ಭಾರತದ ಶೂಟರ್ ಗಳ ವಿಶ್ವ ದಾಖಲೆ

ನವದೆಹಲಿ, ಮಾ.27- ಅಂತಾರಾಷ್ಟ್ರೀಯ ಶೂಟಿಂಗ್ ಪಂದ್ಯಗಳಲ್ಲಿ ಭಾರತದ ಗುರಿಕಾರರ ಪ್ರಾಬಲ್ಯ ಮುಂದುವರಿದಿದ್ದು, ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ.

ತೈವಾನ್ ರಾಜಧಾನಿ ತೈಪೇಯ ಟೊವಾಯೌನ್‍ನಲ್ಲಿ ನಡೆದ 12ನೆ ಏಷ್ಯನ್ ಏರ್‍ಗನ್ ಚಾಂಪಿಯನ್‍ಶಿಪ್‍ನ 10 ಮೀಟರ್ ಪಿಸ್ತೂಲ್ ಮಿಶ್ರ ಪಂದ್ಯದಲ್ಲಿ ಭಾರತದ ಸ್ಟಾರ್ ಶೂಟರ್‍ಗಳಾದ ಮನು ಬಕೇರ್ ಮತ್ತು ಸೌರಭ್ ಚೌಧರಿ ಜೋಡಿ ಸ್ವರ್ಣ ಪದಕ ಸಾಧನೆಯೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್‍ಎಸ್‍ಎಫ್) ವಿಶ್ವ ಕಪ್ ಹಂತದ ಇದೇ ವಿಭಾಗದ ಪಂದ್ಯದಲ್ಲಿ ಈ ಜೋಡಿ ಬಂಗಾರ ಪದಕಗಳನ್ನು ಕೊರಳಿಗೇರಿಸಿತ್ತು.

ಮನು(17) ಮತ್ತು ಸೌರಭ್(16) ಜೋಡಿ ಅರ್ಹತಾ ಸುತ್ತಿನಲ್ಲಿ ಸಂಯೋಜಿತ 784 ಸ್ಕೋರ್‍ಗಳನ್ನು ಗಳಿಸಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ರಷ್ಯಾದ ವಿಟಾಲಿನಾ ಬ್ಯಾಟ್‍ಸರಶ್‍ಕಿನಾ ಮತ್ತು ಅರ್ಟೆಮ್ ಚೆರ್ನೌಸೊಯ್ ಕೇಳದ ಐದು ದಿನಗಳ ಹಿಂದಷ್ಟೇ ಯರೋಪಿಯನ್ ಚಾಂಪಿಯನ್‍ಶಿಪ್‍ನಲ್ಲಿ ಸೃಷ್ಟಿಸಿದ್ದ ವಿಶ್ವದಾಖಲೆಯನ್ನು ಇವರು ಅಳಿಸಿ ಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ