ಬ್ಯಾಟಿಂಗ್ ಶಕ್ತಿಯನ್ನೇ ಬುಡಮೇಲು ಮಾಡೋ ತಾಕತ್ತು ಹೊಂದಿದೆ. ಮಿಶೆಲ್ ಮೆಕ್ಕ್ಲಿನಾಗಾನ್, ಜಮ್ಮು ಎಕ್ಸ್‌ಪ್ರೆಸ್ ರಸೀಖ್ ಸಲಾಂ, ಹಾರ್ದಿಕ್ ಪಾಂಡ್ಯಾ, ಬೆನ್ ಕಟ್ಟಿಂಗ್ ಮುಂಬೈ ತಂಡದ ಬೌಲಿಂಗ್ ಸ್ಟ್ರೆಂಥ್ ಆಗಿದೆ. ಆಲ್ರೌಂಡರ್ ಕೃನಾಲ್ ಪಾಂಡ್ಯಾ, ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ತಮ್ಮ ಕೈಚಳಕ ತೋರಿಸೋಕೆ ಉತ್ಸುಕರಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಭುಜದ ಗಾಯದ ಸಮಸ್ಯೆಗೆ ತುತ್ತಾಗಿದ್ದ ಜಸ್‌ಪ್ರೀತ್ ಬುಮ್ರಾ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದು, ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನೂ ಜಸ್‌ಪ್ರೀತ್ ಬೂಮ್ರಾ ಕಣಕ್ಕಿಳಿದ್ರೆ, ಮುಂಬೈ ತಂಡದ ಬೌಲಿಂಗ್ ಬಲ ಮತ್ತಷ್ಟು ಬಲಿಷ್ಠವಾಗಲಿದೆ.
ಒಟ್ಟಾರೆ ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಇಂದಿನ ಕದನದಲ್ಲಿ ಗೆಲುವಿನ ಖಾತೆ ತೆರೆಯಲು ಹೋರಾಡಲು ಸಜ್ಜಾಗಿದ್ದು ಮೊದಲ ಕಹಿಯನ್ನ ಮರೆಯುವ ಉತ್ಸಾಹದಲ್ಲಿದೆ.