ನವದೆಹಲಿ, ಮಾ. 27- ಕ್ರಿಕೆಟ್ ಅಂಗಳದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಬಿಂಬಿತಗೊಂಡಿರುವ ಎಂ.ಎಸ್.ಧೋನಿ ಅವರು ಗೃಹ ನಿರ್ಮಾಣದಲ್ಲಿ ಪ್ರತಿಷ್ಠಿತ ಸಂಸ್ಥೆಯೆಂದು ಗುರುತಿಸಿಕೊಂಡಿರುವ ಅಮ್ರಾಪಾಲಿ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯು ಆಮ್ರಾಪಾಲಿ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದು , ಧೋನಿಗೆ ಸಲ್ಲಿಸಬೇಕಾಗಿರುವ 40 ಕೋಟಿ ರೂ.ಗಳ ಸಂಭಾವನೆಯನ್ನು ಇದುವರೆಗೂ ಸಂದಾಯ ಮಾಡದ ಕಾರಣ ಸುಪ್ರೀಂ ಮೊರೆ ಹೋಗಿದ್ದಾರೆ.
ಅಮ್ರಾಪಾಲಿ ಗ್ರೂಪ್ನವರ ಹೌಸಿಂಗ್ ಪ್ರಾಜೆಕ್ಟ್ನಿಂದ 2016ರಲ್ಲಿ ಧೋನಿ ಪ್ರಚಾರ ರಾಯಭಾರಿಯಿಂದ ಹೊರ ಗುಳಿದ ನಂತರವೂ ಸಂಸ್ಥೆಯು ಧೋನಿಗೂ ನೀಡಬೇಕಾಗಿದ್ದ 40 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡೇ ಬಂದಿತ್ತು.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿರುವ ಧೋನಿ ಆ ಸಮಯದಲ್ಲಿ ಫ್ಲಾಟ್ಗಳನ್ನು ಖರೀದಿಸಲು ಮುಂಗಡವಾಗಿ ಹಣಕೊಟ್ಟವರು ನನ್ನನ್ನು ಸಂಪರ್ಕಿಸಿ ಬಿಲ್ಡರ್ಗಳು ಫ್ಲಾಟ್ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸದೆ ನಮಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು.
ಅಮ್ರಾಪಾಲಿಯ ಸಫೇರ್ ಪ್ರಾಜೆಕ್ಟ್ ಮೂಲಕ ದೂರು ದಾಖಲಾದ ಹಿನ್ನೆಲೆಯಲ್ಲಿ ಇದೇ ವೇಳೆ ಸುಪ್ರೀಂಕೋರ್ಟ್ ಕೂಡ ಅಮ್ರಾಲಿ ಪಾಲ್ನವರು ಸಿದ್ಧಪಡಿಸಿದ್ದ 42000 ಫ್ಲಾಟ್ಗಳನ್ನು ಮಾರಾಟ ಮಾಡಬಾರದೆಂದು ಆದೇಶ ಹೊರಡಿಸಿತ್ತು.
ಕಳೆದ ತಿಂಗಳಷ್ಟೇ ಸುಪ್ರೀಂಕೋರ್ಟ್ ಈ ಸಂಸ್ಥೆಯ ಸಿಎಂಡಿ ಅನïಶರ್ಮಾ ಹಾಗೂ ಇಬ್ಬರು ನಿರ್ದೇಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದರಿಂದ ಪೊಲೀಸರ ಬಂಧನಕ್ಕೆ ಆದೇಶಿಸಿತ್ತು.
ವಂಚನೆ ಸಂಬಂಧ ಅಮ್ರಾಪಾಲಿಯ ಸಿಎಂಡಿ ಅನಿಲ್ಶರ್ಮಾಗೆ ಸೇರಿದ್ದ ದಕ್ಷಿಣ ದೆಹಲಿಯಲ್ಲಿದ್ದ ಬಂಗ್ಲೆಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅಲ್ಲದೆ ಇಬ್ಬರು ನಿರ್ದೇಶಕರ ಆಸ್ತಿಯನ್ನು ಜಫ್ತಿ ಮಾಡಿತ್ತು.
ಈಗ ಕೂಲ್ ಕ್ಯಾಪ್ಟನ್ ಧೋನಿ ತಮ್ಮ ತಾಳ್ಮೆಯನ್ನು ಕಳೆದುಕೊಂಡು ಅಮ್ರಾಪಾಲಿ ಸಂಸ್ಥೆಯ ವಿರುದ್ಧ 40 ಕೋಟಿ ರೂ.ಗಳ ವಂಚನೆಯ ಪ್ರಕರಣವನ್ನು ದಾಖಲಿಸಿರುವುದರಿಂದ ಅನಿಲ್ಶರ್ಮಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ.